ವಿಜಯದಶಮಿ ದಿನವೇ ಕಲ್ಲಿನ ಲಕ್ಷ್ಮಿದೇವಿ ವಿಗ್ರಹ ಪ್ರತ್ಯಕ್ಷ!

ವಿಜಯದಶಮಿ ದಿನವೇ ಕಲ್ಲಿನ ಲಕ್ಷ್ಮಿದೇವಿ ವಿಗ್ರಹ ಪ್ರತ್ಯಕ್ಷ!
ಹುಬ್ಬಳ್ಳಿ: ಖಾಲಿ ಜಾಗದಲ್ಲಿ ಏಕಾಏಕಿ ಪ್ರತ್ಯಕ್ಷವಾದ ಕಲ್ಲಿನ ವಿಗ್ರಹ ಹುಬ್ಬಳ್ಳಿಯಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಉದ್ಭವ ಮೂರ್ತಿಯನ್ನ ನೋಡಲು ಜನರೆಲ್ಲ ತಾ ಮುಂದು, ನಾಮುಂದು ಅಂತ ಅಲ್ಲಿಗೆ ಓಡೋಡಿ ಬರುತ್ತಿದ್ದು, ಖಾಲಿ ಜಾಗವೊಂದು ಹಲವು ಪ್ರಶ್ನೆಗೆ ಕಾರಣವಾಗಿದೆ.
ಎರಡ್ಮೂರು ತಿಂಗಳಿಂದ ಭಾರಿ ಮಳೆ ಸುರಿದು ಮಳೆ ನೀರು ನಿಂತಲ್ಲೆ ನಿಂತು ಗಲೀಜಾಗಿತ್ತು. ಆದ್ರೆ, ನಿನ್ನೆ ಜಾಗ ಸ್ವಚ್ಛಗೊಳಿಸೋಕೆ ಮುಂದಾಗಿದ್ದ ಜನರಿಗೆ ಒಂದು ಕಲ್ಲು ಸಿಕ್ಕಿದೆ. ಕಲ್ಲಿನ ಮೇಲೆ ಲಕ್ಷ್ಮಿದೇವಿಯ ಆಕೃತಿ ಕಂಡಿದ್ದು, ಜನರಿಗೆ ಅಚ್ಚರಿ ತಂದಿದೆ. ನವರಾತ್ರಿಯ ವಿಜಯದಶಮಿಯಂದೇ ದೇವಿ ಮೂರ್ತಿ ಸಿಕ್ಕಿದ್ರಿಂದ, ಇದು ಸಾಕ್ಷತ್​ ಮಹಾಲಕ್ಷ್ಮೀ ವಿಗ್ರಹ ಅಂತ ಎಲ್ಲರೂ ಪೂಜೆಗೆ ಇಳಿದಿದ್ದಾರೆ. ಕಲ್ಲು ಸಿಕ್ಕ ಜಾಗದ ಸುತ್ತ ಪೆಂಡಾಲ್​​​​​​​ ಹಾಕಿ, ಪೂಜೆ ಪುನಸ್ಕಾರ, ಲಕ್ಷ್ಮಿ ಸ್ತುತಿ ಮಾಡ್ತಿದ್ದಾರೆ.
ಇನ್ನು, ಕಲ್ಲಿನ ವಿಗ್ರಹದ ಸುದ್ದಿ ತಿಳೀತಿದ್ದಂತೆ ವಿವಿಧೆಡೆಯಿಂದ ಜನ ಆಗಮಿಸಿ ದರ್ಶನ ಪಡೀತಿದ್ದಾರೆ. ಕೋಲ್ಹಾಪುರದ ಮಹಾಲಕ್ಷ್ಮಿಗೆ ಇಲ್ಲಿ ನೆಲೆಸಿದ್ದಾಳೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆ ರೈಲ್ವೆ ಇಲಾಖೆಯ ಜಾಗ ಕಬ್ಜಾ ಮಾಡೋದಕ್ಕೆ, ಇದೇ ಹುಬ್ಬಳ್ಳಿಯಲ್ಲಿ ದೇವರು ಕಣ್ಣು ಬಿಟ್ಟಿದ್ದಾನೆ ಅನ್ನೋ ಸುದ್ದಿ ಹಬ್ಬಿಸಲಾಗಿತ್ತು. ಇದೀಗ ಇದು ಕೂಡ ಅಂತಹದ್ದೇ ಡ್ರಾಮಾನ ಅನ್ನೋ ಅನುಮಾನಕ್ಕೆ ಎಡೆಮಾಡಿದೆ. ಈ ಜಾಗ ವಶಪಡಿಸಿಕೊಳ್ಳೋದಕ್ಕೆ ದೇವಿ ಹೆಸ್ರಲ್ಲಿ ನಾಟಕ ಆಡ್ತಿದ್ದಾರಾ ಅನ್ನೋ ಅನುಮಾನ ಎದ್ದಿದೆ.

Click on your DTH Provider to Add TV9 Kannada