ಬಾಲಕೋಟೆಯಲ್ಲಿ ಮತ್ತೆ ಮುನ್ನಲೆಗೆ ಬಂದ ಶಿವಾಜಿ ಪ್ರತಿಮೆ ವಿವಾದ

ಬಾಗಲಕೋಟೆಯಲ್ಲಿ ಇಷ್ಟು ದಿನ ಸುಮ್ಮನಿದ್ದ ಶಿವಾಜಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಸದಸ್ಯರು, ಈಗ ಅದೇ ಪ್ರತಿಮೆಯನ್ನು ಅದೇ ಜಾಗದಲ್ಲಿ ಕೂರಿಸಲು ಮುಂದಾಗಿದ್ದಾರೆ‌. ಆದರೆ ಅನುಮತಿ ಇಲ್ಲ ನಾವು ಕೂರಿಸಲು ಅನುಮತಿ ಕೊಡೋದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಆಗಸ್ಟ್ 25 ರಂದು ಅದೇ ಜಾಗದಲ್ಲಿ ಶಿವಾಜಿ ಪ್ರತಿಮೆ‌ ಪ್ರತಿಷ್ಠಾಪನೆ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದಾರೆ.

ಬಾಲಕೋಟೆಯಲ್ಲಿ ಮತ್ತೆ ಮುನ್ನಲೆಗೆ ಬಂದ ಶಿವಾಜಿ ಪ್ರತಿಮೆ ವಿವಾದ
ಬಾಲಕೋಟೆಯಲ್ಲಿ ಮತ್ತೆ ಮುನ್ನಲೆಗೆ ಬಂದ ಶಿವಾಜಿ ಪ್ರತಿಮೆ ವಿವಾದ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 23, 2024 | 10:37 PM

ಬಾಗಲಕೋಟೆ, ಆಗಸ್ಟ್​ 23: ನಗರದಲ್ಲಿ ಕಳೆದ ಒಂದು ವರ್ಷದ ಹಿಂದೆ ಶಿವಾಜಿ ಪ್ರತಿಮೆ (Shivaji statue) ವಿವಾದ ಶುರುವಾಗಿತ್ತು. ರಾತ್ರೋರಾತ್ರಿ ಶಿವಾಜಿ ಪ್ರತಿಮೆ ಕೂರಿಸಿದ್ದನ್ನು ಪೊಲೀಸರು ಅನುಮತಿ ಇಲ್ಲ ಅಂತ ತೆರವು ಮಾಡಿದ್ದರು. ಈ ವೇಳೆ ಗದ್ದಲ, ಪ್ರತಿಭಟನೆ ನಡೆದಿದ್ದರು. ಈಗ ಮತ್ತೆ ಪ್ರತಿಮೆ ಕೂರಿಸೋದಕ್ಕೆ ಮುಂದಾಗಿದ್ದು ಮತ್ತೆ ವಿವಾದದ ಹೊಗೆಯಾಡುತ್ತಿದೆ.

ಛತ್ರಪತಿ ಶಿವಾಜಿ ದೇಶ ಕಂಡ ಮಹಾನ್ ಶೂರ. ಇಂತಹ ‌ಮಹಾನ್ ವೀರನ ಪ್ರತಿಮೆ ಕೂರಿಸುವ ಕಾಲ ಬಾಗಲಕೋಟೆಯಲ್ಲಿ ಇಂದಿಗೂ ಕೂಡಿ ಬರುತ್ತಿಲ್ಲ. ಕಳೆದ ವರ್ಷ ಇದೆ ಶಿವಾಜಿ ಪ್ರತಿಮೆಯನ್ನು ಕಾಂಚನ ಪಾರ್ಕ್‌ ಬಳಿಯ ಜಾಗದಲ್ಲಿ ರಾತ್ರೋರಾತ್ರಿ ಅಪರಿಚಿತರು ಕೂರಿಸಿದ್ದರು. ಇದನ್ನು ತೆರವುಗೊಳಿಸಲು ಪೊಲೀಸರು ಮುಂದಾದಾಗ ಹಿಂದು ಹಾಗೂ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೊನೆಗೂ ಪೊಲೀಸರು ಪ್ರತಿಮೆಯನ್ನು ತೆರವುಗೊಳಿಸಿದ್ದರು.

ಇದನ್ನೂ ಓದಿ: ಪ್ರಾಸಿಕ್ಯೂಷನ್​ ಭೀತಿ: ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ಇಷ್ಟು ದಿನ ಸುಮ್ಮನಿದ್ದ, ಶಿವಾಜಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಸದಸ್ಯರು, ಈಗ ಅದೇ ಪ್ರತಿಮೆಯನ್ನು ಅದೇ ಜಾಗದಲ್ಲಿ ಕೂರಿಸಲು ಮುಂದಾಗಿದ್ದಾರೆ‌. ಆದರೆ ಅನುಮತಿ ಇಲ್ಲ ನಾವು ಕೂರಿಸಲು ಅನುಮತಿ ಕೊಡೋದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಕಳೆದ ವರ್ಷ ಪ್ರತಿಮೆ ತೆರವುಗೊಳಿಸುವಾಗ ಬಾರಿ ಹೈಡ್ರಾಮಾ ನಡೆದಿತ್ತು. ಹಿಂದು ಕಾರ್ಯಕರ್ತರು, ಶಿವಾಜಿ ಪ್ರತಿಮೆ ಪ್ರತಿಷ್ಠಾಪನಾ ಸದಸ್ಯರು ಬಾರಿ ವಿರೋಧ ಮಾಡಿದ್ದರು. ಈ ವೇಳೆ ಪೊಲೀಸರು ಖಾಕಿ ಸರ್ಪಗಾವಲಿನ ಮೂಲಕ ಪ್ರತಿಮೆ ತೆರವುಗೊಳಿಸಿದ್ದರು. ಅಂದು ಇದರ ಮುಂದಾಳತ್ವವನ್ನು ನಾರಾಯಣಸಾ ಬಾಂಡಗೆ ವಹಿಸಿಕೊಂಡಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಅಮರ ಈ ಹಲಗಲಿ ಬೇಡರು; ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಇದೀಗ‌ ಮತ್ತೆ ಅದೇ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆಗಸ್ಟ್ 25 ರಂದು ಅದೇ ಜಾಗದಲ್ಲಿ ಶಿವಾಜಿ ಪ್ರತಿಮೆ‌ ಪ್ರತಿಷ್ಠಾಪನೆ ಮಾಡಿಯೆ ತೀರುತ್ತೇವೆ. ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ, ಬಾಗಲಕೋಟೆ ಶಾಸಕ ಎಚ್ ವೈ ಮೇಟಿ ಅವರಿಂದಲೇ ಪ್ರತಿಮೆ ಅನಾವರಣಗೊಳಿಸುತ್ತೇವೆ. ಮುಂದೆ ಸಿಎಂ ಅವರನ್ನು ಕರೆತಂದು ದೊಡ್ಡದಾಗಿ ಲೋಕಾರ್ಪಣೆ ಮಾಡುತ್ತೇವೆ ಅಂತಿದ್ದಾರೆ.

ಪೊಲೀಸರು ಅನುಮತಿ ಇರದೆ ಪ್ರತಿಮೆ ಕೂರಿಸಲು ಬಿಡೋದಿಲ್ಲ ಅಂತ ಹೇಳ್ತಿದ್ದಾರೆ. ಸದಸ್ಯರು ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿಯೇ ತೀರುತ್ತೇವೆ ಅಂತಿದ್ದಾರೆ. ಇಲ್ಲಿ ಯಾರ ಕೈ ಮೇಲಾಗುತ್ತೊ ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:33 pm, Fri, 23 August 24

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್