ಕಸ ವಿಚಾರಕ್ಕೆ ಕೊಲೆ: ಐವರು ಹಂತಕರಿಗೆ ಜೀವಾವಧಿ ಶಿಕ್ಷೆ, ದಂಡ
2016ರಲ್ಲಿ ಧಾರವಾಡದ ಹಾವೇರಪೇಟಿಯಲ್ಲಿ ನಡೆದ ವೃದ್ಧೆಯ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಧಾರವಾಡದ 4ನೇ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 5000 ರೂ ದಂಡ ವಿಧಿಸಿದೆ. ಮನೆ ಹಿಂದೆ ಕಸ ಹಾಕುವ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಕೊಲೆ ಮಾಡಲಾಗಿತ್ತು.

ಧಾರವಾಡ, ಫೆಬ್ರವರಿ 21: ಕಸ ಹಾಕುವ ವಿಚಾರಕ್ಕೆ ವೃದ್ಧೆಯನ್ನು ಕೊಲೆ (kill) ಮಾಡಿದ್ದ ಐವರು ಹಂತಕರಿಗೆ ಇದೀಗ ಧಾರವಾಡದ 4ನೇ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಜೊತೆಗೆ ತಲಾ 5,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. 2016ರಲ್ಲಿ ಘಟನೆ ನಡೆದಿತ್ತು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪರಾಧಿಗಳಾದ ಮಂಜುನಾಥ ಕದಂ, ಬಸವರಾಜ ಕದಂ, ಯಲ್ಲಪ್ಪ ಕದಂ, ಲಲಿತಾ ಕದಂ, ಕಮಲಾ ಕದಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2016ರಲ್ಲಿ ಧಾರವಾಡದ ಹಾವೇರಪೇಟಿ ಕುರುಬರ ಓಣಿಯಲ್ಲಿ ವೃದ್ಧೆ ಗಂಗಮ್ಮ ಕದಂರನ್ನು ಅಪರಾಧಿಗಳು ಕೊಂದಿದ್ದರು. ಮನೆ ಹಿಂದೆ ಕಸ ಹಾಕುವ ವಿಚಾರಕ್ಕೆ ಜಗಳ ನಡೆದು ಬಳಿಕ ಕೊಡಲಿಯಿಂದ ಕೊಚ್ಚಿ, ಕಟ್ಟಿಗೆಯಿಂದ ಹೊಡೆದು ಕೊಂದಿದ್ದರು.
ಟ್ರ್ಯಾಕ್ಟರ್ ಹರಿದು ಗಂಭೀರ ಗಾಯಗೊಂಡಿದ್ದ ಪೌರಕಾರ್ಮಿಕ ಸಾವು
ಟ್ರ್ಯಾಕ್ಟರ್ ಹರಿದು ಗಂಭೀರ ಗಾಯಗೊಂಡಿದ್ದ ಪೌರಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ತುಮಕೂರು ಜಿಲ್ಲೆಯ ಪಾವಗಡದ ಶನಿಮಹಾತ್ಮ ವೃತ್ತದಲ್ಲಿ ನಡೆದಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಜುನಾಥ್ (40) ಮೃತಪಟ್ಟಿದ್ದಾರೆ.
ಇದನ್ನೂ ಓದಿ: ತುಂಗಾ ನದಿ ಹಿನ್ನೀರಿನಲ್ಲಿ ಇಬ್ಬರು ಪುರುಷರು, ಓರ್ವ ಮಹಿಳೆ ಶವ ಪತ್ತೆ: ಬೆಚ್ಚಿಬಿದ್ದ ಜನ
ಪಾವಗಡ ಪುರಸಭೆ ಪೌರಕಾರ್ಮಿಕನಾಗಿ ಮಂಜುನಾಥ್ ಕೆಲಸ ಮಾಡುತ್ತಿದ್ದ. ಟ್ರ್ಯಾಕ್ಟರ್ ಹರಿದು ಗಂಭೀರ ಗಾಯಗೊಂಡಿದ್ದರು. ಗಾಯಾಳುಗೆ ಪಾವಗಡ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶ್ರೀಲಂಕಾ ಪ್ರವಾಸದಲ್ಲಿದ್ದ ಜೇವರ್ಗಿ ಮೂಲದ ಟೆಕ್ಕಿ ಸಾವು
ಶ್ರೀಲಂಕಾ ಪ್ರವಾಸದಲ್ಲಿದ್ದ ಜೇವರ್ಗಿ ಮೂಲದ ಟೆಕ್ಕಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್(ಕೆ) ಗ್ರಾಮದ ನಿವಾಸಿ ಸಂತೋಷ್ ಮಲ್ಲೆದ್(34) ಮೃತ ಟೆಕ್ಕಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಹೈದರಾಬಾದ್ನ ವೈದ್ಯ ವಿದ್ಯಾರ್ಥಿನಿ ದುರಂತ ಅಂತ್ಯ: ಮೂವತ್ತು ಗಂಟೆಗಳ ಬಳಿಕ ಶವ ಪತ್ತೆ
ಫೆ.15ರಂದು ಸ್ನೇಹಿತರ ಜತೆ ಶ್ರೀಲಂಕಾದ ಕ್ಯಾಂಡಿ ಪ್ರವಾಸಕ್ಕೆ ಟೆಕ್ಕಿ ಸಂತೋಷ್ ತೆರಳಿದ್ದರು. ಹೋಟೆಲ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಂದು ಕಲಬುರಗಿಗೆ ಟೆಕ್ಕಿ ಸಂತೋಷ್ ಶವ ಆಗಮಿಸಲಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.