Sign In

By signing in or creating an account, you agree with Associated Broadcasting Company's Terms & Conditions and Privacy Policy.

RSSನಿಂದಲೇ ಅಪರಾಧ ಪ್ರಕರಣಗಳು ಹೆಚ್ಚಳ ಎಂದ ಸಿದ್ದರಾಮಯ್ಯ ವಿರುದ್ಧ ಕೋರ್ಟ್​ನಲ್ಲಿ ಖಾಸಗಿ ದೂರು

‘ಆರ್‌ಎಸ್‌ಎಸ್‌ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆರ್‌ಎಸ್‌ಎಸ್‌ನವರ ದ್ವೇಷ ರಾಜಕಾರಣ, ಹಿಂಸಾ ರಾಜಕಾರಣವೇ ಗಲಭೆ ಹಾಗೂ ಅಪರಾಧಗಳಿಗೆ ಕಾರಣ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್​ ಮೇಲಿನ ಚರ್ಚೆ ವೇಳೆ ಸದನದೊಳಗೆ ಗಂಭೀರ ಆರೋಪ ಮಾಡಿದ್ದರು. ಇದೀಗ ಇದು ಅವರಿಗೆ ಸಂಕಷ್ಟ ತಂದಿಟ್ಟಿದೆ.

RSSನಿಂದಲೇ ಅಪರಾಧ ಪ್ರಕರಣಗಳು ಹೆಚ್ಚಳ ಎಂದ ಸಿದ್ದರಾಮಯ್ಯ ವಿರುದ್ಧ ಕೋರ್ಟ್​ನಲ್ಲಿ ಖಾಸಗಿ ದೂರು
ಸಿಎಂ ಸಿದ್ದರಾಮಯ್ಯ
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on: Mar 19, 2025 | 7:21 PM

ಬೆಂಗಳೂರು, (ಮಾರ್ಚ್ 19): ಆರ್‌ಎಸ್‌ಎಸ್‌ನಿಂದಲೇ  (RSS) ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆರೋಪ ಮಾಡಿದ್ದು, ಈ ಹೇಳಿಕೆ ವಿರುದ್ಧ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ (BJP) ಸಿಡಿದೆದಿದ್ದು, ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿವೆ. ಸಾಲದಕ್ಕೆ ಇದೀಗ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಖಾಸಗಿ ದೂರು ದಾಖಲಿಸಲಾಗಿದೆ. ಕಿರಣ್.ಎಸ್ ಎಂಬುವರು ಖಾಸಗಿ ದೂರು ಸಲ್ಲಿಸಿದ್ದು, ಬಿಎನ್ಎಸ್ ಸೆಕ್ಷನ್ 299,352,356(2)ಅಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ.

ಆರ್​ಎಸ್​ಎಸ್ ಬಗ್ಗೆ ಸಿಎಂ ಹೇಳಿದ್ದನು?

ಮೊದಲಿಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬ ರಾಜ್ಯಪಾಲರ ಮಾತು ಸರಿಯಿದೆ. ಕಳೆದ ಸರ್ಕಾರದ ಅವಧಿಗಿಂತ ಕೊಲೆ, ಕೊಲೆ ಯತ್ನ, ದರೋಡೆ, ಕಳ್ಳತನ, ಅತ್ಯಾಚಾರ ಎಲ್ಲಾ ಪ್ರಕರಣಗಳೂ ನಮ್ಮ ಸರ್ಕಾರದ ಅವಧಿಯಲ್ಲಿ ಕಡಿಮೆಯಾಗಿವೆ ಎಂದು 2022 ಹಾಗೂ 2024 ನೇ ಸಾಲಿನ ಅಪರಾಧ ಪ್ರಕರಣಗಳನ್ನು ಅಂಕಿ-ಅಂಶಗಳ ಸಹಿತ ಬಿಚ್ಚಿಟ್ಟರು. ಅಲ್ಲದೆ ಮಂಗಳೂರಿನಲ್ಲಿ 75 ಕೋಟಿ ರು. ಡ್ರಗ್ಸ್‌ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದೇವೆ. ನೀವೇ ನಮ್ಮ ಪೊಲೀಸರಿಗೆ ಅಭಿನಂದನೆ ಹೇಳಿದ್ದೀರಿ. ನಾವು ಅಧಿಕಾರಕ್ಕೆ ಬಂದ ಮೇಲೆ ಅಪರಾಧಗಳನ್ನು ಎಷ್ಟು ತಗ್ಗಿಸಲು ಸಾಧ್ಯವೋ ಅಷ್ಟು ಮಾಡಿದ್ದೇವೆ. ಹಾಗಂತ ನಮಗಿನ್ನೂ ತೃಪ್ತಿಯಾಗಿಲ್ಲ. ಇನ್ನೂ ಇಳಿಕೆ ಮಾಡುವ ಉದ್ದೇಶವಿದೆ. ಆದರೆ ಅಪರಾಧಗಳನ್ನು ಮಾಡುವುದೇ ನೀವು. ನಿಮ್ಮ ಆರ್‌ಎಸ್‌ಎಸ್‌ನವರಿಂದಲೇ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದರು.

‘ಆರ್‌ಎಸ್‌ಎಸ್‌ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆರ್‌ಎಸ್‌ಎಸ್‌ನವರ ದ್ವೇಷ ರಾಜಕಾರಣ, ಹಿಂಸಾ ರಾಜಕಾರಣವೇ ಗಲಭೆ ಹಾಗೂ ಅಪರಾಧಗಳಿಗೆ ಕಾರಣ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಂಭೀರ ಆರೋಪವು ಸೋಮವಾರ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ಅಲ್ಲದೇ ಆರ್‌ಎಸ್‌ಎಸ್‌ ಕುರಿತ ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು.

ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ‘ನನ್ನ ಮಾತಿಗೆ ನಾನು ಬದ್ಧ. ಆರ್‌ಎಸ್‌ಎಸ್‌ನವರಿಗೆ ಹೆದರುವ ಪ್ರಶ್ನೆಯೇ ಇಲ್ಲ. ಅವರನ್ನು ಎದುರಿಸಲು ಸಿದ್ಧ’ ಎಂದು ಸವಾಲು ಹಾಕಿದ್ದರು. ಇದು ಬಿಜೆಪಿ ನಾಯಕರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿಯಿತು. ಮುಖ್ಯಮಂತ್ರಿಗಳಿಗೆ ವಯಸ್ಸಾಗಿದೆ. ಹೀಗಾಗಿ ನೆನಪಿನ ಶಕ್ತಿ ಕಳೆದುಕೊಂಡು ಮಾತನಾಡಿದ್ದಾರೆ. ಅವರ ಹೇಳಿಕೆ ಕಡತದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಕಾಂಗ್ರೆಸ್‌ ಪಾಕಿಸ್ತಾನ ಏಜೆಂಟ್‌, ಜೈ ಶ್ರೀರಾಮ್‌, ಆರ್‌ಎಸ್‌ಎಸ್‌ ಜಿಂದಾಬಾದ್‌ ಎಂದು ಘೋಷಣೆಗಳನ್ನು ಕೂಗಿದ್ದರು.

ಇದರಿಂದ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಗಿತ್ತು. ಬಳಿಕವೂ ಜಗ್ಗದ ಸಿದ್ದರಾಮಯ್ಯ ಅವರು, ‘ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್‌ ಕುರಿತ ಹೇಳಿಕೆ ಹಿಂಪಡೆಯುವುದಿಲ್ಲ. ನಾನು ಇರುವುದನ್ನೇ ಹೇಳಿದ್ದೇನೆ’ ಎಂದು ಪಟ್ಟು ಹಿಡಿದ ಕಾರಣ ಮತ್ತೊಮ್ಮೆ ಕಲಾಪ ಮುಂದೂಡಿ ಸಂಧಾನಸಭೆ ನಡೆಸಲಾಗಿತ್ತು. ನಂತರ ಸ್ಪೀಕರ್‌ ಯು.ಟಿ. ಖಾದರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್‌ಎಸ್‌ಎಸ್‌ ಕುರಿತ ಹೇಳಿಕೆ ಹಾಗೂ ಕಾಂಗ್ರೆಸ್‌ ಪಾಕಿಸ್ತಾನ್‌ ಏಜೆಂಟ್‌ ಎಂಬ ಪದಗಳನ್ನು ಕಡತದಿಂದ ತೆಗೆಯುವುದಾಗಿ ಹೇಳಿ ಕಲಾಪ ಸುಗಮವಾಗಿ ನಡೆಸಲು ಸಹಕರಿಸುವಂತೆ ಕೋರಿದ್ದರು. ಇದರಿಂದ ವಿವಾದ ತಣ್ಣಗಾಗಿತ್ತು.

ವಿಧಾನಸಭೆ ಕಲಾಪದಲ್ಲಿ ಏನೋ ತಣ್ಣಗಾಗಿದೆ. ಆದರೆ, ಹೊರಗಡೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರೆಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ಫಲಾನುಭವಿಗಳು ಬಡವರಾದರೇನು, ಅವರಿಗೂ ಕಮಿಟ್ಮೆಂಟ್​ಗಳಿರುತ್ತವೆ: ಸರವಣ
ಫಲಾನುಭವಿಗಳು ಬಡವರಾದರೇನು, ಅವರಿಗೂ ಕಮಿಟ್ಮೆಂಟ್​ಗಳಿರುತ್ತವೆ: ಸರವಣ
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ