ಮಂಗಳೂರು ಸಂತ್ರಸ್ತರಿಗೆ 2.5 ಲಕ್ಷ ಕ್ಯಾಶ್ ನೀಡಿದ ರಿಜ್ವಾನ್

ಮಂಗಳೂರು ಸಂತ್ರಸ್ತರಿಗೆ 2.5 ಲಕ್ಷ ಕ್ಯಾಶ್ ನೀಡಿದ ರಿಜ್ವಾನ್

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಉಗ್ರ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿನ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು. ಇಂದು ಮಂಗಳೂರಿಗೆ ತೆರಳಿರುವ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್​ ಶಾಸಕ ರಿಜ್ವಾನ್ ಅರ್ಷದ್ ಫೈರಿಂಗ್​ನಲ್ಲಿ ಮೃತಪಟ್ಟವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಮೃತ ನೌಶೀನ್ ಮತ್ತು ಜಲೀಲ್ ಕುಟುಂಬಸ್ಥರಿಗೆ ಶಾಸಕ ರಿಜ್ವಾನ್ ಸಾಂತ್ವನ ಹೇಳಿ, ಕ್ಯಾಶ್ ರೂಪದಲ್ಲಿ ತಲಾ 2.5 ಲಕ್ಷ ಪರಿಹಾರ ಧನ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ರಿಜ್ವಾನ್, ರಾಜ್ಯ ಸರ್ಕಾರ ಇಬ್ಬರು ಅಮಾಯಕರನ್ನು ಕೊಂದಿದೆ. ಪರಿಹಾರ ಘೋಷಿಸಿ ಅನುಭೂತಿ ಪಡೆದು ನಂತರ ಹಿಂಪಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Click on your DTH Provider to Add TV9 Kannada