ಹುಡುಗಿಗಾಗಿ ಭಯಾನಕ ಆಕ್ಸಿಡೆಂಟ್ -ಹತ್ಯೆಗೆ ಯತ್ನ: ಬೆಚ್ಚಿಬಿದ್ದ ಚಿಕ್ಕಮಗಳೂರು ನಿವಾಸಿಗಳು

ಚಿಕ್ಕಮಗಳೂರು: ಭಯಾನಕ ಆಕ್ಸಿಡೆಂಟ್ ಹಿಂದೆ ಹುಡುಗಿಗಾಗಿ ಸ್ನೇಹಿತನ ಹತ್ಯೆಗೆ ಸ್ಕೆಚ್ ಹಾಕಿರುವ ಪ್ರಕರಣ ಬಯಲಾಗಿದೆ. ಅದು ಆಕ್ಸಿಡೆಂಟ್ ಅಲ್ಲ ಹುಡುಗಿಗಾಗಿ ಸ್ನೇಹಿತನ ಹತ್ಯೆಗೆ ಸ್ಕೆಚ್​​ ಹಾಕಲಾಗಿತ್ತು ಎಂಬುದು ಬಯಲಾದ ಮೇಲೆ ಅಂಕಿತ್ ಎಂಬ ಯುವಕನ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ. ಸ್ನೇಹಿತ ನಕುಲ್ ಹತ್ಯೆಗೆ ಅಂಕಿತ್ ಪ್ಲಾನ್ ಮಾಡಿದ್ದ.

ಹುಡುಗಿಗಾಗಿ ಭಯಾನಕ ಆಕ್ಸಿಡೆಂಟ್ -ಹತ್ಯೆಗೆ ಯತ್ನ: ಬೆಚ್ಚಿಬಿದ್ದ ಚಿಕ್ಕಮಗಳೂರು ನಿವಾಸಿಗಳು
ಹುಡುಗಿಗಾಗಿ ಭಯಾನಕ ಆಕ್ಸಿಡೆಂಟ್-ಹತ್ಯೆಗೆ ಯತ್ನ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Aug 18, 2023 | 11:55 AM

ಚಿಕ್ಕಮಗಳೂರು, ಆಗಸ್ಟ್​ 18: ಭಯಾನಕ ಆಕ್ಸಿಡೆಂಟ್ ಹಿಂದೆ ಹುಡುಗಿಗಾಗಿ ಸ್ನೇಹಿತನ ಹತ್ಯೆಗೆ ಸ್ಕೆಚ್ ಹಾಕಿರುವ ಪ್ರಕರಣ ಬಯಲಾಗಿದೆ. ಬೈಕ್ ಗೆ ಕಾರು ಗುದ್ದಿಸಿ ಹತ್ಯೆಗೆ ಪ್ಲಾನ್ ಮಾಡಿದ್ದ ಕುಚುಕು ಸ್ನೇಹಿತರ (Friend) ನಡುವೆ ಕಲಹಕ್ಕೆ ಕಾರಣವಾಗಿದ್ದು ಗರ್ಲ್ ಫ್ರೆಂಡ್! (Girlfriend) ಮಧ್ಯರಾತ್ರಿ ಮಾತುಕತೆಗೆ ಕರೆಸಿ ಸ್ನೇಹಿತನ ಕಥೆ ಮುಗಿಸಲು ಸ್ಕೆಚ್ ಹಾಕಲಾಗಿತ್ತು. ಆಗಸ್ಟ್​ 14ರ ಮಧ್ಯರಾತ್ರಿ ಸ್ವಾತಂತ್ರ್ಯೋತ್ಸವ ಸಂಭ್ರಮ ನಡೆದಿದ್ದಾಗ ಇತ್ತ ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಚಿಕ್ಕಮಗಳೂರು ನಗರದ ಹೊರವಲಯದ ನರಿಗುಡ್ಡೇನಹಳ್ಳಿ ಸರ್ಕಲ್ ಬಳಿ ನಡೆದಿದ್ದ ಭೀಕರ ಆಕ್ಸಿಡೆಂಟ್ ಅದಾಗಿತ್ತು.

ಆದರೆ ಅದು ಆಕ್ಸಿಡೆಂಟ್ ಅಲ್ಲ ಹುಡುಗಿಗಾಗಿ ಸ್ನೇಹಿತನ ಹತ್ಯೆಗೆ ಸ್ಕೆಚ್​​ ಹಾಕಲಾಗಿತ್ತು ಎಂಬುದು ಬಯಲಾದ ಮೇಲೆ ಅಂಕಿತ್ ಎಂಬ ಯುವಕನ ವಿರುದ್ಧ ಚಿಕ್ಕಮಗಳೂರು (Chikkamagaluru) ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ. ಸ್ನೇಹಿತ ನಕುಲ್ ಹತ್ಯೆಗೆ ಅಂಕಿತ್ ಪ್ಲಾನ್ ಮಾಡಿದ್ದ.

Also Read: ಬನ್ನೇರುಘಟ್ಟ: ಅತ್ಯಾಚಾರ-ಹತ್ಯೆ ಪ್ರಕರಣದ ಒರ್ವ ಆರೋಪಿ ಕಾಲಿಗೆ ಜಿಗಣಿ ಇನ್ಸ್‌ಪೆಕ್ಟರ್​​​ ಗುಂಡಿಟ್ಟರು

ಅಂಕಿತ್ ತನ್ನ ಸ್ನೇಹಿತ ನಕುಲ್ ಬರುತ್ತಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಗೆ ಕಾರು ಗುದ್ದಿಸಿದ್ದ. ಗುದ್ದಿದ ಬಳಿಕ ಬೈಕ್ ಅನ್ನು ಕಾರು ನೂರು ಮೀ. ನಷ್ಟು‌ ದೂರ ಎಳೆದೊಯ್ದಿತ್ತು. ಸ್ಥಳೀಯರು ಕೂಗುತ್ತಿದ್ದಂತೆ ಅಂಕಿತ್ ಎಸ್ಕೇಪ್ ಆಗಿದ್ದ. ಅಂಕಿತ್, ನಕುಲ್ ಇಬ್ಬರೂ ಚಿಕ್ಕಮಗಳೂರಿನ ‌ಕಲ್ಯಾಣ ನಗರದ ನಿವಾಸಿಗಳು. ಗಂಭೀರವಾಗಿ ಗಾಯಗೊಂಡಿದ್ದ ನಕುಲ್ ಗೆ ಇದೀಗ ಮಲ್ಲೇಗೌಡ ಸರ್ಕಾರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದರೆ ಭಯಾನಕ ಆಕ್ಸಿಡೆಂಟ್-ಹತ್ಯೆ ಯತ್ನ ಘಟನೆಯಿಂದ ಚಿಕ್ಕಮಗಳೂರು ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ