AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಬಹುತೇಕ ಮದ್ಯದ ಅಂಗಡಿಗಳಲ್ಲಿ ಮದ್ಯ ಖಾಲಿ ! ಮದ್ಯ ಸರಬರಾಜು ಇಲ್ಲದೆ ಪರದಾಡುತ್ತಿರುವ ಅಂಗಡಿ ಮಾಲಿಕರು

ಬೆಂಗಳೂರು ನಗರದಲ್ಲಿ ಕಳೆದ ಒಂದು ವಾರಾದಿಂದ ಸರ್ವರ್ ತೊಂದರೆಯಿಂದ ಮದ್ಯದ ಅಂಗಡಿಗಳಿಗೆ  ಮದ್ಯ ಸರಬರಾಜು ಆಗುತ್ತಿಲ್ಲ.

ಬೆಂಗಳೂರಿನ ಬಹುತೇಕ ಮದ್ಯದ ಅಂಗಡಿಗಳಲ್ಲಿ ಮದ್ಯ ಖಾಲಿ !  ಮದ್ಯ ಸರಬರಾಜು ಇಲ್ಲದೆ ಪರದಾಡುತ್ತಿರುವ ಅಂಗಡಿ ಮಾಲಿಕರು
ಸಾಂಧರ್ಬಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on: Jul 07, 2022 | 4:41 PM

Share

ಬೆಂಗಳೂರು: ಕಳೆದ ಒಂದು ವಾರಾದಿಂದ ಸರ್ವರ್ ತೊಂದರೆಯಿಂದ (Server Problem) ನಗರದ ಮದ್ಯದ ಅಂಗಡಿಗಳಿಗೆ (Alcohol  Shops) ಮದ್ಯ ಸರಬರಾಜು ಆಗುತ್ತಿಲ್ಲ. ಹೀಗಾಗಿ ನಗರದ ಬಹುತೇಕ ಮದ್ಯದ ಅಂಗಡಿಗಳಲ್ಲಿ ಮದ್ಯ ಖಾಲಿಯಾಗಿದೆ. ಹೀಗಾಗಿ ಮದ್ಯದ ಅಂಗಡಿಯ ಮಾಲಿಕರು ಶಾಂತಿನಗರದ (Shanti Nagar) ಬಳಿ ಇರುವ ಕೆ.ಎಸ್.ಬಿ.ಸಿ.ಎಲ್ (KSBCL) ಕಛೇರಿಗೆ ಬಂದು ಅಂಗಡಿಗಳಲ್ಲಿ ಮದ್ಯದ ಸ್ಟಾಕ್ ಇಲ್ಲವೆಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ವರ್ ತೊಂದರೆಯಿಂದಾಗಿ ವ್ಯಾಪಾರಿಗಳಿಗೆ ನಷ್ಟವಾಗಿದೆ. ಜೊತೆಗೆ ಸರ್ಕಾರಕ್ಕು ಕೂಡ ಕೋಟ್ಯಾಂತರ ರುಪಾಯಿ ನಷ್ಟವಾಗುತ್ತಿದೆ.

K.S.B.C.L ಅಧಿಕಾರಿಗಳು ಮತ್ತು ಮದ್ಯ ಮಾರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಾತುಕತೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಮಾದ್ಯಮ ಮಾರಾಟಗಾರರು ಭಾಗಿಯಾಗಿದ್ದಾರೆ. ಮಾದ್ಯಮ ಮಾರಾಟಗಾರರ ಪ್ರಶ್ನೆಗಳಿಗೆ ಅಧಿಕಾರಿಗಳಿಗೆ ಉತ್ತರ ಕೊಡಲು ಆಗುತ್ತಿಲ್ಲ. ಸದ್ಯ ಮಾತುಕತೆ ಸ್ಥಳಕ್ಕೆ ವ್ಯವಸ್ಥಾಪಕ ನಿರ್ದೇಶಕ P.C ಜಾಫರ್ ಆಗಮಿಸಿದ್ದು, ಮದ್ಯದ ಮಾರಾಟಗಾರರ ಅಸೋಸಿಯೇಷನ್​​ನ ಜೊತೆ ಕಳೆದ ಮೂರು ಗಂಟೆಯಿಂದ ಚರ್ಚೆ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಶನಿವಾರದಿಂದ ಮದ್ಯ ಮಾರಾಟ ಬಂದ್ ಏಕೆ ಗೊತ್ತಾ? 

ಕರ್ನಾಟಕ ಸರ್ಕಾರವು ಮದ್ಯ ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಲೋಪಗಳನ್ನು 24 ಗಂಟೆಗಳ ಒಳಗೆ ಸರಿಪಡಿಸದಿದ್ದರೆ ಮುಂದಿನ ಶನಿವಾರದಿಂದ (ಜುಲೈ 9) ಮದ್ಯಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಸಿದರು. ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಖರೀದಿಗೆ ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಹತ್ತಾರು ಗೊಂದಲಗಳಿವೆ. ಸಕಾಲದಲ್ಲಿ ಮದ್ಯ ಪೂರೈಕೆಯಾಗದೆ ಬಾರ್ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ. ನಮ್ಮನ್ನು ಏಕೆ ಹೀಗೆ ಗೋಳು ತೆಗೆಯುತ್ತಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ಮೊದಲು ಕೆಎಸ್​ಬಿಸಿಎಲ್ ಅಕೌಂಟ್​ಗೆ ಹಣ ಹಾಕಿದರೆ ನಮಗೆ ಬೇಕಾದ ಮದ್ಯ ಸುಲಭವಾಗಿ ಸಿಗುತ್ತಿತ್ತು. ಬಿಲಿಂಗ್ ವ್ಯವಸ್ಥೆ ಮ್ಯಾನ್ಯುವಲ್ ಆಗಿ ಇತ್ತು. ಆದರೆ ಏಪ್ರಿಲ್ 4ರಿಂದ ಹೊಸ ಪದ್ಧತಿ ಆರಂಭವಾಯಿತು ಎಂದು ಅವರು ವಿವರಿಸಿದರು. ವೆಬ್ ಇಂಡೆಂಟಿಂಗ್ ವ್ಯವಸ್ಥೆ ಜಾರಿಯಾದ ನಂತರ ಎಲ್ಲವನ್ನೂ ಹಿಂದಿನ ದಿನವೇ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದರು.

ಇದನ್ನು ಓದಿ: ಭಾವನೆಗಳ ಸುನಾಮಿ ಮೂಡ್​ಸ್ವಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

ಸಗಟು ಮದ್ಯ ಖರೀದಿದಾರರ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅವರು, ಮೊದಲು ವೆಬ್​ಸೈಟ್​ಗೆ ಲಾಗಿನ್ ಆಗಿ ನಮ್ಮಲ್ಲಿ ಬೇಡಿಕೆಯಿರುವ ಬ್ರಾಂಡ್​ಗಳ ಮದ್ಯ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಲಾಗಿನ್ ಆಗುವ ಅವಧಿಯನ್ನು ಮೊದಲು ಬೆಳಿಗ್ಗೆ 9 ಗಂಟೆಗೆ ನಿಗದಿಪಡಿಸಿದ್ದರು. ನಂತರ ಸಂಜೆ 5ರಿಂದ 6 ಗಂಟೆಗೆ ಅವಕಾಶ ಮಾಡಿಕೊಟ್ಟರು ಎಂದು ಹೇಳಿದರು. ಈಗಂತೂ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಜುಲೈ 1ರಿಂದ ರಾಜ್ಯದಲ್ಲಿ ಎಲ್ಲಿಯೂ ಸಮರ್ಪಕ ರೀತಿಯಲ್ಲಿ ಮದ್ಯ ಖರೀದಿ ಸಾಧ್ಯವಾಗುತ್ತಿಲ್ಲ. ಒಂದೆಡೆ ಲೈಸೆನ್ಸ್​ಗಳು ನವೀಕರಣಗೊಂಡಿವೆ. ಇನ್ನೊಂದೆಡೆ ಸರ್ವ್ ವ್ಯವಸ್ಥೆ ಹಾಳಾಗಿದೆ. ಇಂದು (ಜುಲೈ 7) ಮುಂಜಾನೆಯಿಂದ ಇಡೀ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ವಿಷಾದಿಸಿದರು.

ಇದನ್ನು ಓದಿ:  ಮಾಜಿ ಕಾರ್ಪೊರೇಟರ್‌ ಬಳಿಯೇ ಲಂಚ ಸ್ವೀಕರಿಸುತ್ತಿದ್ದ ಬಿಎಂಟಿಎಫ್ ಮಹಿಳಾ ಸಬ್​​ಇನ್ಸ್​​ಪೆಕ್ಟರ್​​​ ಎಸಿಬಿ ಬಲೆಗೆ ಬಿದ್ದರು!

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ