ವಿಷಾನಿಲ ಸೋರಿಕೆ ಕೇಸ್: ದಿಗ್ಬಂಧನದಲ್ಲಿದ್ದ ಐವರು ಸಿಬ್ಬಂದಿ ರಕ್ಷಣೆ, ಮಂಗಳೂರಿನತ್ತ ಪಯಣ
ಮಂಗಳೂರಿನ ಹೊರವಲಯದ ಸುರತ್ಕಲ್ನಲ್ಲಿರುವ MRPL ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ದಿಗ್ಬಂಧನದಲ್ಲಿದ್ದ ಐವರು ಸಿಬ್ಬಂದಿಯನ್ನು ಸ್ಥಳೀಯ ಪೊಲೀಸರು ಇದೀಗ ರಕ್ಷಿಸಿದ್ದಾರೆ. ಸದ್ಯ ವಿಮಾನದಲ್ಲಿ ಮಂಗಳೂರಿನ ಕಡೆಗೆ ಐವರು ಸಿಬ್ಬಂದಿ ಹೊರಟ್ಟಿದ್ದಾರೆ.

ಮಂಗಳೂರು, ಜುಲೈ 14: ಮಂಗಳೂರಿನ (Mangaluru) ಹೊರವಲಯದ ಎಂಆರ್ಪಿಎಲ್ನಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಇಬ್ಬರು ಸಿಬ್ಬಂದಿ ದುರ್ಮರಣ (death) ಹೊಂದಿದ್ದರು. ಮೃತಪಟ್ಟ ಸಿಬ್ಬಂದಿಗಳ ವಿಚಾರವಾಗಿ ಸ್ಪಂದನೆ ನೀಡದ ಆರೋಪ ಹಿನ್ನಲೆ ಎಂಆರ್ಪಿಎಲ್ ಗೇಟ್ ಬಳಿ ಕಾರ್ಮಿಕರಿಂದ ಪ್ರತಿಭಟನೆ ಮಾಡಲಾಗಿದೆ. ಈ ಮಧ್ಯೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ದಿಗ್ಬಂಧನದಲ್ಲಿದ್ದ ಐವರನ್ನು ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದು, ವಿಮಾನದ ಮೂಲಕ ಮಂಗಳೂರಿನ ಕಡೆ ಹೊರಟಿದ್ದಾರೆ.
ಪ್ರಕರಣದಲ್ಲಿ ಮೃತಪಟ್ಟಿದ್ದ ದೀಪ್ ಚಂದ್ರ ಭಾರ್ತಿಯಾ ಅವರ ಮೃತದೇಹವನ್ನು ವಿಮಾನದಲ್ಲಿ ಅವರ ಕುಟುಂಬದ ಜೊತೆ ಎಂಆರ್ಪಿಎಲ್ನ ಐವರು ಸಿಬ್ಬಂದಿಗಳಾ ಪ್ರಸಾದ್, ಬಲ್ಬೀರ್, ಸುರೇಂದ್, ಬಾಲನಾರಾಯಣ್ ಮತ್ತು ಪಂಕಜ್ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಅವರನ್ನು ದಿಗ್ಬಂಧಿಸಿದ್ದರು.
ಇದನ್ನೂ ಓದಿ: ವಿಷಾನಿಲ ಸೋರಿಕೆಯಿಂದ ಸಾವು ಪ್ರಕರಣ: ಪ್ರಯಾಗ್ರಾಜ್ನಲ್ಲಿ ಎಂಆರ್ಪಿಎಲ್ ಸಿಬ್ಬಂದಿಗೆ ದಿಗ್ಭಂಧನ
ಎಂಆರ್ಪಿಎಲ್ನ ಮ್ಯಾನೇಜ್ಮೆಂಟ್ ಬರುವವರೆಗೂ ಮಂಗಳೂರಿಗೆ ಕಳಿಸಲ್ಲ ಅಂತಾ ದೀಪ್ ಚಂದ್ರ ಭಾರ್ತಿಯಾ ಕುಟುಂಬ ಪಟ್ಟು ಹಿಡಿದಿದ್ದರು. ಎಂಆರ್ಪಿಎಲ್ನ ಫ್ಯಾಕ್ಟರಿ ಮ್ಯಾನೇಜರ್ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆದರೂ ಕ್ರಮ ಆಗಿಲ್ಲ, ಎಂಆರ್ಪಿಎಲ್ ತಮ್ಮ ನಿಲುವು ತಾಳಿಲ್ಲ ಅಂತಾ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಮಂಗಳೂರಿನ ಕಡೆಗೆ ಪ್ರಯಾಣ
ಇತ್ತ ಎಂಆರ್ಪಿಎಲ್ನ ಸಿಬ್ಬಂದಿ ನಮ್ಮನ್ನು ದಿಗ್ಬಂಧನ ಮಾಡಿದ್ದಾರೆ. ತಮ್ಮನ್ನು ಕಾಪಾಡುವಂತೆ ಐವರು ಸಿಬ್ಬಂದಿ ವಿಡಿಯೋ ಮೂಲಕ ಎಂಆರ್ಪಿಎಲ್ಗೆ ಮನವಿ ಮಾಡಿದ್ದರು. ಇದೀಗ ಸ್ಥಳೀಯ ಪೊಲೀಸರು ಅರನ್ನು ರಕ್ಷಣೆ ಮಾಡಿದ್ದು, ಐವರು ಸಿಬ್ಬಂದಿ ಮಂಗಳೂರಿನ ಕಡೆಗೆ ಹೊರಟಿದ್ದಾರೆ.
ಕಾರ್ಮಿಕರ ಪ್ರತಿಭಟನೆ
ಇನ್ನು ಎಂಆರ್ಪಿಎಲ್ನಲ್ಲಿ ಮೃತಪಟ್ಟ ಸಿಬ್ಬಂದಿಗೆ ಸ್ಪಂದನೆ ನೀಡದ ಆರೋಪ ಹಿನ್ನಲೆ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಕೆಲ ಸಿಬ್ಬಂದಿ ಪ್ರತಿಭಟನೆ ಮಾಡಿದ್ದಾರೆ. ಘಟನೆ ಬಗ್ಗೆ ಸರಿಯಾದ ಕ್ರಮ ಆಗಿಲ್ಲ. ಮೃತಪಟ್ಟವರಿಗೆ ಪರಿಹಾರ ಮತ್ತು ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು MRPLನಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರ ಸಾವು
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದೆ. ಇಬ್ಬರ ಶವಗಳನ್ನು ಸಂಬಂಧಿಕರು ತಮ್ಮ ರಾಜ್ಯಗಳಿಗೆ ಕೊಂಡೊಯ್ದಿದ್ದಾರೆ. ದೂರದ ಊರಿಂದ ಬಂದು ಇಲ್ಲಿ ಬದುಕು ಕಟ್ಟುಕೊಳ್ಳುತ್ತಿದ್ದರು. ಅಷ್ಟರಲ್ಲಿ ವಿಷಾನಿಲ ದುರಂತ ಇಬ್ಬರ ಜೀವವನ್ನೇ ಕಸಿದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







