Hubli-Dharwad Municipal Corporation Mayor Election: ಮೇಯರ, ಉಪ ಮೇಯರ ಅಭ್ಯರ್ಥಿಯ ಹೆಸರು ಘೋಷಿಸಿದ ಬಿಜೆಪಿ; ಕಣಕ್ಕೆ ಇಳಿಯಲಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಪ್ತ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಹಿನ್ನಲೆ ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಪ್ತ ಧಾರವಾಡದ ಈರೇಶ್ ಅಂಚಟಗೇರಿ ಅವರ ಹೆಸರನ್ನು ಘೋಷಣೆ ಮಾಡಿದೆ.
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ (Hubli-Dharwad Municipal Corporation) ಮೇಯರ್, ಉಪ ಮೇಯರ್ ಚುನಾವಣೆ (Mayor, Deputy Mayor Election) ಹಿನ್ನಲೆ ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆಪ್ತ ಧಾರವಾಡದ ಈರೇಶ್ ಅಂಚಟಗೇರಿ ಅವರ ಹೆಸರನ್ನು ಘೋಷಣೆ ಮಾಡಿದೆ. ನಾಮಪತ್ರ ಸಲ್ಲಿಸಲು ಬಿಜೆಪಿ ಅಭ್ಯರ್ಥಿಗಳು ಆಗಮಿಸಿದ್ದಾರೆ. ಶಾಸಕ ಅಮೃತ ದೇಸಾಯಿ ಸೇರಿದಂತೆ ಬಿಜೆಪಿ ಪ್ರಮುಖರ ಜೊತೆ ಮೇಯರ್ ಸ್ಥಾನಕ್ಕೆ ಈರೇಶ್ ಅಂಚಟಗೇರಿ, ಉಪಮೇಯರ್ ಸ್ಥಾನಕ್ಕೆ ಉಮಾ ಮುಕುಂದ ಮಹಾನಗರ ಪಾಲಿಕೆಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಈ ಬಿಜೆಪಿ ಅಭ್ಯರ್ಥಿ ಆಯ್ಕೆಗು ಮುನ್ನ ಬಿಜೆಪಿ ಸಭೆಗಳ ಮೇಲೆ ಸಭೆ ನಡೆಸಿತು. ನಿನ್ನೆ ತಡರಾತ್ರಿ ವರೆಗೂ ಬಿಜೆಪಿ ನಡೆದ ಸಭೆ ನಡೆಸಿತ್ತು. ಇಂದು ಬೆಳಿಗ್ಗೆ ಮತ್ತೆ ಬಿಜೆಪಿ ಕೋರ್ ಕಮಿಟಿ ಹುಬ್ಬಳ್ಳಿ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿತ್ತು. ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಮತ್ತು ಅರವಿಂದ ಬೆಲ್ಲದ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಸಿದ ಬಿಜೆಪಿ ನಾಯಕರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದ ಈರೇಶ್ ಅಂಚಟಗೇರಿ ಅವರನ್ನು ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಮತ್ತು ಉಪ ಮೇಯರ ಅಭ್ಯರ್ಥಿಯಾಗಿ ಉಮಾ ಮುಕುಂದ ಘೋಷಣೆ ಮಾಡಿದ್ದಾರೆ.
ಇದನ್ನು ಓದಿ: ನೀವು ಕುಳಿತುಕೊಳ್ಳಿವ ಭಂಗಿ ನಿಮ್ಮ ಸ್ವಭಾವ ಹೇಳುತ್ತೆ!
ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬೆಳಗ್ಗೆ 9.30ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಗಡುವು ನೀಡಲಾಗಿತ್ತು. ಮಧ್ಯಾಹ್ನ 1ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯುಲಿದ್ದು, ಹಾಗೇನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 1.30ಕ್ಕೆ ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಚುನಾವಣೆಯ ಅಧಿಕಾರಿಯಾಗಿ ಬಿಸ್ವಾಸ್ ಕಾರ್ಯ ನಿರ್ವಹಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 82 ವಾರ್ಡ್ಗಳಿದ್ದು, ಗೆಲುವಿಗೆ ಮ್ಯಾಜಿಕ್ ನಂಬರ್ 42 ಅವಶ್ಯಕತೆ ಇದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೆಜೆಪಿಯಿಂದ 39, ಕಾಂಗ್ರೆಸ್ 33, ಜೆಡಿಎಸ್ 1, AIMIN 3 ಹಾಗೂ 6ಜನ ಪಕ್ಷೇತರರು ಆಯ್ಕೆಯಾಗಿದ್ದರು.
ಇದನ್ನು ಓದಿ: ತಾರಕಕ್ಕೇರಿದ ಮಳಲಿ ಮಂದಿರ ಮಸೀದಿ ಸಮರ! ಮಸೀದಿಯನ್ನು ಬಿಟ್ಟು ಕೊಡುತ್ತಾರೆ ಎಂಬ ಕನಸು ಕಾಣಬೇಡಿ: ಅಬ್ದುಲ್ ಮಜೀದ್
6 ಪಕ್ಷೇತರ ಅಭ್ಯರ್ಥಿಗಳಲ್ಲಿ ಮೂವರು ಬಿಜೆಪಿಗೆ ಸೇರ್ಪಡೆ ಹಿನ್ನೆಲೆ ಬಿಜೆಪಿ ಬಲ 42 ಆಗಿದೆ. ಪಕ್ಷೇತರರಾಗಿದ್ದ ದುರ್ಗಮ್ಮ ಬೀಜವಾಡ, ಚಂದ್ರಿಕಾ ಮೇಸ್ತ್ರಿ ಹಾಗೂ ಕಿಷನ್ ಬೆಳಗಾವಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ ಹಾಗೂ ಎಸ್.ವಿ. ಸಂಕನೂರ ಶೇಷ ಮತ ಚಲಾಯಿಸಲಿದ್ದಾರೆ. ಈ ಮೂಲಕ ಪಾಲಿಕೆ ಬಿಜೆಪಿ ಸದಸ್ಯರ ಬಲ 42 ವಿಶೇಷ ಜನಪ್ರತಿನಿಧಿಗಳ ಮತ 6 ಒಟ್ಟು ಬಿಜೆಪಿಗೆ ಸಲ್ಲಲಿವೆ ಒಟ್ಟ 48 ಮತಗಳು ಬಿಜೆಪಿ ಬೀಳಲಿದ್ದು, ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗಲಿದೆ. ಇನ್ನು ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಒಟ್ಟಾ ಸೇರಿದರೂ ಬಿಜೆಪಿಯನ್ನ ಮಣಿಸೋದು ಕನಸಿನ ಮಾತಾಗಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಸದಸ್ಯರು ಒಳಹೊಡೆತ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:53 am, Sat, 28 May 22