ಹುಬ್ಬಳ್ಳಿ: ಹೆಂಡತಿ ಮೇಲೆ ಅನುಮಾನ ಪಟ್ಟು ಅಪ್ರಾಪ್ತ ಬಾಲಕಿಯನ್ನು ದೇವಸ್ಥಾನದಲ್ಲಿ ಮದುವೆಯಾದ 3 ಮಕ್ಕಳ ತಂದೆ, ದೂರು ದಾಖಲು
ಹುಬ್ಬಳ್ಳಿಯಲ್ಲಿ ಮೂರು ಮಕ್ಕಳ ಅಂಕಲ್ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬರೋಕೆ ಕಾರಣ ಆ ಅಂಕಲ್ನ ಮೊದಲ ಹೆಂಡತಿ.

ಹುಬ್ಬಳ್ಳಿ: ಹೆಂಡತಿ, ಮೂವರು ಮಕ್ಕಳ ತಂದೆ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೊದಲನೇ ಪತ್ನಿ ಇದ್ರು, ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಗಂಡನ ವಿರುದ್ದ ಇದೀಗ ಮೊದಲ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಣದಾಸೆ ತೋರಿಸಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಭೂಪನ ವಿರುದ್ಧ ಎರಡು ದೂರು ದಾಖಲಾಗಿವೆ.
ಹುಬ್ಬಳ್ಳಿಯಲ್ಲಿ ಮೂರು ಮಕ್ಕಳ ಅಂಕಲ್ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬರೋಕೆ ಕಾರಣ ಆ ಅಂಕಲ್ನ ಮೊದಲ ಹೆಂಡತಿ. ಹುಬ್ಬಳ್ಳಿಯ ಮಹದೇವ ನಗರ ನಿವಾಸಿಯಾಗಿರುವ ಹನಮಂತ ಉಪ್ಪಾರ ವಿರುದ್ಧ ಮೊದಲ ಪತ್ನಿ ನೇತ್ರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆಲ್ಲ ಕಾರಣ ಹನಮಂತ ಉಪ್ಪಾರ ಮೊದಲ ಪತ್ನಿ ಬಿಟ್ಟು 17 ವರ್ಷದ ಬಾಲಕಿಗೆ ತಾಳಿ ಕಟ್ಟಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಹನಮಂತ ಉಪ್ಪಾರ ಹಣದಾಸೆ ತೋರಿಸಿ 17 ವರ್ಷದ ಬಾಲಕಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಯಾವಾಗ ಈ ವಿಷಯ ಬಯಲಿಗೆ ಬಂತೋ, ಮೊದಲ ಪತ್ನಿ ನೇತ್ರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೊದಲ ಹೆಂಡತಿ ಮೇಲೆ ಸಂಶಯ ಮಾಡಿ ಹನಮಂತ ಎರಡನೇ ಮದುವೆಯಾಗಿರೋದನ್ನ ವಿರೋಧಿಸಿ ನೇತ್ರಾ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು 17 ವರ್ಷದ ಬಾಲಕಿ ಮದುವೆಯಾದ ಹಿನ್ನಲೆ ಶಿಶು ಅಭಿವೃದ್ಧಿ ಅಧಿಕಾರಿಗಳು ಹುಬ್ಬಳ್ಳಿಯ ಅಶೋಕ ನಗರದಲ್ಲಿ ಹನಮಂತ ಉಪ್ಪಾರ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತ ಬಾಲಕಿ ಮದುವೆಯಾದ ಹಿನ್ನಲೆ ಎರಡು ದೂರು ದಾಖಲಾಗುತ್ತಲೇ ಮೂರು ಮಕ್ಕಳ ಅಂಕಲ್ ನಾಪತ್ತೆಯಾಗಿದ್ದಾನೆ.
ಇದನ್ನೂ ಓದಿ: ರಾಮನಗರ: ಒಂದೇ ಕುಟುಂಬದ 7 ಆತ್ಮಹತ್ಯೆಗೆ ಯತ್ನ: ಓರ್ವ ಮಹಿಳೆ ಸಾವು
ಇನ್ನು ಹನುಮಂತ ಉಪ್ಪಾರ ಹಾಗೂ ನೇತ್ರಾ ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಇಬ್ಬರಿಗೆ ಮೂರು ಮಕ್ಕಳು ಇವೆ. ಆದ್ರೆ ಇತ್ತೀಚೆಗೆ ಹನಮಂತ ಉಪ್ಪಾರ ನೇತ್ರಾ ಮೇಲೆ ಸಾಕಷ್ಟು ಅನುಮಾನ ಪಡ್ತಿದ್ದ ಎನ್ನಲಾಗಿದೆ. ಗಂಡ ಹೆಂಡತಿ ಇಬ್ಬರು ಬೇರೆ ಬೇರೆ ಇದ್ರು, ಮಕ್ಕಳನ್ನ ಮಾತ್ರ ಹನಮಂತ ತನ್ನ ಬಳಿ ಇಟ್ಟುಕೊಂಡಿದ್ದಾನೆ. ಅನುಮಾನ ಪಟ್ಟು ಮೊದಲ ಹೆಂಡತಿ ದೂರ ಮಾಡಿದ್ದ. ಸಾಕಷ್ಡು ಸಲ ಹಿರಿಯರು ಬುದ್ದಿ ಹೇಳಿದ್ರೂ ಗಂಡ ಹೆಂಡಿರ ಸಮಸ್ಯೆ ಬಗೆ ಹರದಿರಲಿಲ್ಲ. ಇದೇ ಕಾರಣಕ್ಕೆ ಹನಮಂತ ಮತ್ತೊಂದು ಮದುವೆಯಾಗಿದ್ದಾನೆ. ಹನಮಂತ ಹುಬ್ಬಳ್ಳಿಯಲ್ಲಿ ಸಣ್ಣ ಪುಟ್ಟ ಬಡ್ಡಿ ವ್ಯವಹಾರ ಮಾಡಿಕೊಂಡು ಸ್ವಲ್ಪ ಹಣ ಮಾಡಿಕೊಂಡಿದ್ದಾನೆ. ಹಣದಾಸೆ ತೋರಿಸಿ ಅಪ್ರಾಪ್ತ ಬಾಲಕಿಯನ್ನ ಮದುವೆಯಾಗಿದ್ದಾನೆ.
ಒಟ್ಟಾರೆ ಮೂರು ಮಕ್ಕಳಿದ್ರು, ಹೆಂಡತಿ ಮೇಲೆ ಅನುಮಾನ ಪಟ್ಟು ಅಂಕಲ್ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ್ದಾನೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿ ಇದ್ರೂ ಬಾಲ್ಯ ವಿವಾಹ ನಡೆದಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸಣ್ಣ ಪುಟ್ಟ ಬಡ್ಡಿ ವ್ಯವಹಾರ ಮಾಡೋನ ಜೊತೆ ಅಧಿಕಾರಿಗಳು ಕೈ ಜೋಡಿಸಿ ಪ್ರಕರಣ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿರೋ ಆರೋಪವೂ ಕೇಳಿ ಬಂದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ