AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದ ಬಾಡ ರಸ್ತೆ ದುರಂತದಲ್ಲಿ ಮೃತರಾದವರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Pralhad Joshi: ಇದೇ ವೇಳೆ ಮುಜರಾಯಿ ಇಲಾಖೆ ವತಿಯಿಂದ ಕುರುಹಿನಶೆಟ್ಟಿ ಸಮಾಜದ ಹಳೇಹುಬ್ಬಳ್ಳಿ ನೀಲಕಂಠ ಮಠ ಸಮುದಾಯ ಭವನಕ್ಕೆ ಅನುದಾನ ಒದಗಿಸಲಾಯಿತು. 75 ಲಕ್ಷ ರೂಪಾಯಿ ಅನುದಾನದ ಪೈಕಿ ಎರಡನೇ ಕಂತಿನ 40 ಲಕ್ಷ ರೂಪಾಯಿಗಳ ಚೆಕ್ಕನ್ನು ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಹಸ್ತಾಂತರಿಸಿದರು.

ಧಾರವಾಡದ ಬಾಡ ರಸ್ತೆ ದುರಂತದಲ್ಲಿ ಮೃತರಾದವರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಧಾರವಾಡದ ಬಾಡ ರಸ್ತೆ ದುರಂತದಲ್ಲಿ ಮೃತರಾದವರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
TV9 Web
| Edited By: |

Updated on:Jul 30, 2022 | 9:43 PM

Share

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಬಾಡ ಗ್ರಾಮದ (Dharwad Bada Road Accident) ಬಳಿ ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದವರ ಕುಟುಂಬದವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister of Parliamentary Affairs Pralhad Joshi) ನೆರವಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಐವರ ಕುಟುಂಬಸ್ಥರಿಗೆ ಹುಬ್ಬಳ್ಳಿಯಲ್ಲಿಂದು ಮುಖ್ಯಮಂತ್ರಿ ಪರಿಹಾರ ನಿಧಿಯ ತಲಾ 5 ಲಕ್ಷ ರೂಗಳ ಪರಿಹಾರದ ಚೆಕನ್ನು (compensation cheques) ಪ್ರಲ್ಹಾದ ಜೋಶಿಯವರು ನೀಡಿದರು‌.

ಇದೇ ವೇಳೆ ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿ ಮೂಲಕ ಸಹಾಯ ನೀಡಬೇಕೆಂಬ ಕೋರಿಕೆಗೆ ಸ್ಪಂದಿಸಿ, ಮುಖ್ಯಮಂತ್ರಿ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಧನ್ಯವಾದ ತಿಳಿಸಿದರು.

ಇದೇ ವೇಳೆ ಮುಜರಾಯಿ ಇಲಾಖೆ ವತಿಯಿಂದ ಕುರುಹಿನಶೆಟ್ಟಿ ಸಮಾಜದ ಹಳೇಹುಬ್ಬಳ್ಳಿ ನೀಲಕಂಠ ಮಠ ಸಮುದಾಯ ಭವನಕ್ಕೆ ಅನುದಾನ ಒದಗಿಸಲಾಯಿತು. 75 ಲಕ್ಷ ರೂಪಾಯಿ ಅನುದಾನದ ಪೈಕಿ ಎರಡನೇ ಕಂತಿನ 40 ಲಕ್ಷ ರೂಪಾಯಿಗಳ ಚೆಕ್ಕನ್ನು ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಹಸ್ತಾಂತರಿಸಿದರು.

Also Read: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸರಣಿ ಸಭೆ-ಸುದ್ದಿಗೋಷ್ಟಿ : ಏನ್ ಹೇಳಿದ್ರು ಜೋಶಿ? ಇಲ್ಲಿದೆ ಡೀಟೈಲ್ಸ್

Also Read: ಹುಬ್ಬಳ್ಳಿ ತಾರಿಹಾಳ ಅಗ್ನಿ ಅವಘಡ : ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಕೇಂದ್ರ ಸಚಿವ ಜೋಶಿ ಕಾಳಜಿಗೆ ಸಿಎಂ ಬೊಮ್ಮಾಯಿ ಸ್ಪಂದನೆ

Published On - 6:50 pm, Sat, 30 July 22