ರಸ್ತೆ ದುರಸ್ತಿಗೆ ಆಗ್ರಹಿಸಿ ರೊಚ್ಚಿಗೆದ್ದ ಆಟೋ ಚಾಲಕರು, ನಗರಸಭೆ ಸಾಮಾನ್ಯ ಸಭೆಗೆ ನುಗ್ಗಿ ಆಕ್ರೋಶ

ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನೆಲೆ ಕುಡಿಯುವ ನೀರಿನ ಬಗ್ಗೆ ಚರ್ಚಿಸಲು ಅಧ್ಯಕ್ಷೆ ಉಷಾ ದಾಸರ್ ಇಂದು ಗದಗ ಬೆಟಗೇರಿ ನಗರಸಭೆಯ ತುರ್ತು ಸಾಮಾನ್ಯ ಸಭೆ ಕರೆದಿದ್ದರು. ಆ ವೇಳೆ ಅವಳಿ ನಗರದ ರಸ್ತೆ ಹದಗೆಟ್ಟ ರಸ್ತೆಗಳಿಂದ ರೋಸಿ ಹೋದ ಸಾರ್ವಜನಿಕರು ಮತ್ತು ಆಟೋ ಚಾಲಕರು ಸಾಮಾನ್ಯ ಸಭೆಗೆ ನುಗ್ಗಿದ್ದರು.

ರಸ್ತೆ ದುರಸ್ತಿಗೆ ಆಗ್ರಹಿಸಿ ರೊಚ್ಚಿಗೆದ್ದ ಆಟೋ ಚಾಲಕರು, ನಗರಸಭೆ ಸಾಮಾನ್ಯ ಸಭೆಗೆ ನುಗ್ಗಿ ಆಕ್ರೋಶ
ರಸ್ತೆ ದುರಸ್ತಿಗೆ ಆಗ್ರಹಿಸಿ ರೊಚ್ಚಿಗೆದ್ದ ಆಟೋ ಚಾಲಕರು, ನಗರಸಭೆ ಸಾಮಾನ್ಯ ಸಭೆಗೆ ನುಗ್ಗಿ ಆಕ್ರೋಶ
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 05, 2022 | 5:22 PM

ಗದಗ: ಗದಗ-ಬೆಟಗೇರಿ ನಗರಸಭೆ ಸಭಾಂಗಣದಲ್ಲಿಂದು ಸಾಮಾನ್ಯ ಸಭೆ ನಡೆದಿದ್ದು, ರಸ್ತೆ ದುರಸ್ತಿಗಾಗಿ ಆಗ್ರಹಿಸಿ ರೊಚ್ಚಿಗೆದ್ದ ಆಟೋ ಚಾಲಕರು ನಗರಸಭೆ ಸಾಮಾನ್ಯ ಸಭೆಗೆ ನುಗ್ಗಿ ಆಕ್ರೋಶ ಹೊರಹಾಕಿದ್ದಾರೆ. ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾಮಾನ್ಯ ಸಭೆ ನಡೆಯುತ್ತಿತ್ತು (Gadag Betageri city municipal council meeting). ಆ ವೇಳೆ, ಸಭೆಯ ಮಧ್ಯದಲ್ಲಿಯೇ ಪೌರಾಯುಕ್ತರಿಗೆ, ಅಧ್ಯಕ್ಷೆಗೆ ಆಟೋ ಚಾಲಕರು (Gadag Auto drivers) ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.

ಆಟೋ ಚಾಲಕರ ಹಠಕ್ಕೆ ಮಣಿದ ಪೌರಾಯುಕ್ತರು, ಅಧ್ಯಕ್ಷೆ: ಸಿಎಂ ಬಂದಾಗ ರಸ್ತೆ ದುರಸ್ತಿ ಮಾಡ್ತೀರಿ, ನಮಗೆ ಅನಾನುಕೂಲವಾದಾಗ ರಸ್ತೆ ದುರಸ್ತಿ ಮಾಡಲ್ಲ. ಹೊಸ ಬಸ್ ನಿಲ್ದಾಣಕ್ಕೆ ಹೋಗೋ ರಸ್ತೆ, ಮಹಾತ್ಮ ಗಾಂಧಿ ಸರ್ಕಲ್ ರಸ್ತೆ ಸೇರಿದಂತೆ ಹಲವು ರಸ್ತೆಗಳು ಕೂಡಲೇ ದುರಸ್ತಿಯಾಗಬೇಕು ಅಂತಾ ಆಕ್ರೋಶಭರಿತ ಆಟೋ ಚಾಲಕರು ಪಟ್ಟುಹಿಡಿದರು. ಇದರಿಂದ ಗಲಿಬಿಲಿಗೊಂಡ ಪೌರಾಯುಕ್ತರು ಮತ್ತು ಅಧ್ಯಕ್ಷೆ ಆಟೋ ಚಾಲಕರ ಹಠಕ್ಕೆ ಮಣಿದು, ಬೇಡಿಕೆ ಈಡೇರಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ನಾಳೆಯೇ ಖುದ್ದು ಭೇಟಿ ನೀಡಿ, ರಸ್ತೆ ದುರಸ್ತಿ ಮಾಡುವುದಾಗಿ ಅಧಿಕಾರಿಗಳು ಸಹ ಭರವಸೆ ನೀಡಿದರು.

ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನೆಲೆ ಕುಡಿಯುವ ನೀರಿನ ಬಗ್ಗೆ ಚರ್ಚಿಸಲು ಅಧ್ಯಕ್ಷೆ ಉಷಾ ದಾಸರ್ ಇಂದು ಗದಗ ಬೆಟಗೇರಿ ನಗರಸಭೆಯ ತುರ್ತು ಸಾಮಾನ್ಯ ಸಭೆ ಕರೆದಿದ್ದರು. ಆ ವೇಳೆ ಅವಳಿ ನಗರದ ರಸ್ತೆ ಹದಗೆಟ್ಟ ರಸ್ತೆಗಳಿಂದ ರೋಸಿ ಹೋದ ಸಾರ್ವಜನಿಕರು ಮತ್ತು ಆಟೋ ಚಾಲಕರು ಸಾಮಾನ್ಯ ಸಭೆಗೆ ನುಗ್ಗಿದ್ದರು.

Gadag Betageri city municipal council meeting

ಆಟೋ ಚಾಲಕರ ಹಠಕ್ಕೆ ಮಣಿದ ಪೌರಾಯುಕ್ತರು, ಅಧ್ಯಕ್ಷೆ

ಗದಗ ಬೆಟಗೇರಿ ನಗರಕ್ಕೆ ನೀರಿನ ಯೋಜನೆ: ದೊಡ್ಡ ಹಗರಣ ನಡೆದಿರೋ ಗಂಭೀರ ಆರೋಪ ಗದಗ ಬೆಟಗೇರಿ ನಗರಕ್ಕೆ 24 ತಾಸು ನೀರು ಒದಗಿಸುವ ಯೋಜನೆಯಲ್ಲಿ ದೊಡ್ಡ ಹಗರಣ ನಡೆದಿರೋ ಗಂಭೀರ ಆರೋಪ ಕೇಳಿಬಂದಿದೆ. 223 ಕೋಟಿ ಅನುದಾನದಲ್ಲಿ ಜಾರಿಯಾಗಿದ್ದ ಗದಗ ಬೆಟಗೇರಿ ನಗರಕ್ಕೆ ಕುಡಿಯುವ ನೀರಿನ ಯೋಜನೆಯಲ್ಲಿ ಅಧಿಕಾರಿಗಳು ಕೋಟಿ ಕೋಟಿ ನುಂಗಿದ್ದಾರಂತೆ. ಹೀಗಾಗಿ ಈ ವಿಷಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಅಧಿಕಾರಿಗಳ ವಿರುದ್ಧ ನಗರಸಭೆಯ ಮಹಿಳಾ ಸದಸ್ಯರು ರೊಚ್ಚಿಗೆದ್ದಿದ್ದರು. ಈ ಹಗರಣದ ಕುರಿತು ಸಿಓಡಿ ತನಿಖೆ ಆಗಬೇಕು ಅಂತ ಒತ್ತಾಯಿಸಿದ್ದಾರೆ. ಈ ನಡುವೆ ಸಭೆಯ ಮಧ್ಯದಲ್ಲಿಯೇ ಆಟೋ ಚಾಲಕರು, ಸಾರ್ವಜನಿಕರು ಸಭೆಗೆ ನುಗ್ಗಿ ಪೌರಾಯುಕ್ತರಿಗೆ, ಅಧ್ಯಕ್ಷೆಗೆ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಕುಡಿಯುವ ನೀರಿನ ವಿಷಯದಲ್ಲಿ ಗಂಭೀರ ಚರ್ಚೆ,. ಆಯುಕ್ತ, ಅಧ್ಯಕ್ಷೆಯನ್ನು ಹಿಗ್ಗಾಮುಗ್ಗಾ ತರಾಟಗೆ ತೆಗೆದುಕೊಳ್ತಾಯಿರೋ ಸದಸ್ಯರು.. ಮತ್ತೊಂದೆಡೆ ಎತ್ತ ನೋಡಿದರತ್ತ ಗದ್ದಲ… ಚೀರಾಟ… ಕೂಗಾಟ… ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರ ವಿರುದ್ಧ ಧಿಕ್ಕಾರ.. ಪೌರಾಯುಕ್ತರಿಗೆ ಹಿಗ್ಗಾಮುಗ್ಗ ತರಾಟೆ… ಹೌದು ಕುಡಿಯುವ ನೀರಿನ ಸಮಸ್ಯೆ ಕುರಿತು ಕರೆದಿದ್ದ ಗದಗ ಬೆಟಗೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಇಂದು ದೊಡ್ಡ ಹೈಡ್ರಾಮವೇ ನಡೆದುಹೋಗಿದೆ. ಗದಗ ಬೆಟಗೇರಿ ನಗರಕ್ಕೆ 24 ಗಂಟೆ ನೀರು ಒದಗಿಸುವ ಬಹುದೊಡ್ಡ ಯೋಜನೆಯಲ್ಲಿ ದೊಡ್ಡ ಹಗರಣವೇ ನಡೆದಿರೋ ಬಗ್ಗೆ ಆರೋಪಿಸಿ ಅಧಿಕಾರಿಗಳನ್ನ ಬೆವರಿಳಿಸಿದ್ದಾರೆ. ಅದರಲ್ಲೂ ಮಹಿಳಾ ಸದಸ್ಯರು ಒಬ್ಬರ ಮೇಲೊಬ್ಬರು ಸರತಿ ಸಾಲಿನಂತೆ ತಮ್ಮ ವಾರ್ಡ್ ಗಳಲ್ಲಿನ ಸಮಸ್ಯೆಗಳ ಗೋಳು ತೋಡಿಕೊಂಡು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ್ರು.

ಪೌರಾಯುಕ್ತರೇ, ಅಧ್ಯಕ್ಷರೇ ನಮ್ಮ ವಾರ್ಡ್ಗೆ ಬಂದು ನೋಡಿ ನಮ್ಮ ಸಮಸ್ಯೆ ಏನು ಅನ್ನೋದು ನಿಮಗೆ ಗೊತ್ತಾಗುತ್ತೆ. ಇಲ್ಲಿ ಕೂತು ನಾವು ಹೇಳೋ ಮಾತಿಗೆ ಕತ್ತು ಅಲ್ಲಾಡಿಸಿದರೆ ಅಲ್ಲ ಅಂತ ರೊಚ್ಚಿಗೆದ್ದಿದ್ದರು. ಸಮರ್ಪಕ ಕುಡಿಯೋ ನೀರಿನ ಬರದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಸದಸ್ಯರು ಇಂತಹ ದೊಡ್ಡ ಯೋಜನೆ ಜಾರಿಯಲ್ಲಿದ್ದರೂ ಯಾಕೆ ನೀರು ಸಿಗ್ತಿಲ್ಲ ಅನ್ನೋದರ ಬಗ್ಗೆ ಸದಸ್ಯರಿಗೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. 24 ಗಂಟೆ ಕುಡಿಯುವ ನೀರಿನ ನಲ್ಲಿ ಬರೋ ನೀರು ವಾರಕ್ಕೊಮ್ಮೆ, 15 ದಿನಕ್ಕೊಮ್ಮೆ ತಿಂಗಳಿಗೊಮ್ಮೆ ಬರ್ತಿದೆ. ಹೀಗಾಗಿ ಈ ಯೋಜನೆಯಲ್ಲಿ ಅಧಿಕಾರಿಗಳು ಕೋಟಿ ಕೋಟಿ ನುಂಗಿ ಕಾಮಗಾರಿಯನ್ನ ಅಪೂರ್ಣವಾಗಿಯೆ ಉಳಿಸಿಕೊಂಡಿದ್ದಾರೆ. ಹೀಗಾಗಿ ಇದು ಸಿಓಡಿ ತನಿಖೆಯಾಗಬೇಕು ಅಂತ ಕಾಂಗ್ರೆಸ್ ಸದಸ್ಯ ಎಲ್ ಡಿ ಚಂದಾವರಿ ಒತ್ತಾಯಿಸಿದ್ದಾರೆ.

ಇನ್ನು ಈ ಯೋಜನೆಯ ಕಾಮಾಗಾರಿಯ ಗುತ್ತಿಗೆದಾರ ಶ್ರೀ ವಿಶ್ವೇಶ್ವರಯ್ಯ ಮತ್ತು ಮ್ಯಾನೇಜರ್ ಸದಾ ಷಡಕ್ಷರಿ ಅವರನ್ನ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಯೋಜನೆ ಜಾರಿಯಾಗಿ ಸುಮಾರು 8 ವರ್ಷಗಳೇ ಕಳೆದಿವೆ. ಇದೂವರೆಗೂ ಪೂರ್ಣ ಕಾಮಗಾರಿ ಮಾಡೋದಕ್ಕೆ ಆಗಿಲ್ಲ. ಜೊತೆಗೆ ನೀವು ಜೋಡಿಸಿರೋ ನಲ್ಲಿಗಳಲ್ಲಿ ನೀರು ಬರ್ತಿಲ್ಲ. ಕೇವಲ ಹೆಸರಿಗೆ ಈ ಯೋಜನೆ ಜಾರಿಯಲ್ಲಿದೆ ಅಂತ ಬೆವರಿಳಿಸಿದ್ದಾರೆ. ಹೀಗಾಗಿ ಸಭೆಯಲ್ಲಿ ಉಳಿದಿರೋ ಕಾಮಗಾರಿಯ ಹಣವನ್ನ ಮಂಜೂರು ಮಾಡೋದು ಬೇಡ. ಕಾಮಗಾರಿ ಪೂರ್ಣಗೊಂಡ ಬಳಿಕ ಕೊಡೋ ತೀರ್ಮಾನ ಮಾಡೋಣ ಅಂತ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದ್ದಾರೆ. ಇನ್ನು ಸದಸ್ಯರು ಗುತ್ತಿಗೆದಾರ ಮತ್ತು ಪೌರಾಯುಕ್ತರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪೇಚಿಗೆ ಸಿಲುಕಿದಂತೆ ಕಂಡು ಬಂದರು. ಸದಸ್ಯರಿಗೆ ಉತ್ತರ ಕೊಡೋದಕ್ಕೆ ತಡಬಡಿಸಿದರು. ಏನ್ ಹೇಳಬೇಕು ಅನ್ನೋದು ದೋಚದೆ ಕಂಗಾಲಾಗಿ ಕುಳಿತಿದ್ದರು. ಇಂದಿನ ಸಭೆಯಲ್ಲಿ ತನಿಖೆಗೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಅವಳಿ ನಗರದ ಕುಡಿಯುವ ನೀರಿನ ಬಗ್ಗೆ ಇನ್ನೊಮ್ಮೆ ಪರಿಶೀಲನೆ ಮಾಡಿ ಠರಾವು ಮಾಡಿ ಸರ್ಕಾರಕ್ಕೆ ಕಳಿಸಲಾಗುತ್ತದೆ ಎಂದ್ರು..

ಕುಡಿಯುವ ನೀರಿನ ವಿಷಯದಲ್ಲಿ ಇಷ್ಟೆಲ್ಲಾ ರಾದ್ಧಾಂತ ನಡಿಯುವಾಗಲೇ ಆಟೋ ಚಾಲಕರು ಸಾರ್ವಜನಿಕರ ದಂಡು ಸಭೆ ನಡೆಯುತ್ತಿದ್ದಾಗಲೇ ಸಭೆಗೆ ನುಗ್ಗಿ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡ್ರು. ಐದಾರು ವರ್ಷಗಳಿಂದ ಗದಗ ಬೆಟಗೇರಿ ಅವಳಿ ನಗರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ನಮ್ಮ ಆಟೋಗಳು ಹದಗೆಟ್ಟ ರಸ್ತೆಗಳಲ್ಲಿ ಓಡಾಡಿ ಪ್ರತಿ ದಿನ ದುರಸ್ತಿಗೊಳ್ಳುತ್ತಿವೆ. ರಸ್ತೆ ದುರಸ್ಥಿ ಬಗ್ಗೆ ಯಾರೊಬ್ಬರು ತಲೆ ಕೆಡಿಸಿಕೊಳ್ತಿಲ್ಲ ಸಿಎಂ ಬಂದ್ರೆ ಇರೋ ಬರೋ ರಸ್ತೆಗಳು ದುರಸ್ತಿಯಾಗ್ತವೆ. ಆದ್ರೆ ನಗರದಲ್ಲಿರೋ ಬೇರೆ ರಸ್ತೆಗಳು ಸುಧಾರಣೆ ಯಾಗಲ್ಲ. ಈ ರೀತಿ ಎರಡೊಂದು ನೀತಿ ಯಾಕೆ ಅಂತ ಪ್ರಶ್ನೆ ಮಾಡಿದ್ರು. ಇನ್ನು ಬಳಿಕ ಪೌರಾಯುಕ್ತರು ಆಟೋ ಚಾಲಕರ ಮನವೊಲಿಸಿ ನಾಳೆಯೇ ರಸ್ತೆ ದುರಸ್ಥಿಗೆ ಮುಂದಾಗ್ತೇವೆ ಅಂತ ಸಾಗಾಕಾದ್ರು. ಒಟ್ಟಿನಲ್ಲಿ ಇಂದು ಗದಗ ಬೆಟಗೇರಿ ನಗರಸಭೆಯ ಸಾಮಾನ್ಯ ಸಭೆ ಸಾಕಾಷ್ಟು ಗದಗ, ಕೂಗಾಟ, ಗೊಂದಲದಿಂದ ಕೂಡಿದ್ದು ಮಾತ್ರ ಸುಳ್ಳಲ್ಲ…

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

Also Read: Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ

Also Read: ಸಮಂತಾ ನಟನೆಯ ‘ಯಶೋದ’ ಸಿನಿಮಾ ಹೇಗಿರಲಿದೆ?; ಇಲ್ಲಿದೆ ಝಲಕ್

Published On - 3:49 pm, Thu, 5 May 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು