AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಂಗ್ಯೂ ಕೇಸ್ ಹೆಚ್ಚಳ: ಬೆಂಗಳೂರಿನ 5 ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲು ಸೂಚನೆ

ಕರ್ನಾಟಕದಲ್ಲಿ ಡೆಂಗ್ಯೂ ಕೇಸ್​ಗಳು ದಿನೇದಿನೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 524 ಡೆಂಗ್ಯೂ ಕೇಸ್ ದಾಖಲಾಗಿವೆ. ಹೀಗಾಗಿ ಬೆಂಗಳೂರಿನ 5 ಆಸ್ಪತ್ರೆಗಳಿಲ್ಲಿ ಬೆಡ್​ಗಳನ್ನ ಮೀಸಲಿಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಲಾಗಿದೆ. ಬೆಂಗಳೂರಲ್ಲಿ ಒಂದೇ ದಿನಕ್ಕೆ 270 ಕೇಸ್​ಗಳು ದಾಖಲಾಗಿವೆ.

ಡೆಂಗ್ಯೂ ಕೇಸ್ ಹೆಚ್ಚಳ: ಬೆಂಗಳೂರಿನ 5 ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲು ಸೂಚನೆ
ಡೆಂಗ್ಯು ಕೇಸ್ ಹೆಚ್ಚಳ: ಬೆಂಗಳೂರಿನ 5 ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲು ಸೂಚನೆ
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 17, 2024 | 10:52 PM

Share

ಬೆಂಗಳೂರು, ಜುಲೈ 17: ಕರ್ನಾಟಕದಲ್ಲಿ ಡೆಂಗ್ಯೂ (Dengue fever) ಲಗಾಮಿಲ್ಲದೆ ಓಡುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಾಗೂ ಸಾವು ಹಿನ್ನೆಲೆ ಬೆಂಗಳೂರಿನ ಐದು ಆಸ್ಪತ್ರೆಗಳಲ್ಲಿ ಬೆಡ್​ಗಳನ್ನು ಕಾಯ್ದಿರಿಸಲು ಆರೋಗ್ಯ ಇಲಾಖೆ (Health Department) ಸೂಚನೆ ನೀಡಿದೆ. ಡೆಂಗ್ಯೂ ಕೇಸ್​ಗಳ ಚಿಕಿತ್ಸೆಗೆಂದೇ ಬೆಡ್ ರಿಸರ್ವ್ ಮಾಡಲು ಆದೇಶಿಸಲಾಗಿದೆ.

ಯಾವೆಲ್ಲಾ ಆಸ್ಪತ್ರೆಗಳಿಗೆ ಸೂಚನೆ?

  • ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 25 ಬೆಡ್​ಗಳು ಮೀಸಲು
  • ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ 25 ಬೆಡ್​ಗಳು
  • ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಬೆಡ್​
  • ಯಲಹಂಕ ತಾಲೂಕು ಆಸ್ಪತ್ರೆ 10 ಬೆಡ್​
  • ಕೆ.ಆರ್.ಪುರಂ ತಾಲೂಕು ಆಸ್ಪತ್ರೆಯಲ್ಲಿ 10 ಬೆಡ್​
  • ಜಿಲ್ಲಾಸ್ಪತ್ರೆಗಳಲ್ಲಿ 10, ತಾಲೂಕಾಸ್ಪತ್ರೆಯಲ್ಲಿ 5 ಬೆಡ್​​ಗಳನ್ನ ಮೀಸಲಿಡಲು ಆರೋಗ್ಯ ಇಲಾಖೆ ಸೂಚಿಸಿದೆ.

ಬೆಂಗಳೂರಲ್ಲಿ ಒಂದೇ ದಿನಕ್ಕೆ 270 ಡೆಂಗ್ಯೂ ಕೇಸ್​ ದಾಖಲು

ಇನ್ನು ರಾಜ್ಯದಲ್ಲಿ ಡೆಂಗ್ಯೂ ಕೇಸ್​ಗಳು ದಿನೇದಿನೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 524 ಡೆಂಗ್ಯೂ ಕೇಸ್ ದಾಖಲಾಗಿವೆ. ಬೆಂಗಳೂರಲ್ಲಿ ಒಂದೇ ದಿನಕ್ಕೆ 270 ಕೇಸ್​ಗಳು ದಾಖಲಾಗಿದ್ದು, ಆ ಮೂಲಕ ಕರ್ನಾಟಕದಲ್ಲಿ ಡೆಂಗ್ಯೂ ಕೇಸ್​ಗಳ ಸಂಖ್ಯೆ 10973ಕ್ಕೆ ಏರಿಕೆ ಆಗಿದೆ.

ಇದನ್ನೂ ಓದಿ: Chikungunya: ಬೆಂಗಳೂರು: ಡೆಂಗ್ಯೂ ಜತೆಗೆ ಚಿಕುನ್ ಗುನ್ಯಾ ಪ್ರಕರಣಗಳೂ ಏರಿಕೆ

ಜನವರಿಯಿಂದ ಬರೋಬ್ಬರಿ 10 ಸಾವಿರದ 449ಕೇಸ್​ಗಳು ದೃಢಪಟ್ಟಿವೆ. ನಿನ್ನೆ 487 ಮಂದಿ ಡೆಂಗ್ಯೂಗೆ ತುತ್ತಾಗಿದ್ದರು. ಈ ಪೈಕಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ಡೆಂಗ್ಯೂ ಜೊತೆ ಚಿಕೂನ್ ಗುನ್ಯಾ ಹಾವಳಿ

ಒಂದುಕಡೆ ಡೆಂಗ್ಯೂ ಜನರು ಜೀವ ಹಿಂಡುತ್ತಿದ್ದರೆ, ಮತ್ತೊಂದು ಕಡೆ ಚಿಕೂನ್ ಗುನ್ಯಾ ಹಾವಳಿ ಶುರುವಾಗಿದೆ. ರಾಜ್ಯದಲ್ಲಿ 1113 ಜನರಿಗೆ ಚಿಕೂನ್ ಗುನ್ಯಾ ಭಾದಿಸಿದರೆ, ಬೆಂಗಳೂರಿನಲ್ಲಿ 176 ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳಲ್ಲಿ 52 ಜನರಿಗೆ ಚಿಕೂನ್ ಗುನ್ಯಾ ತಗುಲಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚಳ: ಒಂದೇ ದಿನದಲ್ಲಿ 424 ಪ್ರಕರಣ ದಾಖಲು

ಸದ್ಯ ಶರವೇಗದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ, ಚಿಕೂನ್ ಗುನ್ಯಾ ಪ್ರಕರಣಗಳು ಆತಂಕ ಮೂಡಿಸಿವೆ. ಮಳೆಗಾಲ ಮುಗಿಯೋವರೆಗೂ ಎಚ್ಚರಿಕೆಯಿಂದ ಇರುವಂತೆ ವೈದ್ಯರು ಜನರಿಗೆ ಸೂಚಿನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.