ದಾವಣಗೆರೆಯ ಐತಿಹಾಸಿಕ ಅಮ್ಮನಗುಡ್ಡ ಪುಣ್ಯಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ; ಅರ್ಚಕನ ವಜಾಕ್ಕೆ ಆದೇಶಿದರೂ ಅಧಿಕಾರಿಗಳಿಂದ ನಿರ್ಲಕ್ಷ್ಯ
ಭಕ್ತರು ಕೊಡುವ ಚಿನ್ನ, ಬೆಳ್ಳಿ ಹಾಗೂ ಹಣವನ್ನು ಅರ್ಚಕ ತಿಪ್ಪೇಸ್ವಾಮಿ ಮಂಗ ಮಾಯ ಮಾಡುತ್ತಿದ್ದ. ದೇವಸ್ಥಾನ ಸಮಿತಿಗೆ ಲೆಕ್ಕ ಕೊಡದೇ ವಂಚಿಸುತ್ತಿದ್ದ.
ದಾವಣಗೆರೆ: ಐತಿಹಾಸಿಕ ಅಮ್ಮನಗುಡ್ಡ ಪುಣ್ಯಕ್ಷೇತ್ರದಲ್ಲಿ ದೇವಿಯ ಸಮ್ಮುಖದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಆರೋಪ ಸಾಬೀತಾಗಿದ್ದು ಅರ್ಚಕನನ್ನ ಅಧಿಕಾರಿಗಳು ವಜಾಗೊಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ ಗುಡ್ಡದಲ್ಲಿ ಇರುವ ಅಮ್ಮನಗುಡ್ಡ ಕುಕ್ಕವಾಡೇಶ್ವರಿ ಪುಣ್ಯಕ್ಷೇತ್ರ ಪ್ರಧಾನ ಅರ್ಚಕ ತಿಪ್ಪೇಸ್ವಾಮಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿದೆ.
ಭಕ್ತರು ಕೊಡುವ ಚಿನ್ನ, ಬೆಳ್ಳಿ ಹಾಗೂ ಹಣವನ್ನು ಅರ್ಚಕ ತಿಪ್ಪೇಸ್ವಾಮಿ ಮಂಗ ಮಾಯ ಮಾಡುತ್ತಿದ್ದ. ದೇವಸ್ಥಾನ ಸಮಿತಿಗೆ ಲೆಕ್ಕ ಕೊಡದೇ ವಂಚಿಸುತ್ತಿದ್ದ. ಡಿಎಸ್ ಎಸ್ ಮುಖಂಡ ಬಸವಾಪುರ ರಂಗನಾಥ ನಾಯಕ ಎಂಬುವವರು ಸಾಕ್ಷಿ ಸಹಿತ ಮುಜರಾಯಿ ಇಲಾಖೆಗೆ ದೂರು ನೀಡಿದ್ದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಅರ್ಚಕನನ್ನು ವಜಾಗೊಳಿಸಿ ಮುಜರಾಯಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದ್ರೆ ಸ್ಥಳೀಯ ಅಧಿಕಾರಿಗಳು ಆದೇಶ ಜಾರಿಗೆ ತಂದಿಲ್ಲ. ಹೀಗಾಗಿ ಸ್ಥಳೀಯ ಜನರು ಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಮುಜರಾಯಿ ಇಲಾಖೆಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ ರಂಗಸ್ಥಳದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಕಲಾವಿದ ನಂಜಯ್ಯ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಇರುವ ಅಮ್ಮನಗುಡ್ಡ ಪುಣ್ಯಕ್ಷೇತ್ರದಲ್ಲಿ ಹರಕೆಗೆ ಎಂದು ಭಕ್ತರು ನೀಡುತ್ತಿದ್ದ ಚಿನ್ನ, ಬೆಳ್ಳಿ, ಕಾಣಿಕೆಯನ್ನು ಅರ್ಚಕ ತಿಪ್ಪೇಸ್ವಾಮಿ ನುಂಗಿ ನೀರು ಕುಡಿದಿದ್ದಾರೆ.
ಇದು ಹರಕೆಗೆ ಪ್ರಸಿದ್ಧ ಪುಣ್ಯ ಕ್ಷೇತ್ರ. ಅಂದುಕೊಂಡಿದ್ದು ಆಗುತ್ತದೆ. ಆದ ಬಳಿಕ ಆ ದೇವಿಗೆ ಹರಕೆ ತಿರಿಸಬೇಕು. ಅದು ಹಣ ಚಿನ್ನ, ಬೆಣ್ಣೆ, ಅಕ್ಕಿ, ರಾಗಿ, ಸೀರೆ ,ಕುಪ್ಪಸ ಹೀಗೆ ಹತ್ತಾರು ಪ್ರಕಾರದ ಹರಕೆಗಳು ಇರುತ್ತವೆ. ಇದು ವಿಶೇಷವಾಗಿ ನಾನ್ ವೇಜ್ ದೇವತೆ ಅಂತಲೇ ಪ್ರಸಿದ್ಧಿ. ಇಲ್ಲಿ ಕುರಿ ಹಾಗೂ ಕೋಳಿಗಳ ಸಹಿತ ಬಂದು ಇಲ್ಲಿಯೇ ಅಡಿಗೆ ಮಾಡಿಕೊಂಡು ಊಟ ಮಾಡಿ ದೇವಿಗೆ ಹರಕೆ ತೀರಿಸುವುದು ವಾಡಿಕೆ. ಹೀಗೆ ಹರಕೆ ರೂಪದಲ್ಲಿ ವರ್ಷಕ್ಕೆ ಕೋಟಿ ಕೋಟಿ ಆದಾಯ ಬರುತ್ತದೆ. ಇದು ಮುಜರಾಯಿ ಇಲಾಖೆಯ ಎ ಶ್ರೇಣಿ ದೇವಸ್ಥಾನ. ಆದಾಯ ಆಧಾರದ ಮೇಲೆ ಸರ್ಕಾರ ದೇವಸ್ಥಾನಗಳಿಗೆ ಗ್ರೇಡ್ ಕೊಡಲಾಗುತ್ತೆ. ಇಂತಹ ದೇವಸ್ಥಾನದ ಆದಾಯವನ್ನು ತಿಪ್ಪೇಸ್ವಾಮಿ ಕಬಳಿಸಿದ್ದಾರೆ.
ಅರ್ಚಕ ತಿಪ್ಪೇಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೋಪ ಕಂಡು ಬರಲು ಕಾರಣ 2021ರ ಡಿಸೆಂಬರ್ 24 ರಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ದುಡ್ಡಚ್ಚನಹಳ್ಳಿ ಗ್ರಾಮದ ಸಿದ್ದಪ್ಪ ಈ ದೇವಸ್ಥಾನಕ್ಕೆ ಬಂದಿದ್ದರು. ಅವರು ದೇವಸ್ಥಾನಕ್ಕೆ 28 ಸಾವಿರ ರೂಪಾಯಿ ದೇಣಿಗೆ ನೀಡಿದ್ದರು. ಆದ್ರೆ ರಸೀದಿ ಕೊಟ್ಟಿರಲಿಲ್ಲ. ಇದೇ ವಿಚಾರ ಇಟ್ಟುಕೊಂಡು ಸ್ಥಳ ಸಿದ್ದಪ್ಪ ಅವರು ದೂರು ನೀಡಿದ್ದರು. ಈ ದೂರು ಸ್ವೀಕರಿಸಿದ ದಾವಣಗೆರೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ 2022 ಅಕ್ಟೋಬರ್ 14 ರಂದು ಮುಜರಾಯಿ ಇಲಾಖೆಗೆ ಪತ್ರ ಬರೆದು ಹಣ ಪಡೆದು ರಸೀದಿ ಕೊಟ್ಟಿಲ್ಲ. ಮೇಲಾಗಿ ತಿಪ್ಪೇಸ್ವಾಮಿ ಅವರಿಗೆ 65 ವರ್ಷವಾಗಿದೆ. ಅಮಾನತ್ತು ಮಾಡಲು ದಾಖಲೆಗಳನ್ನ ಕಳುಹಿಸಲಾಗಿದೆ ಎಂದು ಧರ್ಮದತ್ತಿ ಇಲಾಖೆ ಆಯುಕ್ತರಿಗೆ ಪತ್ರ ಬರೆದರು. ಅವತ್ತೆ ಧರ್ಮದತ್ತಿ ಇಲಾಖೆ ಪರಿಶೀಲನೆ ವರದಿ ನೀಡಿ ಎಂದು ಇನ್ನೊಂದು ಪತ್ರ ಬರೆದಿದ್ದರು.
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:38 am, Sun, 8 January 23