Lok Sabha Polls: ಮತಗಟ್ಟೆಯ ಬಳಿ ದಕ್ಷತೆ ಪ್ರದರ್ಶಿಸಿ ಪಕ್ಷವೊಂದರ ಬಾವುಟ ತೆಗೆಸಿದ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ
Lok Sabha Polls: ಬಾವುಟ ಯಾವ ಪಕ್ಷದ್ದು ಅಂತ ನಮಗಂತೂ ಗೊತ್ತಾಗಲ್ಲ, ಅದರೆ ಅದನ್ನು ಕೂಡಲೇ ಅಲ್ಲಿಂದ ತೆಗೆಸಿದ್ದ್ದು ಉಮಾ ಶಂಕರ್ ಅವರ ದಕ್ಷತೆ ಮತ್ತು ಕಾರ್ಯತತ್ಪರತೆಯನ್ನು ಸೂಚಿಸುತ್ತದೆ. ಎಲ್ಲ ಭಾಗಗಳಲ್ಲಿ ಇಂಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರೆ, ಮತದಾನ ಯಾವುದೇ ಗದ್ದಲ ಗಲಾಟೆಗಳಿಲ್ಲದೆ ನೆರವೇರುವುದರಲ್ಲಿ ಅನುಮಾನವಿಲ್ಲ.
ದಾವಣಗೆರೆ: ಲೋಕಸಭಾ ಚುನಾವಣೆಗಾಗಿ (Lok Sabha polls) ರಾಜ್ಯದ 14 ಕ್ಷೇತ್ರಗಳಲ್ಲಿ ಇವತ್ತು ಎರಡನೇ ಹಂತದ ಮತದಾನ (second phase voting) ನಡೆಯುತ್ತಿದ್ದು ಜನ ಉತ್ಸಾಹದಿಂದ ಮನೆಗಳಿಂದ ಹೊರಬಿದ್ದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ದಾವಣಗೆರೆಯ ಮತಗಟ್ಟೆಗಳ ಮುಂದೆ ಬೆಳಗ್ಗೆಯಿಂದಲೇ ಉದ್ದನೆಯ ಕ್ಯೂಗಳು ಕಂಡುಬಂದವು. ನಗರದ ಮತಗಟ್ಟೆಯೊಂದಕ್ಕೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ (Uma Prashanth) ಭೇಟಿ ನೀಡಿ ಅಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದನ್ನು ಗಮನಿಸಿದರು. ತಮ್ಮ ಸಿಬ್ಬಂದಿ ಮತಗಟ್ಟೆಯ ಬಳಿ ಕಾಣದೆ ಹೋದಾಗ ಅವರು ನಮ್ಮ ಸಿಬ್ಬಂದಿ ಎಲ್ಲಿ, 200 ಮೀಟರ್ ಒಳಗಡೆ ಪಕ್ಷದ ಬಾವುಟ ಹೇಗೆ ಬಂತು ಅನ್ನುತ್ತಾ ಅದನ್ನು ತೆಗೆಸುವ ವ್ಯವಸ್ಥೆ ಮಾಡುತ್ತಾರೆ. ಬಾವುಟ ಯಾವ ಪಕ್ಷದ್ದು ಅಂತ ನಮಗಂತೂ ಗೊತ್ತಾಗಲ್ಲ, ಅದರೆ ಅದನ್ನು ಕೂಡಲೇ ಅಲ್ಲಿಂದ ತೆಗೆಸಿದ್ದ್ದು ಉಮಾ ಶಂಕರ್ ಅವರ ದಕ್ಷತೆ ಮತ್ತು ಕಾರ್ಯತತ್ಪರತೆಯನ್ನು ಸೂಚಿಸುತ್ತದೆ. ಎಲ್ಲ ಭಾಗಗಳಲ್ಲಿ ಇಂಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರೆ, ಮತದಾನ ಯಾವುದೇ ಗದ್ದಲ ಗಲಾಟೆಗಳಿಲ್ಲದೆ ನೆರವೇರುವುದರಲ್ಲಿ ಅನುಮಾನವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಾವಣಗೆರೆ: ಖೋಟಾ ನೋಟು ತಯಾರಿಕೆ: ಓರ್ವ ಇಂಜಿನಿಯರ್ ಸೇರಿದಂತೆ 6 ಆರೋಪಿಗಳ ಬಂಧನ