ಮೊದಲ ಸ್ವಾಭಿಮಾನ ಸಾವು ಬಯಸಿದ ದಾವಣಗೆರೆಯ ಅಜ್ಜಿ, ಕಾರಣ ಕೇಳಿದ್ರೆ ಕರಳು ಚುರುಕ್ ಎನ್ನುತ್ತೆ

ದಾವಣಗೆರೆಯ ಕೆ.ಬಿ. ಕರಿಬಸಮ್ಮ 85 ವರ್ಷದ ವೃದ್ಧೆ. ಈ ಅಜ್ಜಿ ನಿವೃತ್ತ ಶಿಕ್ಷಕಿಯಾಗಿದ್ದು, ಘನತೆಯಿಂದ ಮರಣ ಹೊಂದುವ ಹಕ್ಕು ಸಿಗಬೇಕೆಂದು ಬರೋಬ್ಬರಿ 24 ವರ್ಷಗಳಿಂದ ನಿರಂತರ ಹೋರಾಟ ಮಾಡಿದ್ದಾರೆ. ಇದರ ಪರಿಣಾಮ ಇಚ್ಛಾ ಮರಣ ಕಾನೂನು ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ಅಜ್ಜಿ ಮೊದಲ ಸ್ವಾಭಿಮಾನದ ಸಾವು ತಮ್ಮದಾಗಬೇಕೆಂದು ಇಚ್ಛಿಸಿದ್ದಾರೆ. ಹೌದು....ಗೌರವಯುತವಾಗಿ ಸಾಯಲು ಅವಕಾಶ ನೀಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಷ್ಟಕ್ಕೂ ಈ ಅಜ್ಜಿ ಸಾಯುವ ತೀರ್ಮಾನ ಕೈಗೊಂಡಿದ್ಯಾಕೆ ಎನ್ನುವುದನ್ನು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ.

ಮೊದಲ ಸ್ವಾಭಿಮಾನ ಸಾವು ಬಯಸಿದ ದಾವಣಗೆರೆಯ ಅಜ್ಜಿ, ಕಾರಣ ಕೇಳಿದ್ರೆ ಕರಳು ಚುರುಕ್ ಎನ್ನುತ್ತೆ
Karibasamma
Updated By: ರಮೇಶ್ ಬಿ. ಜವಳಗೇರಾ

Updated on: May 01, 2025 | 8:58 PM

ದಾವಣಗೆರೆ, (ಮೇ 01): ಕೆ.ಬಿ. ಕರಿಬಸಮ್ಮ (karibasamma) 85 ವರ್ಷದ ವೃದ್ಧೆ. 30 ವರ್ಷಗಳ ಕಾಲ ಶಾಲಾ ಮಕ್ಕಳಿಗೆ ಒಳ್ಳೆಯ ಗುರುವಾಗಿ ನೀತಿ ಪಾಠ ಮಾಡಿ ನಿವೃತ್ತಿ ಆಗಿರುವ ಶಿಕ್ಷಕಿ (davanagere retired teacher). 24 ವರ್ಷಗಳ ಹಿಂದೆ ತಾವು ಅನುಭವಿಸಿದ ನರಕಯಾತನೆಗೆ ಮುಕ್ತಿ ಬಯಸಿದ್ದ ಎಚ್.ಬಿ. ಕರಿಬಸಮ್ಮ ಕಾನೂನಿನಡಿ ಘನತೆಯಿಂದ ಮರಣ ಹೊಂದುವ ಹಕ್ಕು ಸಿಗಬೇಕೆಂದು ಹೋರಾಡಿದವರಲ್ಲಿ ಇವರೂ ಒಬ್ಬರು. ಇದೀಗ ದಾಣವಗೆರೆಯ ಕರಿಬಸಮ್ಮ 24 ವರ್ಷಗಳಿಂದ ನಡೆಸಿದ ಹೋರಾಟದ ಪರಿಣಾಮ ದಯಾಮರಣ ಕಾನೂನು ಜಾರಿಗೆ ಬಂದಿದೆ. ಹೀಗಾಗಿ ಅವರು ಈಗ ತಮ್ಮನ್ನು ಗೌರವಯುತವಾಗಿ ಸಾಯಲು ಅವಕಾಶ ನೀಡುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ದಯಾಮರಣ ನೀಡಿದಿದ್ದರೆ ಆತ್ಮಹತ್ಯೆ ಕಡೆ ಮುಖ ಮಾಡಬೇಕಾಗಿತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮೊದಲು ಸ್ವಾಭಿಮಾನ ಸಾವು ಬಯಸಿದ ಅಜ್ಜಿ

ನಾನು ಗೌರವಯುತವಾಗಿ ಸಾವನ್ನಪ್ಪಲು ಅವಕಾಶ ಕೊಡಿ. ಇಲ್ಲ ನಾನು ಆತ್ಮಹತ್ಯೆ ಕಡೆ ಮುಖ ಮಾಡಬೇಕಾಗಿತ್ತದೆ. ಸರ್ಕಾರಕ್ಕೆ ದಯಾ ಮರಣ ಹೋರಾಟಗಾರ್ತಿ ದಾವಣಗೆರೆ ಯ ಕೆಬಿ ಕರಿಬಸಮ್ಮ ನೀಡಿದ ಎಚ್ಚರಿಕೆ. ಕಳೆದ 24 ವರ್ಷಗಳಿಂದ ದಯಾಮರಣಕ್ಕಾಗಿ ಹೋರಾಟ ಮಾಡಿದೆ. ಈ ಹೋರಾಟದ ಪರಿಣಾಮ ದಯಾಮರಣ ಕಾನೂನು ಜಾರಿಗೆ ಬಂದಿದೆ. ಈ ಕಾನೂನಿಗೆ ನಾನೇ ಮೊದಲು ಸ್ವಾಭಿಮಾನ ಸಾವು ಹೊಂದಬೇಕು ಎಂಬುದು ಹಿರಿಯಾಸೆ. ಕಾರಣ ಹತ್ತಾರು ವರ್ಷಗಳಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಈ ಅಜ್ಜಿ. ನಿವೃತ್ತತ ಶಿಕ್ಷಕಿ ಆಗುರುವ ದಾವಣಗೆರೆ ನಗರದ ಕೆಬಿ ಕರಿಬಸಮ್ಮ ಶಿಕ್ಷಕಿಗೆ ಹತ್ತಾರು ಕಾಯಿಲೆಗಳಿವೆ. ಇವುಗಳಲ್ಲಿ ಕರಳು ಕ್ಯಾನ್ಸರ್ ಕೂಡಾ ಒಂದು.

ಇದನ್ನೂ ಓದಿ: ಮಾರಣಾಂತಿಕ ಗಂಭೀರ ರೋಗದಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು: ಕರ್ನಾಟಕ ಸರ್ಕಾರ ಮಹತ್ವದ ಆದೇಶ

ಕ್ಯಾನ್ಸರ್ ಮತ್ತಷ್ಟು ಉಲ್ಬಣ

ಕಳೆದ ಆರು ವರ್ಷದ ಹಿಂದೆ ಕರಳು ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ ಆಗಿತ್ತು. ಆದ್ರೆ ಕ್ಯಾನ್ಸರ್ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ. ಇನ್ನೊಮ್ಮೆ ಶಸ್ತ್ರಚಿಕಿತ್ಸೆ ಮಾಡಿದ್ರೆ ಮಲ ಮೂತ್ರಕ್ಕೆ ಪ್ರತ್ಯೇಕ ಬ್ಯಾಗ್ ಹಾಕುತ್ತಾರೆ. ಆ ಹಿಂಸೆ ತಾಳಿಕೊಳ್ಳುವಷ್ಟು ಶಕ್ತಿ ಇಲ್ಲ. ಈಗ ನನಗೆ 86 ವರ್ಷ ವಯಸ್ಸು. ಸಂವಿಧಾನ ಹೇಗೆ ಬದುಕುವ ‌ಹಕ್ಕು ಕೊಟ್ಟಿದೆ. ಇದೇ ರೀತಿ ವೃದ್ಧಾಪ್ಯದಲ್ಲಿ ನೋಡಿಕೊಳ್ಳುವರಿಲ್ಲ. ನರಳುವ ಹಿರಿಯ ಜೀವಗಳಿಗಾಗಿ ದಯಾಮರಣ ಕಾನೂನು ಬಂದಿದೆ. ಅದಕ್ಕೆ ನಾನೇ ಮೊದಲ ಬಲಿ‌ ಆಗಬೇಕು. ಇಲ್ಲವಾದ್ರೆ ದೈಹಿಕ ನೋವಿನ ಹಿಂಸೆ ತಾಳದೇ ಆತ್ಮಹತ್ಯೆ ‌ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ
ಘನತೆಯಿಂದ ಸಾಯುವ ಹಕ್ಕು: ಮೊದಲು ದಯಾಮರಣ ಪಡೆಯಲು ಮುಂದಾದ ನಿವೃತ್ತ ಶಿಕ್ಷಕಿ
ಮಾರಣಾಂತಿಕ ರೋಗದಿಂದ ಬಳಲುತ್ತಿರೋರಿಗೆ ದಯಾಮರಣ ಹಕ್ಕು: ಸರ್ಕಾರ ಮಹತ್ವದ ಆದೇಶ
ನೀವು 35 ರಿಂದ 40 ವರ್ಷ ವಯಸ್ಸಿನವರಾಗಿದ್ದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ
ಸಂಶೋಧನೆ ಮಾಡಲು ಹೋಗಿ ಮಗುವಿನ ಬ್ರೈನ್ ಡ್ಯಾಮೇಜ್: ದಯಾಮರಣ ಕೋರಿದ ತಂದೆ

ಸಂಸಾರ ಶುರುವಾಗುವ ಮೊದಲೇ ವಿಧವೆ

ದಾವಣಗೆರೆ ನಗರದ ಎಸಿಸಿ ಬಿ ಬ್ಲಾಕ್ ನಲ್ಲಿ ಇರುವ ವಯೋವೃದ್ಧರ ಆರೈಕೆ ಕೇಂದ್ರದಲ್ಲಿ ಇರುವ ಕರಿಬಸಮ್ಮ ದೊಡ್ಡ ಹೋರಾಟಗಾರ್ತಿ. ಸಂಬಂಧಿಕರಿಲ್ಲ ಮಕ್ಕಳಿಲ್ಲ. ಬಾಲ್ಯದಲ್ಲಿಯೇ ವಿವಾಹವಾಗಿ ಪತಿಯನ್ನು ಕಳೆದುಕೊಂಡಿದ್ದಾರೆ. ಸಂಸಾರ ಶುರು ಮಾಡುವ ಮೊದಲು ವಿಧವೆ ಪಟ್ಟದ ನಡುವೆಯೇ ಕಷ್ಟ ಪಟ್ಟು ಓದಿ ಸರ್ಕಾರಿ ಶಾಲೆ ಹಿಂದಿ ಶಿಕ್ಷಕಿ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನೊಂದು ಮದುವೆಯಾಗಿದ್ದರೂ ಸರಿ ಹೋಗಲಿಲ್ಲ. ನಿವೃತ್ತಿಯಾದ ಬಳಿಕ 24 ವರ್ಷಗಳ ಹಿಂದೆ ದಯಾಮರಣಕ್ಕಾಗಿ ಹೋರಾಟ ಆರಂಭಿಸಿದ್ದರು. ಈ ಹೋರಾಟ ಫಲವಾಗಿ ದಯಾಮರಣ ಕಾನೂನು ಜಾರಿಗೆ ಬಂದಿದೆ. ಈಗ ಆರು ವರ್ಷದ ಬಳಿಕ ಕರಿಬಸಮ್ಮನಿಗೆ ಕರಳು ಕ್ಯಾನ್ಸರ್ ಕಾಟ ಶುರುವಾಗಿದ್ದು, ಕಾನೂನು ಪ್ರಕಾರ ಗೌರವದಿಂದ ಸಾವು ಹೊಂದಲು ಅವಕಾಶ ನೀಡಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.