ಮತ್ತೊಮ್ಮೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಿ ಸಚಿವ ಸಂಪುಟ ರಚಿಸುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ

Basavaraj Bommai: ಹೈಕಮಾಂಡ್​ನಿಂದ ಸಂದೇಶ ಬಂದ ಬಳಿಕ ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಿ ರಾಜ್ಯದ ಸಚಿವ ಸಂಪುಟವನ್ನು ರಚಿಸುತ್ತೇನೆ ಎಂದು ಈಮೂಲಕ ಅವರು ಸ್ಪಷ್ಟ ಸಂದೇಶವನ್ನು ಆಕಾಂಕ್ಷಿಗಳಿಗೆ ರವಾನಿಸಿದಂತಾಗಿದೆ.

ಮತ್ತೊಮ್ಮೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಿ ಸಚಿವ ಸಂಪುಟ ರಚಿಸುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: guruganesh bhat

Updated on:Jul 31, 2021 | 5:51 PM

ಬೆಂಗಳೂರು: ಕರ್ನಾಟಕದ ಸಂಪುಟ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು (JP Nadda) ಮತ್ತೊಮ್ಮೆ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಹೈಕಮಾಂಡ್​ನಿಂದ ಸಂದೇಶ ಬಂದ ಬಳಿಕ ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಿ ರಾಜ್ಯದ ಸಚಿವ ಸಂಪುಟವನ್ನು ರಚಿಸುತ್ತೇನೆ ಎಂದು ಈಮೂಲಕ ಅವರು ಸ್ಪಷ್ಟ ಸಂದೇಶವನ್ನು ಆಕಾಂಕ್ಷಿಗಳಿಗೆ ರವಾನಿಸಿದಂತಾಗಿದೆ.

ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿಎಂ‌ ಸಂಪುಟ ತಂಡ ಕಟ್ಟಲು ಹರಸಹಾಸ ಮಾಡ್ತಿದ್ದಾರೆ. ಸಿಎಂ ಬೊಮ್ಮಾಯಿ ದೆಹಲಿ ಭೇಟಿ ವೇಳೆ‌ ಸಂಪುಟ ರಚನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಬಳಿ ಚರ್ಚೆ ನಡೆಸಿದ್ದಾರೆ. ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಮನವಿ ಮಾಡಿದ್ದಾರೆ. ತ್ವರಿತವಾಗಿ ಸಂಪುಟ ರಚನೆ ಮಾಡಲು ಹೈಕಮಾಂಡ್ ಉತ್ಸಾಹ ತೋರಿದ್ದು ಮುಂದಿನ ಬುಧವಾರ ಅಥವಾ ಗುರುವಾರ ಹೊಸ ಸಚಿವರು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಒಂದೇ ಹಂತದಲ್ಲಿ ಸಂಪುಟ‌ ರಚನೆ ಮಾಡಲು ಹೈಕಮಾಂಡ್ ಪ್ಲಾನ್ ಯಡಿಯೂರಪ್ಪನವರ ನೇತೃತ್ವ ಇಲ್ಲದ ಬಿಜೆಪಿ ಸರಕಾರದಲ್ಲಿ ಸಚಿವರನ್ನು ನೇಮಿಸುವ ವಿಚಾರವಾಗಿ ಹೈಕಮಾಂಡ್ ಹೆಚ್ಚು ಪ್ರಭಾವ ಬೀರಲಿದೆ. ಒಂದೇ ಹಂತದಲ್ಲಿ ಸಂಪುಟ ರಚನೆ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಉಳಿದಿದ್ದು, ಒಂದೇ ಹಂತದಲ್ಲಿ ಎನೆರ್ಜೆಟಿಕ್ ಟೀಂ ಕಟ್ಟಿ ಜನರಲ್ಲಿ ಸರಕಾರದ ಬಗ್ಗೆ ಒಳ್ಳೆ ಅಭಿಪ್ರಾಯದ ಮೂಡಿಸಲು ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ. ವಲಸೆ ಬಂದವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು ಸೇರಿದಂತೆ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳ‌ ಬೇಡಿಕೆ ಈಡೇರಿಸುವುದು ಕಷ್ಟವಾದ್ರೆ ಎರಡು ಹಂತದಲ್ಲಿ ರಚನೆ ಮಾಡಲು ಹೈಕಮಾಂಡ್ ಯೋಚಿಸಿದೆ.

ಇದನ್ನೂ ಓದಿ: 

ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಉಪವಾಸ ಬೇಕಾದ್ರೂ ಮಾಡಲಿ, ಇಲ್ಲ ಊಟ ಮಾಡಲಿ; ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ: ಅಣ್ಣಾಮಲೈಗೆ ಸಿಎಂ ಬೊಮ್ಮಾಯಿ ಟಾಂಗ್

(CM Basavaraj Bommai says I will go back to Delhi and discuss with the High Command to create a cabinet)

Published On - 5:42 pm, Sat, 31 July 21