Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದ್ ಮಾಡುವುದರಿಂದ ಉಪಯೋಗವಿಲ್ಲ: ಪ್ರತಿಭಟನಕಾರರಿಗೆ ಗೃಹ ಸಚಿವ ಪರಮೇಶ್ವರ್ ಕಿವಿ ಮಾತು

ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು(ಸೆ.29) ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದು, ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಬಂದ್​ ವೇಳೆ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಇನ್ನು ಈ ಕರ್ನಾಟಕ ಬಂದ್​ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ ಪ್ರತಿಕ್ರಿಯಿಸಿದ್ದು, ಅದು ಈ ಕೆಳಗಿನಂತಿದೆ.

ಬಂದ್ ಮಾಡುವುದರಿಂದ ಉಪಯೋಗವಿಲ್ಲ: ಪ್ರತಿಭಟನಕಾರರಿಗೆ ಗೃಹ ಸಚಿವ ಪರಮೇಶ್ವರ್ ಕಿವಿ ಮಾತು
ಜಿ ಪರಮೇಶ್ವರ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Sep 29, 2023 | 10:33 AM

ಬೆಂಗಳೂರು, (ಸೆಪ್ಟೆಂಬರ್ 29): ಕಾವೇರಿ ನದಿ ನೀರು ವಿವಾದಕ್ಕೆ (Cauvery Water Dispute) ಸಂಬಂಧಿಸಿದಂತೆ ಇಂದು(ಸೆ.29) ಕರ್ನಾಟಕ ಬಂದ್ (Karnataka Bandh) ಆಚರಿಸಲಾಗುತ್ತಿದ್ದು, ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಬಂದ್​ ವೇಳೆ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಇನ್ನು ಈ ಕರ್ನಾಟಕ ಬಂದ್​ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ (Dr.G Parameshwar) ಪ್ರತಿಕ್ರಿಯಿಸಿದ್ದು, ಬಂದ್ ಮಾಡುವುದರಿಂದ ಉಪಯೋಗವಿಲ್ಲ. ಹೋರಾಟಗಾರರು ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು, ರಾಜ್ಯದ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನಲ್ಲಿ ಇಂದು(ಶುಕ್ರವಾರ) ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್. ಕಾನೂನಿನ ಪ್ರಕಾರ ಬಂದ್ ಮಾಡಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಪ್ರತಿಭಟನೆ, ಬಂದ್ ಮಾಡುವವರಿಗೆ ಮನವಿ ಮಾಡಿದ್ದೇನೆ. ಮುಂದುವರೆದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದೇವೆ. ಹಾಗಾಗಿ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: Karnataka Bandh Live: ಇಂದು ನವದೆಹಲಿಯಲ್ಲಿ ಕಾವೇರಿ ನಿರ್ವಹಣ ಪ್ರಾಧಿಕಾರದ ಸಭೆ

ಸುಖ ಸುಮ್ಮನೆ ಬಂಧಿಸುವುದಿಲ್ಲ. ಕಾನೂನು ವಿರುದ್ಧ ನಡೆದುಕೊಂಡರೆ ಬೇರೆ ವಿಧಿಯಿಲ್ಲ. ದೇಶದಲ್ಲಿ ಬಂದ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದೆ. ಅದನ್ನು ನಾವು ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ ಎಂದರೆ ಕೋರ್ಟ್ ಸರ್ಕಾರವನ್ನು ಹೊಣೆ ಮಾಡುತ್ತದೆ. ಜನ ಸಮುದಾಯಕ್ಕೆ ತೊಂದರೆ ಆಗುತ್ತದೆ. ಸಾವಿರಾರು ಕೋಟಿ ರೂಪಾಯಿ ‌ನಷ್ಟ ಆಗುತ್ತದೆ. ಒಂದೆಡೆ ಬರಗಾಲ ಎದುರಿಸುತ್ತಿದ್ದು, ಅಲ್ಲೂ ಸಹ ಸಾಕಷ್ಟು ನಷ್ಟವಾಗಿದೆ. ಇನ್ನೊಂದ ಕಡೆ ಬಂದ್ ಮಾಡುವುದರಿಂದ ಉಪಯೋಗವಿಲ್ಲ. ಲಾಭ ಆಗುವಂತ್ತಿದ್ದರೆ ಬಂದ್ ಮಾಡಿ ಎನ್ನಬಹುದು ಎಂದು ಹೇಳಿದರು.

ಇಂದು CWMA‌ ಸಭೆ ಇದೆ. ಅವರು ಏನು ತೀರ್ಮಾನ ಮಾಡ್ತಾರೆ ನೋಡಬೇಕು. ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು, ರಾಜ್ಯದ ಹಿತ ಕಾಪಡಬೇಕು. ಸಂಕಷ್ಟ ಸೂತ್ರ ನೀಡಿ ಎಂದು ಮನವಿ ಮಾಡುತ್ತೇವೆ. ಸಾಮಾನ್ಯವಾಗಿ ನೀರು ಹೋಗುತ್ತಿದೆ. ಆದ್ರೆ, ಗೇಟ್ ತೆಗೆದು ನೀರು ಬಿಡುವ ಪರಿಸ್ಥಿತಿ ಇಲ್ಲ. ಯಾವುದೇ ಬಂದ್ ಅನ್ನು ಮಾಡಬಾರದು. ಇದೆ ವಿಷಯ ಅಲ್ಲ, ಬೇರೆ ಯಾವುದೇ ಬಂದ್ ಮಾಡಬಾರದು ಎಂದು ಕೋರ್ಟ್ ಹೇಳಿದೆ. ಹೋರಾಟಗಾರ ಜೊತೆಗೆ ನಮ್ಮ ಆಯುಕ್ತರು, ಪೊಲೀಸರು ಮಾತಾಡುತ್ತಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ