ಸರಿ, ತಪ್ಪು ಸಾಬೀತುಪಡಿಸಿಕೊಳ್ಳಲು ಡಿಕೆಶಿ ವಿಫಲ; ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್
ಸರಿ, ತಪ್ಪು ಸಾಬೀತುಪಡಿಸಿಕೊಳ್ಳಲು ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ತನಿಖಾ ಸಂಸ್ಥೆಗಳು ಸಾಕಷ್ಟು ಸಮಯ ನೀಡಿದ್ದವು. ಅದರೆ ಸರಿ, ತಪ್ಪು ಸಾಬೀತುಪಡಿಸಿಕೊಳ್ಳುವಲ್ಲಿ ಡಿಕೆಶಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ತಪ್ಪಿಗೆ ಈಗ ಡಿಕೆ ಶಿವಕುಮಾರ್ ಇಡಿ ವಿಚಾರಣೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಡಿಕೆಶಿಗೆ ಇಡಿ ಕಸ್ಟಡಿ ಖಂಡಿಸಿ ಪ್ರತಿಭಟನಾ ಱಲಿ ನಡೆಸುತ್ತಿದ್ದಾರೆ. ಕಾನೂನು ಬಾಹಿರ ಕೆಲಸಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಯಾರೂ ಜಾತಿ, ಧರ್ಮ ದುರುಪಯೋಗಪಡಿಸಿಕೊಳ್ಳಬಾರದು. ಕಾನೂನು ಎಲ್ಲರಿಗೂ ಒಂದೇ, ಅದು […]
ಸರಿ, ತಪ್ಪು ಸಾಬೀತುಪಡಿಸಿಕೊಳ್ಳಲು ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ತನಿಖಾ ಸಂಸ್ಥೆಗಳು ಸಾಕಷ್ಟು ಸಮಯ ನೀಡಿದ್ದವು. ಅದರೆ ಸರಿ, ತಪ್ಪು ಸಾಬೀತುಪಡಿಸಿಕೊಳ್ಳುವಲ್ಲಿ ಡಿಕೆಶಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
ತಮ್ಮ ವೈಯಕ್ತಿಕ ತಪ್ಪಿಗೆ ಈಗ ಡಿಕೆ ಶಿವಕುಮಾರ್ ಇಡಿ ವಿಚಾರಣೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಡಿಕೆಶಿಗೆ ಇಡಿ ಕಸ್ಟಡಿ ಖಂಡಿಸಿ ಪ್ರತಿಭಟನಾ ಱಲಿ ನಡೆಸುತ್ತಿದ್ದಾರೆ. ಕಾನೂನು ಬಾಹಿರ ಕೆಲಸಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಯಾರೂ ಜಾತಿ, ಧರ್ಮ ದುರುಪಯೋಗಪಡಿಸಿಕೊಳ್ಳಬಾರದು. ಕಾನೂನು ಎಲ್ಲರಿಗೂ ಒಂದೇ, ಅದು ತನ್ನದೇ ಕ್ರಮಕೈಗೊಳ್ಳುತ್ತೆ ಎಂದು ಟ್ವಿಟ್ಟರ್ನಲ್ಲಿ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
Published On - 1:21 pm, Wed, 11 September 19