ಭಕ್ತರ ವೇಷದಲ್ಲಿ ಬಂದು ಮಠದಲ್ಲಿದ್ದ ಫೋಟೋಗಳನ್ನು ಕಳ್ಳತನ ಮಾಡಲಾಗಿದೆ: ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರಶ್ರೀ
ಮುರುಘಾ ಮಠದಲ್ಲಿದ್ದ ಪೋಟೋಗಳನ್ನು ಉದ್ದೇಶ ಪೂರ್ವಕವಾಗಿ ಪಟ್ಟಭದ್ರ ಹಿತಾಸಕ್ತಿ ವಯ್ಯಕ್ತಿಗಳು ಕಳ್ಳತನ ಮಾಡಿದ್ದಾರೆ ಎಂದು ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರಶ್ರೀ ಶಂಕೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ ಪೋಟೋಗಳನ್ನು ಉದ್ದೇಶ ಪೂರ್ವಕವಾಗಿ ಪಟ್ಟಭದ್ರ ಹಿತಾಸಕ್ತಿ ವಯ್ಯಕ್ತಿಗಳು ಕಳ್ಳತನ ಮಾಡಿದ್ದಾರೆ ಎಂದು ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರಶ್ರೀ ಶಂಕೆ ವ್ಯಕ್ತಪಡಿಸಿದ್ದಾರೆ. ಮುರುಘಾ ಮಠದ ರಾಜಾಂಗಣದಲ್ಲಿದ್ದ ಗಣ್ಯರೊಂದಿಗೆ ತೆಗೆಸಿಕೊಂಡಿದ್ದ ಮುರುಘಾ ಶರಣರಿದ್ದ 47 ಪೋಟೋಗಳು ಕಳ್ಳತನವಾಗಿತ್ತು. ಈ ಕುರಿತು ಮಹಾಂತ ರುದ್ರೇಶ್ವರಶ್ರೀ ಮಾತನಾಡಿ ಭಕ್ತರ ವೇಷದಲ್ಲಿ ಬಂದು 47 ಫೋಟೋಗಳನ್ನು ಕಳ್ಳತನ ಮಾಡಿದ್ದಾರೆ. ಗಣ್ಯರ ಜೊತೆ ಮುರುಘಾ ಶರಣರು ಇರುವ ಫೋಟೋಗಳು ಕೂಡ ಕಳ್ಳತನವಾಗಿವೆ ಎಂದು ತಿಳಿಸಿದ್ದಾರೆ.
ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ ಫೋಟೋಗಳ ಕಳ್ಳತನ ಮಾಡಿದ್ದಾರೆ. ಗೊತ್ತಿರುವವರೇ ಮಠದ ಫೋಟೋಗಳ ಕಳ್ಳತನ ಮಾಡಿರಬಹುದು. ಎಸ್ಜೆಎಂ ಸಂಸ್ಥೆಯ ಕೆಲವು ನೌಕರರು ಭಾಗಿಯಾಗಿರಬಹುದು. ಈ ಬಗ್ಗೆ SJM ಕಾರ್ಯದರ್ಶಿ ಎಸ್.ಬಿ.ವಸ್ತ್ರದ ಮಠ ದೂರು ನೀಡಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಲ್ಲಿ ಅತ್ಯಮೂಲ್ಯ ವಸ್ತುಗಳು ಇವೆ. ಮಠಕ್ಕೆ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಮಹಾಂತ ರುದ್ರೇಶ್ವರಶ್ರೀ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ