ಪ್ರಾಣಿಗಳ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮಂಗಳೂರಿನ ಪ್ರಾಣಿಪ್ರೇಮಿ ರಜನಿ ದಾಮೋದರ್ ಶೆಟ್ಟಿ
ರಜನಿ ಇಂತಹ ಸಾಹಸಗಳು ಒಂದೆರಡಲ್ಲ. ಇತ್ತೀಚಿಗೆ ಅಂದರೆ 2021 ರ ಆಗಸ್ಟ್ ಏಳರಂದು ಮತ್ತೊಮ್ಮೆ ಸಾಹಸ ಮೆರೆದು ಸಾಕುಪ್ರಾಣಿಯನ್ನು ಕಾಪಾಡಿದ್ದರು. ಮಂಗಳೂರಿನ ಜೆಪ್ಪು ಬಳಿಯ ಸಂದೀಪ್ ಎನ್ನುವವರ ಮನೆಯ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿ ರಕ್ಷಿಸಿದ್ದರು. 80 ಅಡಿ ಉದ್ದದ ನೀರಿದ್ದ ಬಾವಿಗಿಳಿದು ಬೆಕ್ಕಿನ ಮರಿ ಮೇಲೆತ್ತಿದ್ದರು.
ದಕ್ಷಿಣ ಕನ್ನಡ: ಜಿಲ್ಲೆಯ ಮಹಿಳೆಯೊಬ್ಬರು ಮೂಕಪ್ರಾಣಿಗಳು ಎಂಥದ್ದೇ ಕಷ್ಟದಲ್ಲಿ ಸಿಲುಕಿದರೂ ತಮ್ಮ ಜೀವನ್ನು ಒತ್ತೆ ಇಟ್ಟು ಅವುಗಳ ರಕ್ಷಣೆಗೆ ಮುಂದಾಗುತ್ತಾರೆ. ಈಗಾಗಲೇ ತನ್ನ ಪ್ರಾಣ ಪಣಕ್ಕಿಟ್ಟು ಹಲವಾರು ಮೂಕಪ್ರಾಣಿಗಳ ಜೀವವನ್ನು ಉಳಿಸಿದ್ದಾರೆ. ಅವರೆ ಮಂಗಳೂರಿನ ರಜನಿ ದಾಮೋಧರ್ ಶೆಟ್ಟಿ. ಬಾಂಬೆ ಮೂಲದವರಾದ ರಜನಿ ಮಂಗಳೂರಿಗೆ ಮದುವೆಯಾಗಿ ಇಲ್ಲೇ ನೆಲೆಸಿದ್ದಾರೆ. ಪ್ರಾಣಿ ಪ್ರೀತಿಯಿಂದ ಸುತ್ತಾಮುತ್ತ ಹೆಸರುಗಳಿಸಿದ್ದ ರಜಿನಿ ಆಗಾಗ ಸಾಹಸ ಮೆರೆಯುತ್ತಾ ಇಡೀ ಕರಾವಳಿಯಲ್ಲಿ ಮನೆ ಮಾತಾಗಿದ್ದಾರೆ. ನಗರದ ಯಾವುದೇ ಭಾಗದಲ್ಲಿ ಪ್ರಾಣಿಗಳು ಬಾವಿಗೆ ಬಿದ್ದರೂ ಮೊದಲು ಕರೆ ಹೋಗುವುದು ಪ್ರಾಣಿಪ್ರಿಯೆ ರಜನಿ ಶೆಟ್ಟಿ ಅವರಿಗೆ. ಅಷ್ಟರಮಟ್ಟಿಗೆ ರಜನಿ ಜನಪ್ರಿಯರಾಗಿದ್ದಾರೆ.
ನಾಯಿಯ ರಕ್ಷಣೆ 2020 ರ ಜವವರಿ 30 ಬೆಳಗ್ಗಿನ ಸಮಯ. ಮಂಗಳೂರಿನ ಎಂ.ಜಿ.ರಸ್ತೆ ಬಳಿಯಲ್ಲಿರುವ ಬಲ್ಲಾಳಬಾ ಬಿರುವೆರ್ನ ಕುಡ್ಲ ಮೈದಾನದ ಪಕ್ಕದ ಒಂದು ಬಾವಿಗೆ ಒಂದು ಕಪ್ಪು ಬಣ್ಣದ ನಾಯಿ ಬಿದ್ದಿತ್ತು. ಆಹಾರ ಆರಸುತ್ತಾ ಬಂದ ಬೀದಿ ನಾಯಿ, ಈ ಬಾವಿಗೆ ಬಿದ್ದು ಮೇಲತ್ತಲಾಗದೆ ಒದ್ದಾಡುತ್ತಿತ್ತು. ಮಧ್ಯಾಹ್ನ 12 ಗಂಟೆಯಾದರೂ ನಾಯಿಯನ್ನು ಯಾರು ನೋಡಿರಲಿಲ್ಲ. ಸಾಧ್ಯವಾದಷ್ಟು ಈಜಿದ ಆ ಬಡಪಾಯಿ ನಾಯಿ ಹತ್ತಲು ಪ್ರಯತ್ನ ಪಟ್ಟು ಹೈರಾಣಾಗಿ ಹೋಗಿತ್ತು. ಇನ್ನು ನಿತ್ರಾಣಗೊಂಡ ನಾಯಿಯ ಸದ್ದನ್ನು ಕೇಳಿದ ಮಹಿಳೆಯೊಬ್ಬರು ಈ ಬಾವಿಯ ಒಳಗಡೆ ನೋಡಿದ್ದಾರೆ. ಬಳಿಕ ಅಲ್ಲೇ ಆಟವಾಡಲು ಬಂದ ಯುವಕರ ತಂಡಕ್ಕೆ ಈ ವಿಚಾರವನ್ನು ಹೇಳಿದ್ದಾರೆ. ಯುವಕರ ತಂಡ ಒಂದು ಹಗ್ಗದಲ್ಲಿ ಟಯರ್ ಕಟ್ಟಿ ಅದನ್ನು ಬಾವಿಯ ಒಳಗೆ ಹಾಕಿ ನಾಯಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದರು. ಆದರೆ ಸುಸ್ತಾಗಿದ್ದ ನಾಯಿ ಈಜುತ್ತಲೇ ಬಾವಿಯ ಒಂದು ಬದಿಯಲ್ಲಿ ರಂಧ್ರವನ್ನು ಕೊರೆದು ಅಲ್ಲೇ ತನ್ನ ಜೀವವನ್ನು ರಕ್ಷಣೆ ಮಾಡಿಕೊಂಡಿತ್ತು. ಇನ್ನು ಯಾವ ಯುವಕರು ಕೂಡ ಬಾವಿಯ ಒಳಗೆ ಇಳಿದು ಈ ನಾಯಿಯನ್ನು ರಕ್ಷಣೆ ಮಾಡುವ ಧೈರ್ಯ ಮಾಡುವ ಕೆಲಸಕ್ಕೆ ಮುಂದಾಗಲಿಲ್ಲ. ಆಗ ಅವರಿಗೆ ನೆನಪಾಗಿದ್ದು ಪ್ರಾಣಿ ಪ್ರೀತಿಯುಳ್ಳ ಇದೇ ರಜಿನಿ.
ದೊಡ್ಡ ಬಾವಿಗೆ ಇಳಿದಿದ್ದ ರಜನಿ! ಪ್ರಾಣಿ ಪ್ರೀತಿ ಹೊಂದಿರುವ ಇವರ ಬಗ್ಗೆ ತಿಳಿದ ಯುವಕರು ಅವರಿಗೆ ಕರೆ ಮಾಡಿದ ತಕ್ಷಣ ನಾಯಿ ರಕ್ಷಣೆಗೆ ರಜನಿ ಮುಂದಾಗಿದ್ದಾರೆ. ನಾಯಿಯ ಒದ್ದಾಟವನ್ನು ನೋಡಿದ ರಜನಿ ಹಿಂದೆ ಮುಂದೆ ನೋಡದೇ 10 ಅಡಿಗೂ ಹೆಚ್ಚು ನೀರಿದ್ದ ಈ ಬಾವಿಗೆ ಇಳಿದಿದ್ದರು. ಹಗ್ಗಕಟ್ಟಿಕೊಂಡು ಇಳಿದ ರಜನಿ ನಾಯಿಯ ಬಳಿ ಹೋಗಿದ್ದಾರೆ. ಆಗ ನಾಯಿ ಗಾಬರಿಯಾಗಿ ಇವರಿಗೆ ಕಚ್ಚಲು ಮುಂದಾಗಿತ್ತು. ಆದರೆ ಕಷ್ಟಪಟ್ಟು ಹಗ್ಗವನ್ನು ಹಿಡಿದುಕೊಂಡೆ ನಾಯಿಯ ತಲೆಯನ್ನು ಸವರುತ್ತಾ ರಜಿನಿ ನಾಯಿನ್ನು ರಕ್ಷಣೆ ಮಾಡಲು ಮುಂದಾದರು ಮತ್ತು ನಾಯಿ ರಕ್ಷಣೆ ಮಾಡಿದರು.
ಬೆಕ್ಕಿನ ಮರಿ ರಕ್ಷಣೆ ರಜನಿ ಇಂತಹ ಸಾಹಸಗಳು ಒಂದೆರಡಲ್ಲ. ಇತ್ತೀಚಿಗೆ ಅಂದರೆ 2021 ರ ಆಗಸ್ಟ್ ಏಳರಂದು ಮತ್ತೊಮ್ಮೆ ಸಾಹಸ ಮೆರೆದು ಸಾಕುಪ್ರಾಣಿ ಕಾಪಾಡಿದ್ದರು. ಮಂಗಳೂರಿನ ಜೆಪ್ಪು ಬಳಿಯ ಸಂದೀಪ್ ಎನ್ನುವವರ ಮನೆಯ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿ ರಕ್ಷಿಸಿದ್ದರು. 80 ಅಡಿ ಉದ್ದದ ನೀರಿದ್ದ ಬಾವಿಗಿಳಿದು ಬೆಕ್ಕಿನ ಮರಿ ಮೇಲೆತ್ತಿದ್ದರು. ಜೆಪ್ಪುವಿನ ಸಂದೀಪ್ ಎಂಬವವರ ಮನೆಯ ಪಕ್ಕದಲ್ಲಿದ್ದ ಪಾಳು ಬಾವಿಗೆ ಬೆಕ್ಕಿನ ಮರಿ ಬಿದ್ದಿತ್ತು. ಆದರೆ ಮೇಲೆ ಬರಲಾಗದೆ ಕಲ್ಲೊಂದನ್ನು ಆಶ್ರಯಿಸಿ ಕುಳಿತಿತ್ತು. ಈ ಬಗ್ಗೆ ಸಂದೀಪ್ ಅವರು ಪ್ರಾಣಿ ಪ್ರಿಯೆ ರಜನಿ ಶೆಟ್ಟಿ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅವರು, ಸೊಂಟಕ್ಕೆ ಹಗ್ಗ ಬಿಗಿದು ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ.
ರಜನಿ ಬಳಿ ಇವೆ ಸಾಕಷ್ಟು ಸಾಕು ಪ್ರಾಣಿಗಳು ಅವರು ಈ ಹಿಂದೆಯೂ ಇದೇ ರೀತಿ ಸಾಕಷ್ಟು ಬಾರಿ ಬಾವಿಗೆ ಬಿದ್ದಿದ್ದ ಬೆಕ್ಕು, ನಾಯಿಗಳನ್ನು ರಕ್ಷಿಸಿದ್ದಾರೆ. ಶ್ವಾನಪ್ರಿಯೆಯಾಗಿರುವ ಇವರ ಮನೆಯಲ್ಲಿ 40 ಕ್ಕಿಂತಲೂ ಅಧಿಕ ನಾಯಿಗಳಿವೆ. ಅಲ್ಲದೆ, ದಿನವೂ ಸಾಕಷ್ಟು ಬೀದಿ ನಾಯಿಗಳಿಗೆ ಅನ್ನ ನೀಡುತ್ತಾರೆ ಎನ್ನುವುದು ವಿಶೇಷ. ಇವರು ಸಾಹಸ ಮಾಡಿ ಮೂಕಪ್ರಾಣಿಗಳನ್ನು ರಕ್ಷಿಸುವುದು ಮತ್ತು ಬೀದಿನಾಯಿಗಳ ಬಗ್ಗೆ ಇರುವ ಕಾಳಜಿ ಕರಾವಳಿಗರಿಗೂ ಹೆಮ್ಮೆ ತರಿಸಿದೆ. ಇನ್ನು ರಜಿನಿಯವರ ಈ ಧೈರ್ಯ ಮತ್ತು ಪ್ರಾಣಿ ಪ್ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ವರದಿ: ಪೃಥ್ವಿರಾಜ್ ಬೊಮ್ಮನೆಕೆರೆ
ಇದನ್ನೂ ಓದಿ:
ಕಾಡಂಚಿನ ಗ್ರಾಮಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ; ಕಾಡು ಪ್ರಾಣಿಗಳಿಂದ ಮುಕ್ತಿ ಪಡೆಯಲು ಜಿರೋ ಕಾಸ್ಟ್ ಯೋಜನೆ
Published On - 11:01 am, Wed, 13 October 21