ಮೂತ್ರ ಮಾಡುವ ವಿಷಯಕ್ಕೆ ಯುವಕರ ಮೇಲೆ ಹಲ್ಲೆ
ಹುಬ್ಬಳ್ಳಿ: ಮೂತ್ರ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಕೂಲಿ ಕೆಲಸ ಮಾಡಲು ಬಂದಿದ್ದ ಅನ್ಯ ರಾಜ್ಯದ ಯುವಕರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಬಂಕಾಪುರ್ ಚೌಕ್ ಬಳಿ ನಡೆದಿದೆ. ಅನಿಲ್, ಆಷಾರಾಮ, ವಿಜಯ ಲಾಲ್, ಬೊಲೋ, ಕರಣ್, ಹರಿದಯಾಳ ಎಂಬುವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಯುವಕರ ಮೇಲೆ ಸುಮಾರು 10-12ಜನರಿದ್ದ ತಂಡ ಕಲ್ಲುಗಳಿಂದ ದಾಳಿ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹುಬ್ಬಳ್ಳಿ: ಮೂತ್ರ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಕೂಲಿ ಕೆಲಸ ಮಾಡಲು ಬಂದಿದ್ದ ಅನ್ಯ ರಾಜ್ಯದ ಯುವಕರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಬಂಕಾಪುರ್ ಚೌಕ್ ಬಳಿ ನಡೆದಿದೆ.
ಅನಿಲ್, ಆಷಾರಾಮ, ವಿಜಯ ಲಾಲ್, ಬೊಲೋ, ಕರಣ್, ಹರಿದಯಾಳ ಎಂಬುವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಯುವಕರ ಮೇಲೆ ಸುಮಾರು 10-12ಜನರಿದ್ದ ತಂಡ ಕಲ್ಲುಗಳಿಂದ ದಾಳಿ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.