ಬ್ಲಾಕ್ ಅಂಡ್ ವೈಟ್ ದಂಧೆ ಕೇಸ್ ಪ್ರಕರಣ; ಇನ್ನೆರಡು ದಿನಗಳಲ್ಲಿ EDಗೆ ಹಸ್ತಾಂತರ ಸಾಧ್ಯತೆ​

ಕೇರಳಾದಲ್ಲಿ ಇದ್ದುಕೊಂಡು ಕೋಟಿ ಕೋಟಿ ಹಣವನ್ನು ವರ್ಗಾವಣೆ ಮಾಡ್ತಿದ್ದ ರಿಯಾಜ್, ಕೇರಳದಿಂದ ಹಣವನ್ನು ಕೋರಿಯರ್ ಮೂಲಕ ನಗರಕ್ಕೆ ಕಳುಹಿಸುತ್ತಿದ್ದ. ವಾಟ್ಸಪ್ ಮೂಲಕ ಕೊಡೋ ಅಕೌಂಟ್ ನಂಬರ್​ಗೆ ಇಂತಿಷ್ಟು ಹಣ ಹಾಕುವಂತೆ ಸೂಚನೆ ಮಾಡಲಾಗುತ್ತಿತ್ತು.

ಬ್ಲಾಕ್ ಅಂಡ್ ವೈಟ್ ದಂಧೆ ಕೇಸ್ ಪ್ರಕರಣ; ಇನ್ನೆರಡು ದಿನಗಳಲ್ಲಿ EDಗೆ ಹಸ್ತಾಂತರ ಸಾಧ್ಯತೆ​
ಫೈಜಲ್, ಸಾಲಿಹ್, ಅಬ್ದುಲ್ ಮನಾಫ್, ಮಹಮದ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 27, 2022 | 11:43 AM

ಬೆಂಗಳೂರು: ಪುಟ್ಟೆನಹಳ್ಳಿಯಲ್ಲಿ ಪತ್ತೆಯಾದ ಬ್ಲಾಕ್ ಅಂಡ್ ವೈಟ್ (Black and white) ದಂಧೆ ಕೇಸ್​ ಬಗೆದಷ್ಟು ಬಯಲಾಗುತ್ತಿದೆ. ನೂರಾರು ಕೋಟಿಯ ಕಿಂಗ್​ಪಿನ್ ಸಿಗದೆ ಪೊಲೀಸರು ಸುಸ್ತಾಗಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಸಿಕ್ಕ ಸುಳಿವು ಹಿಡಿದು ಪುಟ್ಟೇನಹಳ್ಳಿ ಪೊಲೀಸರು ಬೆನ್ನು ಹತ್ತಿದ್ದರು. ಈ ವೇಳೆ ಕೇರಳ ಟು ಬೆಂಗಳೂರು ಬರೋಬ್ಬರಿ 600 ಕೋಟಿ ರೂ. ವರ್ಗಾವಣೆಯಾಗಿರುವ ಸಂಗತಿ ಪತ್ತೆಯಾಗಿದ್ದು, ಪ್ರಕರಣದಲ್ಲಿ ನಾಲ್ಕು ಆರೋಪಿಗಳು ಸಿಕ್ಕಿದ್ರೂ ಪ್ರಮುಖ ಆರೋಪಿಯ ಸುಳಿವಿರಲಿಲ್ಲ. ನಾಲ್ಕು ತಿಂಗಳ‌ ಕಾರ್ಯಾಚರಣೆ ಬಳಿಕ‌ ಕೇರಳಾದಿಂದ ಪುಟ್ಟೇನಹಳ್ಳಿ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಿಂದ ಇದುವರೆಗೂ ನಾಲ್ಕು ತಿಂಗಳು ಕೇರಳಾ ಸುತ್ತಾಡಿದ್ದ ಪೊಲೀಸರು, ನಾಲ್ಕು ತಿಂಗಳು ಹುಡುಕಾಟ ಮಾಡಿದ್ರೂ ಪ್ರಮುಖ ಆರೋಪಿ ರಿಯಾಜ್ ಸುಳಿವು ಸಿಕ್ಕಿಲ್ಲ. ಕಳೆದ ಡಿಸೆಂಬರ್ ೩ ರಂದು ಎಟಿಎಂ ಮಿಷನ್​ನಲ್ಲಿ ಹಣ ವರ್ಗಾವಣೆ ಮಾಡಿದ್ದ ನಾಲ್ವರ ಬಂಧನ ಆಗಿತ್ತು. ಫೈಜಲ್, ಸಾಲಿಹ್, ಅಬ್ದುಲ್ ಮನಾಫ್, ಮಹಮದ್​ ಪುಟ್ಟೇನಹಳ್ಳಿ ಪೊಲೀಸರು ಬಂಧನ ಮಾಡಿದ್ದರು. ಬ್ಲಾಕ್ ಅಂಡ್ ವೈಟ್ ದಂಧೆ ಹಿಂದೆ ಇರೋ ಕಿಂಗ್ ಪಿನ್ ರಿಯಾಜ್ ಅಂತ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಕೇರಳಾದಲ್ಲಿ ಇದ್ದುಕೊಂಡು ಕೋಟಿ ಕೋಟಿ ಹಣವನ್ನು ವರ್ಗಾವಣೆ ಮಾಡ್ತಿದ್ದ ರಿಯಾಜ್, ಕೇರಳದಿಂದ ಹಣವನ್ನು ಕೋರಿಯರ್ ಮೂಲಕ ನಗರಕ್ಕೆ ಕಳುಹಿಸುತ್ತಿದ್ದ. ವಾಟ್ಸಪ್ ಮೂಲಕ ಕೊಡೋ ಅಕೌಂಟ್ ನಂಬರ್​ಗೆ ಇಂತಿಷ್ಟು ಹಣ ಹಾಕುವಂತೆ ಸೂಚನೆ ಮಾಡಲಾಗುತ್ತಿತ್ತು. ರಿಯಾಜ್ ಕೊಟ್ಟ ಮೆಸೇಜ್​ನಂತೆ ಹಣ ಹಾಕ್ತಾ ಇದ್ದ ನಾಲ್ವರ ಟೀಂ, ನಾಲ್ವರ ತಂಡ 6 ತಿಂಗಳಲ್ಲಿ‌ 3500 ಅಕೌಂಟ್​ಗಳಿಗೆ ಹಣ ಡೆಪಾಸಿಟ್ ಮಾಡಿದ್ದಾರೆ. ಆದ್ರೆ ಹವಾಲ ಮೂಲವನ್ನು ಪತ್ತೆ ಮಾಡುವಲ್ಲಿ ನಗರ ಪೊಲೀಸರು ವಿಫಲರಾಗಿದ್ದಾರೆ. ಈಗ ಇಡೀ ಪ್ರಕರಣವನ್ನು ಪುಟ್ಟೇನಹಳ್ಳಿ ಪೊಲೀಸರು ಇಡಿಗೆ ವರ್ಗಾವಣೆ ಮಾಡಲಿದ್ದಾರೆ. ಬ್ಲಾಕ್ ಅಂಡ್ ವೈಟ್ ಕೇಸ್ ತನಿಖೆ ಇಡಿ ಕೈಗೆತ್ತಿಕೊಳ್ಳಲಿದೆ. ಇನ್ನೇರಡು ದಿನಗಳಲ್ಲಿ ಪ್ರಕರಣ ಹಸ್ತಾಂತರ ಸಾಧ್ಯತೆಯಿದ್ದು, ಈಗಾಗಲೇ  ಇಡಿ ಅಧಿಕಾರಿಗಳು ಕೆಲ ಮಾಹಿತಿ ಪಡೆದುಕೊಂಡಿದ್ದಾರೆ. ಮಾಹಿತಿ ಆಧರಿಸಿ ಇಡಿ ಆರೋಪಿಗಳ ವಿಚಾರಣೆ ನಡೆಸಲಿದೆ. ಈ ಬಳಿಕ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಾಧ್ಯತೆಯಿದ್ದು, ಬ್ಲಾಕ್ ಅಂಡ್ ವೈಟ್ ಹಿಂದೆ ವಿದೇಶದ ಲಿಂಕ್ ಶಂಕೆ ವ್ಯಕ್ತವಾಗಿದೆ.

ಕೇರಳಾ ಮೂಲದ ಕಿಂಗ್ ಪಿನ್ಗಳು ನಗರವನ್ನು ದಂಧೆಯ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರ ಟೀಂ ಜೂನ್ ನಲ್ಲಿ ಬೆಂಗಳೂರಿಗೆ ಆಗಮಿಸಿತ್ತು. ಫೈಜಲ್, ಅಬ್ದುಲ್ ಮುನಾಫ್, ಫಾಸಿಲ್, ಮೊಹಮ್ಮದ್ ಸಾಲಿಯರ ಗ್ಯಾಂಗ್ ಕಂಡು ಕಾಣದಂತೆ ದೂರದಲ್ಲಿದ್ದ ಕಿಂಗ್ ಪಿನ್ ರಿಯಾಜ್ ಜೊತೆ ಸಂಪರ್ಕ ಹೊಂದಿರುತ್ತಿತ್ತು. ಕಿಂಗ್ ಪಿನ್ ರಿಯಾಜ್ ಹೇಳಿದಂತೆ ಕಂಪ್ಲೀಟ್ ಬ್ಲಾಕ್ ಅಂಡ್ ವೈಟ್ ದಂಧೆ ನಡೆಯುತಿತ್ತು.

ಇದನ್ನು ಓದಿ:

ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡುವ ಹಕ್ಕು ಸರ್ಕಾರಕ್ಕಿಲ್ಲ: CFI ಸಂಘಟನೆ ಗರಂ