ಧಾರವಾಡ: ಪ್ರತಿಷ್ಠಿತ ಗರಗ ಖಾದಿ ಸಂಘಕ್ಕೆ ಇನ್ನಾದರೂ ಸ್ವಂತ ಕಟ್ಟಡ ಕೊಡಿ ಸ್ವಾಮೀ
ಖಾದಿ ಉತ್ತೇಜಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇರುತ್ತವೆ. ಆದರೆ ಆ ಯೋಜನೆಗಳು ಕೆಳಹಂತದವರೆಗೆ ಮುಟ್ಟೋದು ಬಹಳ ಕಡಿಮೆ. ಇಂಥ ಸಂಸ್ಥೆಗಳಿಗೆ ಸರಕಾರ ಆರ್ಥಿಕವಾಗಿ ಸಹಾಯಹಸ್ತ ಚಾಚಿದರೆ ಅವು ಉಳಿದು, ಬೆಳೆದು ಮತ್ತೆ ಹತ್ತಾರು ಕೈಗಳಿಗೆ ಕೆಲಸ ಕೊಡೋದು ಗ್ಯಾರಂಟಿ.
ಖಾದಿ ಉತ್ತೇಜಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇರುತ್ತವೆ. ಆದರೆ ಆ ಯೋಜನೆಗಳು ಕೆಳ ಹಂತದವರೆಗೆ ಮುಟ್ಟೋದು ಬಹಳ ಕಡಿಮೆ. ಆದರೆ ಯಾವುದೇ ಸಹಾಯ ಪಡೆಯದೇ ಇದುವರೆಗೂ ಈ ಸಂಸ್ಥೆ ಖಾದಿಯ ಸೇವೆ ಮಾಡುತ್ತಲೇ ಬಂದಿದೆ. ಇಂಥ ಸಂಸ್ಥೆಗಳಿಗೆ ಸರಕಾರ ಆರ್ಥಿಕವಾಗಿ ಸಹಾಯಹಸ್ತ ಚಾಚಿದರೆ ಇಂಥ ಸಂಸ್ಥೆಗಳು ಉಳಿದು, ಬೆಳೆದು ಮತ್ತೆ ಹತ್ತಾರು ಕೈಗಳಿಗೆ ಕೆಲಸವನ್ನು ಕೊಡೋದು ಗ್ಯಾರಂಟಿ. ಕಟ್ಟಡ ಕೊಡಿ ಸ್ವಾಮೀ… ಇಡೀ ದೇಶದಲ್ಲಿ ಹಾರಾಡುವ ಖಾದಿಯ ತ್ರಿವರ್ಣ ಧ್ವಜದ ಬಟ್ಟೆ ತಯಾರಾಗುವುದು ಧಾರವಾಡ (Dharwad) ತಾಲೂಕಿನ ಗರಗ್ ಗ್ರಾಮದಲ್ಲಿನ ಖಾದಿ ಸಂಘದಲ್ಲಿ (Garag Khadi Sangh) ಅನ್ನೋದು ಬಹುತೇಕರಿಗೆ ಗೊತ್ತೇ ಇದೆ. ಆದರೆ ಇಷ್ಟು ದಿನ ಧ್ವಜಕ್ಕೆ ಬೇಕಾದ ಬಟ್ಟೆಯನ್ನು ಮಾತ್ರವೇ ತಯಾರಿಸುತ್ತಿದ್ದ ಗರಗ್ ಗ್ರಾಮದಲ್ಲೀಗ ಸ್ವತಂತ್ರ್ಯವಾಗಿ ಧ್ವಜವೇ ತಯಾರಾಗುತ್ತಿದ್ದು, ಇತ್ತೀಚೆಗೆ ಇದಕ್ಕೆ ಅನುಮತಿಯೂ ಸಹ ಸಿಕ್ಕಿತ್ತು. ಇಂಥ ಸಂಸ್ಥೆಗೆ ಇತ್ತೀಚಿಗೆ 2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ದೊರಕಿತ್ತು. ಅಂಥ ಸಂಸ್ಥೆಗೆ ಸ್ವಂತ ಕಟ್ಟಡವಿಲ್ಲದೆ ಬಳಲುತ್ತಿದೆ.
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ 1954ರಲ್ಲಿ ಖಾದಿ ಕೇಂದ್ರ ಸ್ಥಾಪನೆಯಾಗಿತ್ತು. ಅಂದಿನಿಂದಲೇ ಈ ಸಂಘ ರಾಷ್ಟ್ರ ಧ್ವಜಕ್ಕೆ ಬೇಕಾದ ಬಟ್ಟೆಯನ್ನು ನೇಯ್ದುಕೊಡುವ ಅಧಿಕೃತ ಸಂಸ್ಥೆಯ ಮಾನ್ಯತೆ ಪಡೆದುಕೊಂಡಿತ್ತು. ಬಟ್ಟೆಗೆ ಬೇಡಿಕೆ ಹೆಚ್ಚಾದಂತೆಲ್ಲ ಈ ಸಂಘದಲ್ಲಿ ದುಡಿಯುವವರ ಸಂಖ್ಯೆಯೂ ಬೆಳೆಯುತ್ತ ಹೋಗಿತ್ತು. ಇಲ್ಲಿನ ಬಟ್ಟೆಯಲ್ಲಿ ರಾಷ್ಟ್ರಧ್ವಜ ತಯಾರಾಗುತ್ತಿತ್ತಾದರೂ ಯಾವತ್ತೂ ಸಹ ಗರಗ ಕೇಂದ್ರದಲ್ಲಿ ರಾಷ್ಟ್ರ ಧ್ವಜ ತಯಾರಿಸುಗ ಅಧಿಕೃತ ಅನುಮತಿ ಲಭಿಸಿರಲಿಲ್ಲ.
ಆದರೆ ತಾವು ಕೂಡ ಸ್ವತಂತ್ರವಾಗಿ ಬಟ್ಟೆ ತಯಾರಿಸಬೇಕು ಎನ್ನುವ ಬಯಕೆ ಇತ್ತೀಚಿಗಷ್ಟೇ ಈಡೇರಿತ್ತು. ಕೆಲ ತಿಂಗಳ ಹಿಂದಷ್ಟೇ ಕೇಂದ್ರ ಖಾದಿ ಆಯೋಗ ಮತ್ತು ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಂದ ರಾಷ್ಟ್ರಧ್ವಜ ತಯಾರಿಸಲು ಅನುಮತಿ ಸಿಕ್ಕಿತ್ತು. ಇದಾದ ಬಳಿಕ ಇತ್ತೀಚಿಗೆ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ದೊರಕಿತ್ತು. ಹೀಗಾಗಿ ಈ ಸಂಸ್ಥೆಯ ಹೆಸರು ಮತ್ತಷ್ಟು ಹೆಚ್ಚಿತ್ತು. ಆದರೆ ಇಂಥ ಸಂಸ್ಥೆ ಸರಿಯಾದ ಕಟ್ಟಡವಿಲ್ಲದೇ ಸಮಸ್ಯೆಗೆ ಸಿಲುಕಿದೆ ಎಂದು ಬಸವಪ್ರಭು ಹೊಸಕೇರಿ, ಸೇವಾ ಸಂಘದ ಅಧ್ಯಕ್ಷ ತಿಳಿಸಿದ್ದಾರೆ.
ಕಟ್ಟಡದ ನಿರ್ಮಾಣಕ್ಕೆ ಅನುದಾನವನ್ನು ನಿರಂತರವಾಗಿ ಕೇಳುತ್ತಲೇ ಬರಲಾಗಿದೆ. ಅಲ್ಲದೇ ಖಾದಿಯನ್ನು ಪ್ರೋತ್ಸಾಹಿಸಲು ಈ ಸಂಸ್ಥೆಯ ಬೆಳವಣಿಗೆ ಬಹಳ ಮುಖ್ಯ. ಆದರೆ ಈ ಸಂಸ್ಥೆಯ ಕಟ್ಟಡ ತೀರಾನೇ ಹಳೆಯದಾಗಿದ್ದು ಮಳೆ ಬಂದರೆ ಸಾಕು ಸೋರಲು ಶುರುವಾಗುತ್ತೆ. ಹೀಗೆ ಸೋರುವ ಕಟ್ಟಡದಲ್ಲಿ ಖಾದಿ ಕೆಲಸವನ್ನು ಮಾಡೋದಾದರೂ ಹೇಗೆ ಅನ್ನೋದು ಸಿಬ್ಬಂದಿಯ ಪ್ರಶ್ನೆ. ಇದೇ ಕಾರಣಕ್ಕಾಗಿ ಈ ಸಂಸ್ಥೆಯನ್ನು ಉಳಿಸಿಕೊಳ್ಳಲು ಸರಕಾರ ಅನುದಾನವನ್ನು ನೀಡಬೇಕಾಗಿರೋದು ಬಹುಮುಖ್ಯ. ಈಗಾಗಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರೋ ಈ ಸಂಸ್ಥೆಗೆ ಸರಕಾರ ಸಹಾಯ ನೀಡೋ ಮೂಲಕ ಸಂಸ್ಥೆ ಮತ್ತಷ್ಟು ಬೆಳೆಯಲು ಅವಕಾಶ ನೀಡಬೇಕು ಅನ್ನೋದು ಸ್ಥಳೀಯರ ಆಗ್ರಹ.
ಖಾದಿ ಉತ್ತೇಜಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇರುತ್ತವೆ. ಆದರೆ ಆ ಯೋಜನೆಗಳು ಕೆಳಹಂತದವರೆಗೆ ಮುಟ್ಟೋದು ಬಹಳ ಕಡಿಮೆ. ಆದರೆ ಯಾವುದೇ ಸಹಾಯ ಪಡೆಯದೇ ಇದುವರೆಗೂ ಈ ಸಂಸ್ಥೆ ಖಾದಿಯ ಸೇವೆ ಮಾಡುತ್ತಲೇ ಬಂದಿದೆ. ಇಂಥ ಸಂಸ್ಥೆಗಳಿಗೆ ಸರಕಾರ ಆರ್ಥಿಕವಾಗಿ ಸಹಾಯಹಸ್ತ ಚಾಚಿದರೆ ಇಂಥ ಸಂಸ್ಥೆಗಳು ಉಳಿದು, ಬೆಳೆದು ಮತ್ತೆ ಹತ್ತಾರು ಕೈಗಳಿಗೆ ಕೆಲಸವನ್ನು ಕೊಡೋದು ಗ್ಯಾರಂಟಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ