ಚಿತ್ರದುರ್ಗ: ಟೈರ್​ ಸ್ಫೋಟಗೊಂಡು ಕಾರು ಪಲ್ಟಿ, ಇಬ್ಬರು ದುರ್ಮರಣ

ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಎಷ್ಟೇ ಸಂಚಾರ ನಿಯಮಗಳನ್ನು ಅಳವಡಿಸಿದರೂ ಕೂಡ ಅಪಘಾತ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದರಂತೆ ಇದೀಗ ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟೈಯರ್ ಬ್ಲಾಸ್ಟ್​ ಆಗಿ ಪಲ್ಟಿಯಾಗಿದೆ.

ಚಿತ್ರದುರ್ಗ: ಟೈರ್​ ಸ್ಫೋಟಗೊಂಡು ಕಾರು ಪಲ್ಟಿ, ಇಬ್ಬರು ದುರ್ಮರಣ
ಚಿತ್ರದುರ್ಗ ಬಳಿ ಪಲ್ಟಿಯಾದ ಕಾರು
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 06, 2024 | 4:35 PM

ಚಿತ್ರದುರ್ಗ, ಫೆ.06:  ಟೈರ್​ ಸ್ಫೋಟಗೊಂಡು ಕಾರು ಪಲ್ಟಿಯಾದ ಘಟನೆ ಚಿತ್ರದುರ್ಗ(Chitradurga) ತಾಲೂಕಿನ ಕಾತ್ರಾಳ್ ಕೆರೆ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮುತ್ತುಸ್ವಾಮಿ(69) ಹಾಗೂ ಪಾಂಡುರಂಗ(32) ಮೃತ ರ್ದುದೈವಿಗಳು. ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಈ ಕುರಿತು ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾಲುವೆಗೆ ಬಿದ್ದ ಡ್ರೈವಿಂಗ್​ ಸ್ಕೂಲ್​ ಕಾರು

ಮಂಡ್ಯ: ಚಾಮುಂಡೇಶ್ವರಿ ನಗರದ ಬಳಿಯ ಕಾಲುವೆಗೆ ಡ್ರೈವಿಂಗ್​ ಸ್ಕೂಲ್​ ಕಾರೊಂದು ನಿಯಂತ್ರಣ ತಪ್ಪಿ ಬಿದ್ದ ಘಟನೆ ನಡೆದಿದೆ. ಡ್ರೈವಿಂಗ್ ಕಲಿಯುತ್ತಿದ್ದ ಯುವತಿ ಹಾಗೂ ತರಬೇತುದಾರ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿತಿನ್ ಎಂಬುವವರ ಡ್ರೈವಿಂಗ್ ಸ್ಕೂಲ್​ಗೆ ಸೇರಿದ ಕಾರು ಇದಾಗಿದ್ದು, ಎಂದಿನಂತೆ ತರಭೇತಿ ನೀಡುವಾಗ ಈ ಘಟನೆ ನಡೆದಿದೆ. ಈ ಕುರಿತು ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಅಗ್ನಿ ಅವಘಡ, ಹೊತ್ತಿ ಉರಿದ ಮೂರು ಅಂತಸ್ತಿನ ಕಟ್ಟಡ

ತೋಟಕ್ಕೆ ಬಿದ್ದ ಆಕಸ್ಮಿಕ ಬೆಂಕಿ; ಅಪಾರ ಪ್ರಮಾಣದ ಬೆಳೆ ನಾಶ

ಮಂಡ್ಯ: ರೈತರಿಗೆ ಗೋಳು ತಪ್ಪುತ್ತಿಲ್ಲ, ಒಂದಲ್ಲ ಒಂದು ರೀತಿಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಂತೆ ಇದೀಗ ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದಲ್ಲಿ ರೈತರೊಬ್ಬರ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ತೆಂಗು, ಅಡಕೆ ಮರಗಳು, ಪೈಪ್​ಗಳು ಸೇರಿದಂತೆ ಇನ್ನಿತರ ಕೃಷಿ ಉಪಕರಣಗಳು ಬೆಂಕಿಗಾಹುತಿಯಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ, ಬೆಂಕಿ‌ ನಂದಿಸಿದ್ದಾರೆ. ಗ್ರಾಮದ ರಾಮಣ್ಣ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು, ಹಲಗೂರು ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Tue, 6 February 24