ಜೈಲಿನಲ್ಲಿ ದರ್ಶನ್​ಗೆ ರಾಜ್ಯಾತಿಥ್ಯ: ಫೋಟೋ ಹೊರಬಿಟ್ಟಿದ್ದೇ ರಾಜ್ಯ ಸರ್ಕಾರ ಎಂದು ಜೋಶಿ

ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿ ತನಿಖೆ ಕೊನೆಯ ಹಂತ ತಲುಪಿದ್ದು, ಪೊಲೀಸರು ಕೋರ್ಟ್​ಗೆ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದ್ದಾರೆ. 3,991 ಪುಟಗಳಲ್ಲಿ ರೇಣುಕಾಸ್ವಾಮಿ ಕೊಲೆ ಭೀಕರತೆ ಬಯಲಾಗಿದೆ. ಅಲ್ಲದೇ ರೇಣುಕಾಸ್ವಾಮಿ ಪ್ರಾಣ ಭಿಕ್ಷೆ ಬೇಡುತ್ತಿರುವ ಕೆಲ ಫೋಟೋಗಳು ವೈರಲ್ ಆಗಿದೆ. ಇನ್ನು ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ, ರಿಟ್ರೀವ್​ ಮಾಡಿರುವ ಫೋಟೋ ಬಿಟ್ಟಿರುವುದು ಅಕ್ಷಮ್ಯ ಅಪರಾಧ. ಇದನ್ನ ಬಿಟ್ಟಿದ್ದೇ ರಾಜ್ಯ ಸರ್ಕಾರ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಜೈಲಿನಲ್ಲಿ ದರ್ಶನ್​ಗೆ ರಾಜ್ಯಾತಿಥ್ಯ: ಫೋಟೋ ಹೊರಬಿಟ್ಟಿದ್ದೇ ರಾಜ್ಯ ಸರ್ಕಾರ ಎಂದು ಜೋಶಿ
ಜೋಶಿ, ದರ್ಶನ್
Edited By:

Updated on: Sep 06, 2024 | 7:03 PM

ಹುಬ್ಬಳ್ಳಿ, (ಸೆಪ್ಟೆಂಬರ್ 06): ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲಾಗಿದ್ದು, ಕೆಲ ಫೋಟೋಗಳು ಲೀಕ್ ಆಗಿವೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, ರಿಟ್ರೀವ್​ ಮಾಡಿರುವ ಫೋಟೋ ಬಿಟ್ಟಿರುವುದು ಅಕ್ಷಮ್ಯ ಅಪರಾಧ. ಪರಪ್ಪನ ಅಗ್ರಹಾರ ಜೈಲಿನ ದರ್ಶನ್ ಫೋಟೋ ಹೊರಬಿಟ್ಟಿದ್ದೇ ಸರ್ಕಾರ. ರೇಣುಕಾಸ್ವಾಮಿ ಕೊಲೆ ಕರ್ನಾಟಕ ಕಂಡ ಅತ್ಯಂತ ಕ್ರೂರವಾದ ಹತ್ಯೆ. ಮುಡಾ, ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ದೊಡ್ಡ ಚರ್ಚೆಯಾಯಿತು. ಮುಡಾ ವಿಚಾರ ಡೈವರ್ಟ್​ ಮಾಡಲು ದರ್ಶನ್ ಕೇಸ್ ಮುನ್ನೆಲೆಗೆ ತಂದರು. ರಾಜ್ಯ ಸರ್ಕಾರ ಸಂಕುಚಿತ ಷಡ್ಯಂತ್ರ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾತನಾಡಿರುವ ಜೋಶಿ, ಈಗಲೂ ಸಹ ಕ್ರೂರವಾಗಿ ಹತ್ಯೆಗೈದ ಆರೋಪಿಗಳಿಗೆ ಶಿಕ್ಷೆಯಾಗಬೇಕು.ಇದರಲ್ಲಿ ಯಾವ ಅನುಮಾನ ಇಲ್ಲ. ರಿಟ್ರೀವ್ ಮಾಡಿರುವ ಫೋಟೋ ಬಿಟ್ಟಿರೋದು ಅಕ್ಷಮ್ಯ ಅಪರಾಧ. ಈ ವಿಚಾರವನ್ನು ನ್ಯಾಯಾಲಯ ಕೂಡ ಪರಿಗಣನೆಗೆ ತೆಗೆದುಕೊಳ್ಳುತ್ತೆ. ಫೋಟೋ ಹೊರಗಡೆ ಬಿಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು. ವಿಷಯ ಡೈವರ್ಟ್ ಮಾಡುವುದಕ್ಕೆ ರಾಜ್ಯ ಸರ್ಕಾರ ಈ ತರಹ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ಪ್ರಕರಣ; ಸಿಸಿಬಿ ತನಿಖೆಗೆ ಸರ್ಕಾರ ಆದೇಶ

ಕೋವಿಡ್ ಹಗರಣದ ದಾಖಲೆ ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ಸುಧಾಕರ್,ಅಶೋಕ್ ಎಲ್ಲರೂ ಮಾತಾಡಿದ್ದಾರೆ. ತನಿಖೆ ಆಗಲಿ. ನೀವು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಯಿತು ಇವಾಗ ಯಾಕೆ ಲೆಕ್ಕ ಪತ್ರ ಸಮಿತಿ ಹೊರಗಡೆ ಬಿಟ್ಟಿದ್ದೀರಿ. ನೀವು ಕಳ್ಳತನ ಮಾಡಿದಾಗ, ಮತ್ತೊಬ್ಬರು ಕಳ್ಳತನ ಮಾಡಿದ್ದಾರೆಂದು ಹೇಳಿ ಬಚಾವ್ ಆಗೋ ಪ್ರಯತ್ನವಾ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ, ಜನಾರ್ದನ ರೆಡ್ಡಿ ಪ್ರಕರಣ ಎಲ್ಲವೂ ಮುಡಾ ಹಗರಣ ಬಂದ ಮೇಲೆ ಅನ್ನೋದು ಆಶ್ಚರ್ಯ ಎಂದರು.

ಮಹದಾಯಿ ವಿಚಾರವಾಗಿ ಸರ್ಕಾರ ಕಳಸಾ ಬಗ್ಗೆ ಪ್ರಪೋಸಲ್ ಕಳಿಸಿಲ್ಲ. ಬಂಡೂರಿ ಬಗ್ಗೆ ಪ್ರಪೋಸಲ್ ಕಳಸಿದೆ. ಅನುಮತಿ ಕೊಡಿಸಿದ್ದೇ ನಾವು. ಗೆಜೆಟ್ ನೋಟಿಫಿಕೇಶ್, ಡಿಪಿಆರ್ ಮಾಡಿಸಿದ್ದು ಬಿಜೆಪಿ. ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ. ನ್ಯಾಷನಲ್ ಟೈಗರ್ ಕಾರಿಡಾರ್ 31.07 ರಂದು ಮೀಟಿಂಗ್ ‌ಮಾಡಿದೆ..ಸರ್ಕಾರ ಇದನ್ನು ಗಮನಕ್ಕೆ ತಂದಿಲ್ಲ. ರಾಜ್ಯ ಸರ್ಕಾರ ನಮ್ಮ ಗಮನಕ್ಕೆ ತಂದಿಲ್ಲ. ಇವಾಗ ತಿರಸ್ಕಾರ ಆಗಿದೆ ಎಂದು ವರದಿಯಾಗಿದೆ. ಆದ್ರೆ ತಿರಸ್ಕಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದರು,

ನಾನು ಭೂಪೇಂದ್ರ ಯಾದವ್ ಅವರಿಗೆ ಮಾತಾಡಿದ್ದೇನೆ. ಚುನಾವಣೆ ಮುಗಿದ ಬಳಿಕ ಬಂದು ವಿವರವಾಗಿ ಮಾತಾಡೋಣ ಎಂದಿದ್ದಾರೆ. ಸರ್ಕಾರದ ನಿಯೋಗ ಬರಲಿ ಸ್ವಾಗತ. ಸುಪ್ರೀಂ ಕೋರ್ಟ್ ಗೆ ಹೋಗಲಿ, ಅವರು ಬಂದ್ರೆ ಸ್ವಾಗತ. ಸರ್ಕಾರ ಯಾವಾಗಲೂ ಮಹದಾಯಿ ವಿಚಾರ ಮಾತಾಡಿಲ್ಲ. ಆದ್ರೆ ನಮಗೆ ಬದ್ಧತೆ ಇದೆ. ಏಳು ತಿಂಗಳ ಮೀಟಿಂಗ್ ಇರೋವಾಗ ಗಮನಕ್ಕೆ ತರಬೇಕಿತ್ತು ಎಂದು ಹೇಳಿದರು.

Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us