ಟಿಪ್ಪು ಪಠ್ಯ ಪರಿಷ್ಕರಣೆಗೆ ಉತ್ತರ ನೀಡಲು ಮುಹೂರ್ತ ಫಿಕ್ಸ್; ಶಿಕ್ಷಣ ಸಚಿವ ಬಿಸಿ ನಾಗೇಶ್ರಿಂದ ನಾಳೆಯೇ ಮಾಹಿತಿ
ದಿನೇ ದಿನೇ ಟಿಪ್ಪು ಪಠ್ಯ ಕಡಿತಕ್ಕೆ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯ ಚಕ್ರತೀರ್ಥ ಈಗಾಗಲೇ ಇಲಾಖೆಗೆ ಕಡಿತದ ವರದಿ ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಟಿಪ್ಪು (Tippu) ಪಠ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಟಿಪ್ಪು ಪಠ್ಯವನ್ನು ಕೈಬಿಡಬೇಕೆಂಬ ಒತ್ತಾಯ ಹೆಚ್ಚಾಗಿದ್ದು, ಪರ- ವಿರೋಧಗಳ ಚರ್ಚೆ ಈಗಾಗಲೇ ವ್ಯಾಪಕವಾಗಿ ನಡೆಯುತ್ತಿದೆ. ಇನ್ನು ಈ ಎಲ್ಲ ಚರ್ಚೆಗಳ ನಡುವೆ ಟಿಪ್ಪು ಪಠ್ಯ ಪರಿಷ್ಕರಣೆಗೆ ಉತ್ತರ ನೀಡಲು ಕರ್ನಾಟಕ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ನಾಳೆಯೇ ಟಿಪ್ಪು ಪಠ್ಯ ಪರಿಷ್ಕರಣೆ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಮಾಹಿತಿ ನೀಡಲಿದ್ದಾರೆ. ಶುಕ್ರವಾರ ಶೀಘ್ರವೇ ಮಾಹಿತಿ ನೀಡುವುದಾಗಿ ಹೇಳಿದ್ದ ಬಿ ಸಿ ನಾಗೇಶ್ ಹೇಳಿದ್ದರು. ಸರ್ಕಾರದ ನಡೆ ತೀವ್ರ ಕುತೂಹಲ ಕೆರಳಿಸಿದೆ.
ದಿನೇ ದಿನೇ ಟಿಪ್ಪು ಪಠ್ಯ ಕಡಿತಕ್ಕೆ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯ ಚಕ್ರತೀರ್ಥ ಈಗಾಗಲೇ ಇಲಾಖೆಗೆ ಕಡಿತದ ವರದಿ ನೀಡಿದ್ದಾರೆ. ಅಧಿಕಾರಿಗಳಿಂದ ಬಿಸಿ ನಾಗೇಶ್ ಮಾಹಿತಿ ತರಿಸಿಕೊಂಡಿದ್ದಾರೆ. ನಾಳೆ ನಡೆಯುವ ಕಲಾಪದಲ್ಲಿ ಉತ್ತರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳು ಕೇಳುವ ಪ್ರಶ್ನೆಗೆ ಉತ್ತರಿಸಲು ಸಚಿವ ಬಿ ಸಿ ನಾಗೇಶ್ ಸಜ್ಜಾಗಿದ್ದಾರೆ.
ಸದ್ಯ ಸಂಪೂರ್ಣವಾಗಿ ಟಿಪ್ಪು ಪಠ್ಯ ಕೈ ಬಿಟ್ಟಿಲ್ಲ. ಆದರೆ, ಬಹುತೇಕ ವಿಚಾರಗಳಿಗೆ ಶಿಕ್ಷಣ ಇಲಾಖೆ ಕತ್ತರಿ ಹಾಕಿದೆ. ಹಾಗಾದರೆ ಎಷ್ಟು ಪರಿಷ್ಕರಣೆ ಆಗಿದೆ? ಎಷ್ಟನೇ ತರಗತಿಯವರೆಗೆ ಪಠ್ಯ ಪರಿಷ್ಕರಣೆ ಆಗಿದೆ? ಎಲ್ಲ ತರಗತಿಯ ಪಠ್ಯದಲ್ಲೂ ಟಿಪ್ಪು ಪಾಠ ಕಡಿತವಾಗಿದ್ಯಾ? ಎಂಬ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.
ಮಕ್ಕಳಿಗೆ ಯಾವುದೇ ಆತಂಕ ಬೇಡ- ಬಿಸಿ ನಾಗೇಶ್: ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಮಕ್ಕಳಿಗೆ ಯಾವುದೇ ರೀತಿಯ ಆತಂಕ ಬೇಡ. 80 % ಮುಗದಿರುವ ಸಿಲಾಬಸ್ನಲ್ಲಿಯೇ ಪ್ರಶ್ನೆ ಪತ್ರಿಕೆ ಬರುತ್ತದೆ. ಈ ಸಾರಿ ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗಳನ್ನು ಜಾಸ್ತಿ ನೀಡಲಾಗುತ್ತದೆ. ಪಠ್ಯ ಮುಗಿಯದೇ ಇರುವ ಶಾಲೆಯ ವಿದ್ಯಾರ್ಥಿಗಳಿಗೆ ಬೇರೆ ಪ್ರಶ್ನೆ ಆಯ್ಕೆಮಾಡುವ ಅವಕಾಶ ಇದೆ. ಹಾಗಾಗಿ ಧೈರ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಿರಿ ಎಂದರು.
ಹಿಜಾಬ್ ವಿವಾದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಕರ್ನಾಟಕ ಹೈಕೋರ್ಟ್ ರಾಜ್ಯದ ಆದೇಶವನ್ನ ಎತ್ತಿಹಿಡಿದಿದೆ. ಶಾಲೆ ಸೂಚಿಸಿದ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು. ನಾಳೆಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸುವಂತಿಲ್ಲ. ಹೊರಗಿನ, ರಿಪಿಟರ್ಸ್ಗೆ ಸಮವಸ್ತ್ರದ ಅವಶ್ಯಕತೆಯಿಲ್ಲ. ನಾಳೆ ಸುಸೂತ್ರವಾಗಿ ಪರೀಕ್ಷೆಗಳು ನಡೆಯುತ್ತದೆ ಎಂದು ಬಾಗಲಕೋಟೆಯಲ್ಲಿ ಶಿಕ್ಷಣ ಸಚಿವರು ಹೇಳಿದ್ದಾರೆ
ಇದನ್ನೂ ಓದಿ
ಭ್ರಮನಿರಸನಗೊಂಡ ಸೈನಿಕರಿಂದ ರಷ್ಯಾದ ಕರ್ನಲ್ ಹತ್ಯೆ: ಉಕ್ರೇನ್ನಲ್ಲಿ ಸತ್ತ ರಷ್ಯಾ ಸೇನಾಧಿಕಾರಿಗಳ ಸಂಖ್ಯೆ 7ಕ್ಕೆ
ಏಪ್ರಿಲ್ 30ರೊಳಗೆ ಇನ್ನಷ್ಟು ಯೋಜನೆಗಳಿಗೆ ಕಾರ್ಯಾದೇಶ; ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ
Published On - 11:19 am, Sun, 27 March 22