ಸಾವು ಗೆದ್ದ ಅಜ್ಜ; ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅಜ್ಜನ ಮೇಲೆ ಮೇಲ್ಛಾವಣಿ ಕುಸಿತ, ಬದುಕುಳೀತು ಜೀವ
ಆ ವೃದ್ಧ ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದ. ಪತ್ನಿಯೂ ಪತಿಯ ಆರೈಕೆಯಲ್ಲಿ ಪಕ್ಕಕ್ಕೆ ಕುಳಿತಿದ್ಲು. ಚಹಾ ಬೇಕಾ ಅಂತ ಪತಿ ಕೇಳಿದ್ದಾಳೆ. ಅಷ್ಟೇ ದಿಢೀರ್ ಅಂತ ಮನೆಯ ಮೇಲ್ಛಾವಣಿ ಕುಸಿದಿದೆ. ವೃದ್ಧ ಸಂಪೂರ್ಣ ಮಣ್ಣಲ್ಲಿ ಸಿಲುಕಿದ್ದ ಅಜ್ಜ ವಿಲವಿಲ ನರಳಾಡುತ್ತಿದ್ದ. ಅಜ್ಜ ಸತ್ತೇ ಹೋಗ್ಬಿಟ್ಟ ಅಂತ ಪತ್ನಿ ಬಿಕ್ಕಿ ಬಿಕ್ಕಿ ಅಳುತ್ತಿದ್ಲು. ಆದ್ರೆ, ಗಟ್ಟಿ ಆಯುಷ್ಯದ ಅಜ್ಜ ಮಣ್ಣಿನಡಿ ಭರ್ಜರಿ ಗೊರೆಕೆ ಹೊಡೆಯುತ್ತದ್ನಂತೆ. ಸಾವು ಗೆದ್ದು ಬಂದ ಅಜ್ಜ ಈಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗ ಇಡೀ ಕುಟುಂಬ ಫುಲ್ ಖಷಿಯಲ್ಲಿದೆ.
ಗದಗ, ಜೂನ್.12: ಗದಗ (Gadag) ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಇದ್ರಿಂದ ಮಣ್ಣಿನ ಮನೆಗಳಲ್ಲಿ ವಾಸವಾಗಿರೋರು ಭಯ ಪಡುವಂತಾಗಿದೆ. ನಿರಂತರ ಮಳೆಗೆ ಮಣ್ಣಿನ ಮನೆ ಮೇಚ್ಛಾವಣಿ ಕುಸಿಯುತ್ತಿವೆ. ಗದಗ ನಗರದ ಕಾನತೋಟ ಓಣಿಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಣ್ಣಿನಡಿ ಸಿಲುಕಿ ವೃದ್ಧನೊಬ್ಬ ನರಳಾಡಿದ ಘಟನೆ ನಡೆದಿದೆ. ರಾಮಣ್ಣ ಶಿಂಧೆ ಎಂಬ 85 ವರ್ಷದನ ಮೇಲೆ ಮೇಲ್ಛಾವಣಿ ಕುಸಿದು ದೇಹದ ಮೇಲೆ ಒಂದಡಿ ಮಣ್ಣು ಬಿದ್ದು, ಒದ್ದಾಡುತ್ತಿದ್ದ. ಇನ್ನೇನೂ ಈ ಅಜ್ಜ ಸತ್ತೇ ಹೋಗಿಬಿಟ್ಟ ಅಂತ ಮನೆಯವ್ರು ಸೇರಿ ಎಲ್ಲರೂ ಅಂದ್ಕೊಂಡಿದ್ರು. ಪತಿ ಸ್ಥಿತಿ ನೋಡಿ ಪತ್ನಿ ಸುನಿತಾ ಕೂಡ ಗೋಳಾಡುತ್ತಿದ್ಲು. ಏನಾಯ್ತು ಅಂತ ಅಕ್ಕಪಕ್ಕ ಜನ್ರು ಓಡಿ ಬಂದಿದ್ದಾರೆ. ಮಣ್ಣಿನಡಿ ಸಿಲುಕಿ ವೃದ್ಧನ ರಕ್ಷಣೆ ಮಾಡಿದ್ದಾರೆ.
ಸ್ಥಳೀಯ ಯುವಕರು ಕಾರ್ಯಚಾರಣೆ ಮಾಡಿ ಮಣ್ಣಿನ ಸಿಲುಕಿ ವೃದ್ಧ ರಾಮಣ್ಣನ್ನು ಹೊರಗಡೆ ತೆಗೆದಿದ್ದಾರೆ. ಸತ್ತೇ ಹೋಗಿಬಿಟ್ಟ ಅಂದ್ಕೊಂಡಿದ್ದ ಅಜ್ಜ ಭರ್ಜರಿ ಗೊರಕೆ ಹೊಡಯುತ್ತಿದ್ನಂತೆ. ತಕ್ಷಣ ಸ್ಥಳೀಯರು ಆಟೋದಲ್ಲಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಅಜ್ಜ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ತಾಯಿದ್ದಾರೆ. ಕೆಲ ಭಾಗದಲ್ಲಿ ಮೂಳೆಗಳು ಮುರಿದಿವೆ ಅಂತ ವೈದ್ಯರು ಹೇಳಿದ್ದಾರೆ. ಆದರೆ, ಅಜ್ಜ ಸಾವು ಗೆದ್ದು ಬಂದು ಎಲ್ಲರನ್ನೂ ಆಶ್ಚರ್ಯಗೊಂಡಿದ್ದಾರೆ. ಇಡೀ ಕುಟುಂಬ ಈ ಖುಷಿಯಲ್ಲಿದ್ದಾರೆ.
ಇದನ್ನೂ ಓದಿ: ಮರಳು ತುಂಬಿದ್ದ ಲಾರಿ ರಸ್ತೆ ಬದಿಯ ಗುಡಿಸಲಿನ ಮೇಲೆ ಪಲ್ಟಿಯಾಗಿ ಒಂದೇ ಕುಟುಂಬದ 8 ಮಂದಿ ಸಾವು
ರಾಮಣ್ಣ ಶಿಂಧೆ ಅನಾರೋಗ್ಯದಿಂದ ಬಳಲುತ್ತಿದ್ದರು. ಮನೆಯಲ್ಲೇ ಹಾಸಿಗೆ ಹಿಡಿದಿದ್ದ. ಮನೆಯಲ್ಲಿ ರಾಮಣ್ಣ ಹಾಗೂ ಪತ್ನಿ ಸುನಿತಾ ಇಬ್ಬರೇ ವಾಸ ಮಾಡ್ತಾಯಿದ್ರು. ಹುಟ್ಟಿ ಬೆಳೆದ ಮನೆ ಬಿಟ್ಟು ಬರಲು ವೃದ್ಧ ರಾಮಣ್ಣಿಗೆ ಸುತಾರಾಂ ಇಷ್ಟವಿಲ್ಲ. ಈಗ ಸಾವು ಗೆದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು ಹುಟ್ಟಿ ಬೆಳೆದ ಮನೆಯದ್ದೇ ಅಜ್ಜನಿಗೆ ಚಿಂತೆ. ನಿನ್ನೆ ಸಂಜೆ ವೇಳೆಗೆ ಈ ಘಟನೆ ನಡೆದಿದೆ. ಗಂಡನ ನರಳಾಟ ನೋಡಿ ಪತ್ನಿ ಭಯಗೊಂಡು ಚಿರಾಡಿದ್ದಾರೆ. ತಕ್ಷಣ ಸ್ಥಳೀಯರಿಂದ ಮಣ್ಣಿನ ಅಡಿಯಲ್ಲಿ ಸಿಲುಕಿ ನರಳಾಡುತ್ತಿದ್ದ ವೃದ್ದನ ಅರ್ಧಗಂಟೆ ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಿದ್ದಾರೆ. ಫೋನ್ ಮಾಡಿದ್ರು ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಆಗಮಿಸಿಲ್ಲ ಇದು ಅವಳಿ ನಗರದ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ. ದೃಶ್ಯಗಳು ನೋಡಿ ನಮ್ಮಜ್ಜ ಸತ್ತೇ ಹೋಗ್ಬಿಟ್ಟ ಅಂದ್ಕೊಂಡಿದ್ವಿ. ದೇವರ ದಯೇ ಬದುಕಿದ್ದಾರೆ. ಇನ್ನೂ ಅಜ್ಜಿ ಈ ಹಿಂದೆಯೂ ಎರಡು ಬಾರಿ ಸಾವು ಗೆದ್ದು ಬಂದಿದ್ದಾನೆ. ಇದು ಮೂರನೇ ಬಾರಿ ಅಂತ ಕುಟುಂಬಸ್ಥರು ಹೇಳ್ತಾಯಿದ್ದಾರೆ.
ಆಯುಷ್ಯ ಗಟ್ಟಿ ಇದ್ರೆ, ಯಾವ ಯಮರಾಜನಿಂದಲೂ ಕರೆದ್ಯೊಯಲು ಸಾಧ್ಯವಿಲ್ಲ ಅಂತ ಅಜ್ಜ ಸಾಬೀತು ಮಾಡಿದ್ಧಾನೆ. ಅಜ್ಜ ಸಿಲುಕಿನದ ಭಯಾನಕ ದೃಶ್ಯಗಳು ನೋಡಿದ್ರೆ ಅಬ್ಬ ಅಜ್ಜ ಹೋಗಿದ್ದಾನಂತೆ ಅಂದ್ಕೊಂಡಿದ್ರು. ಪತ್ನಿ ಕೂಡ ಅಜ್ಜ ಸಾವನ್ನಪ್ಪಿದ್ದಾನೆ ಅಂತ ಕಣ್ಣೀರು ಹಾಕ್ತಾಯಿದ್ಲಂತೆ. ಆದ್ರೆ, ಅಜ್ಜ ಈಗ ಸಾವು ಗೆದ್ದು ಬಂದಿದ್ದಾನೆ. ಆಸ್ಪತ್ರೆಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಹೀಗಾಗಿ ಇಡೀ ಕುಟುಂಬ ಫುಲ್ ಖುಷಿಯಲ್ಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ