Covid 19 Guidelines: ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ; ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಕೋವಿಡ್ 19 ಹೊಸ ಮಾರ್ಗಸೂಚಿ:ರಾಜ್ಯದಲ್ಲಿ ಕಳೆದ 10 ದಿನಗಳಿಂದ ನಿರಂತರ ಕೊರೊನಾ ಸೋಂಕು ಏರಿಕೆ ಹಿನ್ನಲೆಯಲ್ಲಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು.
ಬೆಂಗಳೂರು: ರಾಜ್ಯದಲ್ಲಿ ಕಳೆದ 10 ದಿನಗಳಿಂದ ನಿರಂತರ ಕೊರೊನಾ (Covid) ಸೋಂಕು ಏರಿಕೆ ಹಿನ್ನಲೆಯಲ್ಲಿ ರಾಜ್ಯ ಸರಕಾರ (State Government) ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾಸ್ಕ್, (Mask) ಸಾಮಾಜಿಕ ಅಂತರ (Social Distance) ಕಡ್ಡಾಯವಾಗಿ ಪಾಲಿಸಬೇಕು. ಸ್ವಂತ ಅಥವಾ ಯಾವುದೇ ವಾಹನದಲ್ಲಿದ್ದರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮುಂಜಾಗ್ರತಾ ಕ್ರಮವಾಗಿ ಕೊವಿಡ್ ಲಸಿಕೆ ಪಡೆಯಬೇಕು. ನಿಯಮಗಳ ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಪಿಂಗ್ ಮಾಲ್, ಪಬ್, ರೆಸ್ಟೋರೆಂಟ್, ಕಚೇರಿಗಳು, ಹೋಟೆಲ್, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆದೇಶ ಹೊರಡಿಸಿದೆ.
ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.#COVID19 #Karnataka pic.twitter.com/KKZ4efJi28
— Dr Sudhakar K (@mla_sudhakar) June 10, 2022
ಮಾಸ್ಕ್ ಧರಿಸದೇ ಬರುವ ಸಿಬ್ಬಂದಿಗೆ ಪ್ರವೇಶ ನೀಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಕೊವಿಡ್ ನಿಯಮ ಪಾಲಿಸಲೇಬೇಕು. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೊವಿಡ್ ವರದಿ ಕೈ ಸೇರುವವರಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು. ತಾಂತ್ರಿಕ ಸಲಹಾ ಸಮಿತಿ ತಜ್ಞರ ಸಲಹೆ ಮೇರೆಗೆ ಮಾರ್ಗಸೂಚಿ ಹೊರಡಿಸಲಾಗಿದೆ.
ಹಲವು ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದ ತಾಂತ್ರಿಕ ಸಲಹಾ ಸಮಿತಿ ಮಾಸ್ಕ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮವಹಿಸಲು ಮಾರ್ಷಲ್ ಹಾಗೂ ಪೊಲೀಸ್ ರ ನಿಗಾವಹಿಸಬೇಕು. ಮಾರ್ಷಲ್ ಗಳು ಮಾಸ್ಕ್ ಕಡ್ಡಾಯ ಪಾಲಿಸುವ ಕುರಿತು ಪರಿಶೀಲಿಸುತ್ತಿರಬೇಕು.ಸಾರ್ವಜನಿಕ ಸಾರಿಗೆ – ಸ್ವಂತ ವಾಹನಗಳ ಪ್ರಯಾಣದಲ್ಲಿಯೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ILI & SARI ಲಕ್ಷಣ ಹೊಂದಿದವರು , ಹೈರಿಸ್ಕ್ ಹಾಗೂ ಆರೋಗ್ಯ ಸಮಸ್ಯೆ ಇದ್ದವರು ಆದ್ಯತೆ ಮೇರೆಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅರ್ಹ ಜನರು ಬೂಸ್ಟರ್ ಕೊವಿಡ್ ಲಸಿಕೆ ಪಡೆಯಬೇಕು ಸುತ್ತೋಲೆ ಹೊರಡಿಸಿದ್ದಾರೆ.
Published On - 8:02 pm, Fri, 10 June 22