ದರ್ಶನ್ ಕೊಲೆ ಮಾಡುವಷ್ಟು ಕಟುಕನಲ್ಲ: ಮದ್ದೂರು ಶಾಸಕ ಉದಯ್ ಗೌಡ ಸಮರ್ಥನೆ

ಕೊಲೆ ಕೇಸ್​ನಲ್ಲಿ ಸಿಲುಕಿರುವ ನಟ ದರ್ಶನ್​ಗೆ ಪೊಲೀಸ್ ಸ್ಟೇಷನ್​ನ ಸೆಲ್​ನಲ್ಲಿ ನರಕ ದರ್ಶನವಾಗಿದೆ. ಪೊಲೀಸರ ವಿಚಾರಣೆಗೆ ಆರೋಪಿ ದರ್ಶನ್​ ಥಂಡಾ ಹೊಡೆದಿದ್ದಾರೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮದ್ದೂರು ಶಾಸಕ ಉದಯ್ ಗೌಡ, ದರ್ಶನ್ ಕೊಲೆ ಮಾಡುವಷ್ಟು ಕಟುಕನಲ್ಲ. ತುಂಬಾ ಸಿಡುಕು, ಸಿಟ್ಟು ಸ್ವಭಾವದವರು ಎಂದು ಹೇಳಿದ್ದಾರೆ.

ದರ್ಶನ್ ಕೊಲೆ ಮಾಡುವಷ್ಟು ಕಟುಕನಲ್ಲ: ಮದ್ದೂರು ಶಾಸಕ ಉದಯ್ ಗೌಡ ಸಮರ್ಥನೆ
ದರ್ಶನ್ ಕೊಲೆ ಮಾಡುವಷ್ಟು ಕಟುಕನಲ್ಲ: ಮದ್ದೂರು ಶಾಸಕ ಉದಯ್ ಗೌಡ ಸಮರ್ಥನೆ
Follow us
Sunil MH
| Updated By: ಗಂಗಾಧರ​ ಬ. ಸಾಬೋಜಿ

Updated on: Jun 21, 2024 | 4:08 PM

ಬೆಂಗಳೂರು, ಜೂನ್​ 21: ನಟ ದರ್ಶನ್​ಗೆ (Darshan) ಸ್ವಲ್ಪ ‌ಮುಂಗೋಪ, ಸಿಟ್ಟು ಜಾಸ್ತಿ. ಆದರೆ ಕೊಲೆ ಮಾಡುವಷ್ಟು ಕಟುಕನಲ್ಲ ಎಂದು ಮದ್ದೂರು ಶಾಸಕ ಉದಯ್ ಗೌಡ (Uday Gowda) ದರ್ಶನ್ ಕೃತ್ಯದ ಸಮರ್ಥನೆ ಮಾಡಿಕೊಂಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ. ಆದರೆ ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿದ್ರಾ? ಇವರ ಮೇಲೆ ಏನಾದ್ರೂ‌ ಹಾಕಿದ್ರಾ ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ‌ ಹೇಳೋಕೆ ಆಗಲ್ಲ ಎಂದು ಹೇಳಿದ್ದಾರೆ.

ಆತ ಅಭಿಮಾನಿಗಳ ಬಳಿ ಮಾಧ್ಯಮದವರ ಬಳಿ ಸ್ವಲ್ಪ ಮುಂಗೋಪದಿಂದ ಮಾತನಾಡುತ್ತಾನೆ ಅಷ್ಟೇ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ತನಿಖೆ ನಡೆದು ಸತ್ಯ ಹೊರಗೆ ಬರಲಿ. ಇನ್ನೇನು‌ ಕೆಲವೇ ದಿನಗಳಲ್ಲಿ ಏನು ಎತ್ತ ಹೊರಬರುತ್ತೆ. ರಾಜ್ಯದ ಜನರಿಗೂ‌ ಗೊತ್ತಾಗುತ್ತದೆ ಎಂದಿದ್ದಾರೆ.

ಅದೆಲ್ಲವೂ ಸುಳ್ಳು: ಆ ರೀತಿಯ ಘಟನೆಯೇ ನಡೆದಿಲ್ಲ

ಗನ್ ಮ್ಯಾನ್ ಮೇಲೆ ದರ್ಶನ್ ಬೆಂಬಲಿಗರ ಹಲ್ಲೆ ವಿಚಾರವಾಗಿ ಮಾತನಾಡಿದ್ದು, ನನ್ನ ಗನ್ ಮ್ಯಾನ್‌ ಮೇಲೆ ಹಲ್ಲೆ ಅನ್ನೋದು ಗೊತ್ತಿಲ್ಲ. ಅದೆಲ್ಲವೂ ಸುಳ್ಳು. ನಿಮಗೆ ಇದೆಲ್ಲಾ ಯಾರು ಹೇಳಿದ್ದು. ಆ ರೀತಿಯ ಘಟನೆ ಆಗೇ ಇಲ್ಲ.

ಇದನ್ನೂ ಓದಿ: ಮತ್ತೆ ದರ್ಶನ್​ ಹಾಗೂ ಗ್ಯಾಂಗ್ ಖಾಕಿ ಕಸ್ಟಡಿಗೆ! ಜಿ.ಪರಮೇಶ್ವರ್ ಹೇಳಿದ್ದೇನು?​

ನನಗೆ ಐದಾರು ಮಂದಿ ಗನ್ ಮ್ಯಾನ್ ಇದ್ದಾರೆ. ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ವೇ? ಅಂತಾದ್ದೂ ಯಾವುದೂ ಆಗಿಲ್ಲ. ಅದೆಲ್ಲವೂ‌ ಸುಳ್ಳು ಸೃಷ್ಟಿಯಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

90 ದಿನದಲ್ಲಿ ದರ್ಶನ್ ಆಚೆ ಬರುತ್ತಾರೆ: ನಿರ್ಮಾಪಕ ಆರ್ ಶ್ರೀನಿವಾಸ್

ದರ್ಶನ್ ಬಗ್ಗೆ ನಿರ್ಮಾಪಕ ಆರ್ ಶ್ರೀನಿವಾಸ್​ ಪ್ರತಿಕ್ರಿಯಿಸಿದ್ದು, ದರ್ಶನ್ ಒಳ್ಳೆವನು. ಆದರೆ ಸಹವಾಸ ದೋಷದಿಂದ ಹಾಳಾಗಿದ್ದಾನೆ. ಅವನ ಸುತ್ತಾ ಮುತ್ತಾ ಇರುವ ಜನರು ಸರಿಯಿಲ್ಲ. ನನ್ನ ಕಿವಿಮಾತು ದರ್ಶನ್ ಗೆ ಏನಂದ್ರೆ ಸಿನಿಮಾ ಮೇಲೆ ಅಷ್ಟೇ ನಿಮ್ಮ ಗಮನ ಇರಲಿ ಎಂದರು.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಚಿತ್ರಹಿಂಸೆಯ ವಿವರ ಕೇಳಿ ಸಿಎಂ ಶಾಕ್; ಇಂಥಾ ಕ್ರೌರ್ಯ ನೋಡೇ ಇಲ್ಲವೆಂದ ಸಿದ್ದರಾಮಯ್ಯ

ನಾನು, ದರ್ಶನ್ ಬೇಕಾದಷ್ಟು ಪಾರ್ಟಿ ಮಾಡಿದ್ದೇವೆ. ದರ್ಶನ್ ಕುಡಿದಾಗ ಕಂಟ್ರೋಲ್ ತಪ್ಪಲ್ಲ. ಪ್ರಜ್ಞೆ ಇದ್ದೇ ವರ್ತಿಸುತ್ತಾರೆ. ಅವರು ಆಚೆ ಬರ್ತಾರೆ ವೈಟ್ ಮಾಡಿ. 90 ಡೇಸ್ ಅಷ್ಟೇ ಬಂದೆ ಬರ್ತಾರೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು