ಗರ್ಭದಲ್ಲಿರುವಾಗಲೇ ಮಗು ಅಂಗವಿಕಲ ಎಂದು ತಿಳಿಸದೇ ನಿರ್ಲಕ್ಷ್ಯ: ಧಾರವಾಡ ಪ್ರಸೂತಿ ತಜ್ಞೆಗೆ 11 ಲಕ್ಷ ದಂಡ ವಿಧಿಸಿ ಆದೇಶ

18-20 ವಾರಗಳ ಸ್ಕ್ಯಾನಿಂಗ್‍ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಅನ್ನುವ ಬಗ್ಗೆ ತಪಾಸಣೆ ಮಾಡಿದಾಗ ವೈದ್ಯರಿಗೆ ಎಲ್ಲ ವಿವರ ಗೊತ್ತಾಗುತ್ತದೆ. ಆದರೆ ಡಾ. ಸೌಭಾಗ್ಯ ಎಲ್ಲ ಗೊತ್ತಿದ್ದರೂ ಪ್ರೀತಿ ಮತ್ತು ಪರಶುರಾಮ ಅವರಿಗೆ ತಿಳಿಸಿರಲಿಲ್ಲ.

ಗರ್ಭದಲ್ಲಿರುವಾಗಲೇ ಮಗು ಅಂಗವಿಕಲ ಎಂದು ತಿಳಿಸದೇ ನಿರ್ಲಕ್ಷ್ಯ: ಧಾರವಾಡ ಪ್ರಸೂತಿ ತಜ್ಞೆಗೆ 11 ಲಕ್ಷ ದಂಡ ವಿಧಿಸಿ ಆದೇಶ
ಧಾರವಾಡದ ಪ್ರಸೂತಿ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ
Follow us
TV9 Web
| Updated By: ಆಯೇಷಾ ಬಾನು

Updated on:Feb 08, 2023 | 2:46 PM

ಧಾರವಾಡ: ನಿರ್ಲಕ್ಷ್ಯ ಆರೋಪ ಹಿನ್ನೆಲೆ ಧಾರವಾಡದ ಪ್ರಸೂತಿ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿಗೆ 11.10 ಲಕ್ಷ ರೂ. ದಂಡ ವಿಧಿಸಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.

ಜಿಲ್ಲೆಯ ಶ್ರೀನಗರ ಭಾವಿಕಟ್ಟಿ ಪ್ಲಾಟ್ ನಿವಾಸಿ ಪರಶುರಾಮ ಘಾಟ ಅವರು ತಮ್ಮ ಪತ್ನಿ ಪ್ರೀತಿಯವರು ಗರ್ಭವತಿಯಾದ ಹಿನ್ನೆಲೆ 3ನೇ ತಿಂಗಳಿಂದ 9ನೇ ತಿಂಗಳಿನವರೆಗೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿರುವ ಪ್ರಶಾಂತ ನರ್ಸಿಂಗ್ ಹೋಮ್ ಗೆ ತೋರಿಸಿದ್ದರು. ಈ ವೇಳೆ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಪ್ರೀತಿಗೆ ಚಿಕಿತ್ಸೆ ನೀಡಿದ್ದರು. ಅವರು 2018 ಜುಲೈ 12 ರಿಂದ 2019 ರ ಜನವರಿ 8 ವರೆಗೆ ಒಟ್ಟು 5 ಬಾರಿ ಸ್ಕ್ಯಾನ್ ಮಾಡಿದ್ದಾರೆ. ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಅಂತಾ ತಿಳಿಸಿದ್ದರು. ಆದರೆ ಹೆರಿಗೆ ನೋವು ಆರಂಭವಾಗಿ, ಆಸ್ಪತ್ರೆಗೆ ಹೋದಾಗ‌ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲು ಡಾ. ಸೌಭಾಗ್ಯ ಕುಲಕರ್ಣಿ ಸಲಹೆ ನೀಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ ಪರಶುರಾಮ ತಮ್ಮ ಪತ್ನಿಯನ್ನು ಧಾರವಾಡದ ಎಸ್.ಡಿ.ಎಮ್. ಆಸ್ಪತ್ರೆಗೆ ಕರೆದೊಯ್ದಿದ್ದರು. 2019 ರ ಜನವರಿ 31 ರಂದು ಪ್ರೀತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಮಗುವನ್ನು ನೋಡಿದ ತಂದೆ-ತಾಯಿಗೆ ಶಾಕ್ ಆಗಿತ್ತು. ಏಕೆಂದರೆ ಮಗುವಿನ ಎರಡೂ ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು.

ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18-20 ವಾರಗಳ ಸ್ಕ್ಯಾನಿಂಗ್‍ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಅನ್ನುವ ಬಗ್ಗೆ ತಪಾಸಣೆ ಮಾಡಿದಾಗ ವೈದ್ಯರಿಗೆ ಎಲ್ಲ ವಿವರ ಗೊತ್ತಾಗುತ್ತದೆ. ಆದರೆ ಡಾ. ಸೌಭಾಗ್ಯ ಎಲ್ಲ ಗೊತ್ತಿದ್ದರೂ ಪ್ರೀತಿ ಮತ್ತು ಪರಶುರಾಮ ಅವರಿಗೆ ತಿಳಿಸಿರಲಿಲ್ಲ. 20 ವಾರಗಳಿಂದ 36 ವಾರಗಳಲ್ಲಿ ಮಾಡಿದ್ದ ಪ್ರೀತಿಯ ಸ್ಕ್ಯಾನಿಂಗನ್ನು ಪ್ರಸೂತಿ ತಜ್ಞರು ತೆಗೆದು ನೋಡಿದಾಗ ಅವರಿಗೆ ಮಗುವಿನ ಅಂಗವಿಕಲತೆ ಬಗ್ಗೆ ಗೊತ್ತಿದ್ದರೂ ಆ ವಿಷಯವನ್ನು ದೂರುದಾರರಿಗೆ ತಿಳಿಸದೇ ಮೋಸ ಮಾಡಿ, ವೈದ್ಯಕೀಯ ನಿರ್ಲಕ್ಷ ತೋರಿದ್ದರಿಂದ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಶುರಾಮ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ರೈಸ್​ ಮಿಲ್​ನಲ್ಲಿ ವಿದ್ಯುತ್ ಅವಘಡ, ಯುವಕ‌ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ಪ್ರಸೂತಿ ತಜ್ಞರು ಕಾಲಕಾಲಕ್ಕೆ ದೂರುದಾರರ ಪತ್ನಿಯ ಸ್ಕ್ಯಾನಿಂಗ್ ತೆಗೆದು ತಪಾಸಣೆ ಮಾಡಿದಾಗ ಅವರಿಗೆ ಗರ್ಭದಲ್ಲಿರುವ ಶಿಶುವಿನ ಅಂಗವಿಕಲತೆ ಗೊತ್ತಾಗುತ್ತದೆ. ಎಮ್.ಟಿ.ಪಿ.ಕಾಯ್ದೆ ಪ್ರಕಾರ 20 ವಾರಗಳ ಗರ್ಭದ ಸಮಯದಲ್ಲಿ ಶಿಶುವಿನ ಅಂಗವಿಕಲತೆಯ ಬಗ್ಗೆ ವೈದ್ಯರಿಗೆ ತಿಳಿದಿದ್ದು, ಆ ಸಂಗತಿಯನ್ನು ಅವರು ದೂರುದಾರರ ಗಮನಕ್ಕೆ ತಂದಿದ್ದರೆ ಅವರು ಕಾನೂನಿನ ಪ್ರಕಾರ ಅಂಗವಿಕಲ ಮಗುವನ್ನು ಗರ್ಭದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ಬೇಡವೋ ಅನ್ನುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಆದರೆ ಶಿಶುವಿನ ಅಂಗವಿಕಲತೆಯ ಮಹತ್ವದ ಸಂಗತಿಯನ್ನು ತಜ್ಞ ವೈದ್ಯರು ತಿಳಿಸದೇ, ವೈದ್ಯಕೀಯ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷತೆ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಅಭಿಪ್ರಾಯಾಪಟ್ಟಿದೆ. ವೈದ್ಯರ ಇಂಥ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಸರ್ವೋಚ್ಚ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕರ ಆಯೋಗದ ತೀರ್ಪುಗಳನ್ನು ಆಧರಿಸಿ ಜಿಲ್ಲಾ ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ.

ವೈದ್ಯರ ನಿರ್ಲಕ್ಷತನದಿಂದ ಜನಿಸಿರುವ ಅಂಗವಿಕಲ ಹೆಣ್ಣು ಮಗುವಿನ ಈವರೆಗಿನ ಚಿಕಿತ್ಸೆ, ಭವಿಷ್ಯದ ಚಿಕಿತ್ಸೆ ಮತ್ತು ಅದರ ಭವಿಷ್ಯದ ಜೀವನ ನಿರ್ವಹಣೆಯ ಬಗ್ಗೆ ಆಯೋಗ ತನ್ನ ತೀರ್ಪಿನಲ್ಲಿ ಚಿಂತಿಸಿದೆ. ಜನಿಸಿದ ಹೆಣ್ಣು ಮಗುವಿನ ಈವರೆಗಿನ ವೈದ್ಯಕೀಯ ಖರ್ಚಿಗೆ ರೂ. 50,000/-, ದೂರುದಾರರ ಓಡಾಟ ಮತ್ತು ಖರ್ಚು ವೆಚ್ಚಕ್ಕೆ ರೂ. 50,000/-, ಅಂಗವಿಕಲ ಮಗುವಿನ ಪಾಲಕರಿಗೆ ಆಗಿರೋ ಮಾನಸಿಕ ನೋವು ಮತ್ತು ಹಿಂಸೆಗಾಗಿ ರೂ. 2,00,000/-, ಅಂಗವಿಕಲ ಹೆಣ್ಣುಮಗುವಿನ ಭವಿಷ್ಯದ ವೈದ್ಯಕೀಯ ಖರ್ಚು ವೆಚ್ಚಕ್ಕಾಗಿ ರೂ. 3,00,000/-, ಸದರಿ ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯದ ಜೀವನ ನಿರ್ವಹಣೆಗಾಗಿ ರೂ. 5,00,000/-, ಈ ಪ್ರಕರಣದ ಖರ್ಚು ವೆಚ್ಚ ರೂ.10,000/- ಸೇರಿ ಒಟ್ಟು ರೂ.11,10,000/- ಪರಿಹಾರವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ಈ ಪರಿಹಾರ ನೀಡದಿದ್ದಲ್ಲಿ ಮೊತ್ತದ ಮೇಲೆ ಶೇ. 8% ರಂತೆ ಬಡ್ಡಿ ಕೊಡುವಂತೆ ತಜ್ಞ ವೈದ್ಯರಿಗೆ ಆಯೋಗ ಆದೇಶಿಸಿದೆ.

ಈ ಮೊತ್ತದಲ್ಲಿ ರೂ. 8,00,000/- ನ್ನು ಮಗುವಿನ ಹೆಸರಿನಲ್ಲಿ ಅವಳು ವಯಸ್ಕಳಾಗುವವರೆಗೆ ತಂದೆ-ತಾಯಿ ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿಯಾಗಿಡಲು ಮತ್ತು ಪರಿಹಾರದ ಪೂರ್ತಿ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಲು ಆಯೋಗ ತಿಳಿಸಿದೆ. ಇಂಥದ್ದೊಂದು ತೀರ್ಪು ನೀಡೋ ಮೂಲಕ ಆಯೋಗ ನಿರ್ಲಕ್ಷ ತೋರೋ ವೈದ್ಯರಿಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ

Published On - 2:44 pm, Wed, 8 February 23

ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ