AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ವರ್ಷದಿಂದ ಒಂದೇ ರೂಮಿನಲ್ಲಿದ್ದು ಈಗ ನಾನು ಬೇಡ ಅಂತಿದ್ದಾಳೆ: ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಿಯಕರ

2009ರಿಂದ ಪ್ರೀತಿಸಿ, ಆರು ವರ್ಷ ಲಿವ್-ಇನ್ ಸಂಬಂಧದಲ್ಲಿದ್ದ ಸಿವಿಲ್ ಇಂಜಿನಿಯರ್ ರವಿಗೆ ಪ್ರೇಯಸಿಯಿಂದ ಮೋಸ. ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಯುವತಿ ಬೇರೊಬ್ಬರನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಳೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ರವಿ, ಮಹಿಳಾ ಸಂಘಟನೆಗಳು ಪುರುಷರ ಅನ್ಯಾಯಕ್ಕೂ ಧ್ವನಿ ಎತ್ತಬೇಕೆಂದು ಮನವಿ ಮಾಡಿದ್ದಾರೆ.

6 ವರ್ಷದಿಂದ ಒಂದೇ ರೂಮಿನಲ್ಲಿದ್ದು ಈಗ ನಾನು ಬೇಡ ಅಂತಿದ್ದಾಳೆ: ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಿಯಕರ
ವಿಡಿಯೋ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Feb 07, 2026 | 6:11 PM

Share

ಬೆಂಗಳೂರು, ಫೆ.7: ರಾಜ್ಯದಲ್ಲಿ ಹುಡುಗರು ಹುಡುಗಿಯರಿಂದ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇದೀಗ 2009ರಿಂದ ಪ್ರೀತಿಸಿ, ಆರು ವರ್ಷಗಳ ಕಾಲ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದ ಯುವತಿಯೊಬ್ಬಳು ಈಗ ಬೇರೊಬ್ಬರನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಳೆ ಎಂದು ಆರೋಪಿಸಿ ಸಿವಿಲ್ ಇಂಜಿನಿಯರ್ ರವಿ (relationship betrayal case) ಎಂಬುವವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಯುವತಿ ಮದುವೆಗೆ ಸಿದ್ಧತೆ ನಡೆಸಿದ್ದಾಳೆ, ನನಗೆ ಅನ್ಯಾಯವಾಗಿದೆ ಎಂದು ರವಿ ದೂರಿದ್ದಾರೆ. ರವಿ ಅವರು ಈ ಯುವತಿಯನ್ನು 2009 ರಿಂದ ಪ್ರೀತಿಸುತ್ತಿದ್ದರು. ಇಬ್ಬರೂ 2014ರವರೆಗೆ ಒಂದೇ ಕಾಲೇಜಿನಲ್ಲಿ ಓದಿ, ಎಂ.ಟೆಕ್ ಕೂಡಾ ಒಂದೇ ಕಾಲೇಜಿನಲ್ಲಿ ಪೂರ್ಣಗೊಳಿಸಿ, ನಂತರ ಒಟ್ಟಿಗೆ ಕೆಲಸ ಮಾಡಿದ್ದಾರೆ. 2022ರವರೆಗೂ ಬೆಂಗಳೂರಿನ ದೇವಿ ನಗರದಲ್ಲಿ ಆರು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದರು. 2022ರಲ್ಲಿ ಯುವತಿ ತಮ್ಮ ಮನೆಯಲ್ಲಿ ಮದುವೆಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದಾಳೆ. ರವಿ ಅವರ ಕುಟುಂಬದವರು ಕೂಡ ಮದುವೆ ಮಾತುಕತೆ ನಡೆಸಿದ್ದಾರೆ. ಆದರೆ, ಯುವತಿಯ ತಾಯಿ ಅನಾರೋಗ್ಯದ ಕಾರಣವನ್ನು ನೀಡಿ, ಮದುವೆಯನ್ನು ಮುಂದೂಡಿದ್ದರು. ಆಕೆಗಾಗಿ ಒಂದು ವರ್ಷಗಳಿಂದ ಕಾಯುತ್ತಿದ್ದೇನೆ ಎಂದು ರವಿ ಅವರು ಹೇಳಿದ್ದಾರೆ.

ಯುವತಿಗೆ ಸೆಪ್ಟೆಂಬರ್ 25ರಂದು ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆದಿದೆ. ಕನಕರಾಜು ಎಂಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆದಿದ್ದು, ರವಿ ಅವರು ಯುವತಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಮತ್ತು ಆತನ ತಂದೆಯ ಬಳಿ ನಮ್ಮ ಸಂಬಂಧದ ಬಗ್ಗೆ ತಿಳಿಸಿದ್ದೇನೆ. ಆದರೆ, ಅವರು ರಿಜಿಸ್ಟರ್ ಮ್ಯಾರೇಜ್ ಆಗುವುದಾಗಿ ತಿಳಿಸಿದ್ದಾರೆ ಎಂದು ರವಿ ಹೇಳಿದ್ದಾರೆ. ರವಿ ಅವರು ತಮ್ಮ ಪ್ರೇಯಸಿಯ ವಿರುದ್ಧ ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಸೆಪ್ಟೆಂಬರ್ 28ರಂದು ಅದರ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್​ ಹೇಳಿದೆ. ಇನ್ನು ಯುವತಿ ಹಾಗೂ ಹೊಸ ಹುಡುಗನಿಗೂ ಸಮನ್ಸ್ ಜಾರಿಯಾಗಿದೆ. ಆದರೆ, ಕೋರ್ಟ್ ತೀರ್ಪು ಹೊರಬೀಳುವ ಮುನ್ನವೇ ಯುವತಿ ಸೆಪ್ಟೆಂಬರ್ 20ರಂದು ತಿರುಮಲ ಚೌಟ್ರಿಯಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಕೋರ್ಟ್​ ವಿಚಾರಣೆಗೂ ಮುನ್ನ ಮದುವೆಯಾದರೆ ನಾನು ಸಾಯಬೇಕಾಗುತ್ತದೆ ಎಂದು ರವಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಿಲ್ಲರ್ ಬಿಎಂಟಿಸಿಗೆ ಇನ್ನೆಷ್ಟು ಬಲಿ ಬೇಕು?: ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್

ವಿಡಿಯೋ ಇಲ್ಲಿದೆ ನೋಡಿ:

ಯುವತಿಯ ತಾಯಿಗೆ 1.30 ಲಕ್ಷ ರೂಪಾಯಿ ನೀಡಿದ್ದಲ್ಲದೆ, ಸುದರ್ಶನ್ ಜ್ಯುವೆಲರ್ಸ್‌ನಲ್ಲಿ ಯುವತಿಗೆ ನೆಕ್ಲೇಸ್ ಕೂಡಾ ಕೊಡಿಸಿದ್ದೇನೆ ಎಂದು ರವಿ ಆರೋಪಿಸಿದ್ದಾರೆ. ಈ ಎಲ್ಲಾ ಖರ್ಚುಗಳ ಬಗ್ಗೆ ಸಾಕ್ಷಿಯನ್ನು ನೀಡುತ್ತೇನೆ. “ಒಂದು ಹುಡುಗಿಗೆ ಅನ್ಯಾಯವಾದರೆ ಮಹಿಳಾ ಸಂಘಟನೆಗಳು ಬೆಂಬಲಕ್ಕೆ ನಿಲ್ಲುತ್ತವೆ. ಆದರೆ, ನನಗೆ ಯಾಕಿಲ್ಲ?” ಎಂದು ರವಿ ಪ್ರಶ್ನಿಸಿದ್ದಾರೆ. ನ್ಯಾಯಕ್ಕಾಗಿ ಕರ್ನಾಟಕದ ಯುವಕರಲ್ಲಿ ಮತ್ತು ಸಂಘಟನೆಗಳಲ್ಲಿ ಮನವಿ ಮಾಡಿರುವ ರವಿ, “ನನಗಾದ ಅನ್ಯಾಯಕ್ಕೆ ದಯವಿಟ್ಟು ನ್ಯಾಯ ಕೊಡಿಸಿ” ಎಂದು ಕೇಳಿಕೊಂಡಿದ್ದಾರೆ. ಯುವತಿಯು ಹಿಂದೆ ತಮ್ಮ ಮನೆಯಲ್ಲಿ ನಡೆದ ನಿಶ್ಚಿತಾರ್ಥವನ್ನು ತಾವೇ ಇಷ್ಟಪಡುವುದಾಗಿ ಹೇಳಿ ರದ್ದುಪಡಿಸಿದ್ದರು. ಆದರೆ, ಈಗ ಯಾವುದೇ ಕಾರಣ ನೀಡದೆ ಸಂಬಂಧವನ್ನು ಮುರಿದಿರುವುದು ತುಂಬಾ ನೋವುಂಟು ಮಾಡಿದೆ ಎಂದು ರವಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:10 pm, Sat, 7 February 26