ಆಯುಷ್ಮಾನ್ ಭಾರತ ಯೋಜನೆ ಹಣ ದುರುಪಯೋಗ; ಸಾಕ್ಷಿ ಸಮೇತ ಅಕ್ರಮ ಬಯಲಾದ್ರು ಪರಿಶೀಲನೆ ಅರ್ಧಕ್ಕೆ ಕೈಬಿಟ್ಟ ಅಧಿಕಾರಿಗಳು, ಈ ನಡೆಗೆ ಕಾರಣವೇನು?
ದುರುಪಯೋಗ ಕಂಡು ಬಂದ್ರೂ ಪೂರ್ಣ ಪರಿಶೀಲನೆ ಮಾಡದೇ ಪರಿಶೀಲನೆ ಅರ್ಧಕ್ಕೆ ಕೈಬಿಟ್ಟು ಅಧಿಕಾರಿಗಳು ಎಸ್ಕೇಪ್ ಆಗಿದ್ದಾರೆ. ಸಿಬ್ಬಂದಿಯೊಬ್ಬನ ವೈಯಕ್ತಿಕ ಹೆಸರಿನಲ್ಲಿ ಹಣ ಡ್ರಾ ಮಾಡಿಕೊಂಡ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೇ ಡಿಎಚ್ಓ ನೇತೃತ್ವದ ತಂಡ ನಿರ್ಲಕ್ಷ್ಯ ತೋರಿದೆ ಅಂತ ಮುಂಡರಗಿ ಜನ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ: ಜಿಲ್ಲೆಯ ಆರೋಗ್ಯ ಇಲಾಖೆ ಆಯುಷ್ಮಾನ್ ಭಾರತ ಕರ್ನಾಟಕ ಯೋಜನೆಯಲ್ಲಿ ಹಣ ದುರುಪಯೋಗ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿದೆ. ಟಿವಿ9 ನಲ್ಲಿ ವರದಿ ಪ್ರಸಾರದ ಬಳಿಕ ಗದಗ ಡಿಎಚ್ಓ ನೇತೃತ್ವದ ತಂಡ ಮುಂಡರಗಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಲೆಕ್ಕಪತ್ರ ಪರಿಶೀಲನೆ ವೇಳೆ ಹಣ ದುರುಪಯೋಗವಾಗಿರುವುದು ಸಾಕ್ಷಿ ಸಮೇತ ಬಯಲಾಗಿದೆ. ಸಿಬ್ಬಂದಿಯೊಬ್ಬರ ವೈಯಕ್ತಿಕ ಹೆಸರಿನಲ್ಲಿ ಪದೇ ಪದೇ ಹಣ ಡ್ರಾ ಮಾಡಿಕೊಂಡಿದ್ದು ಪತ್ತೆಯಾಗಿದೆ.
ದುರುಪಯೋಗ ಕಂಡು ಬಂದ್ರೂ ಪೂರ್ಣ ಪರಿಶೀಲನೆ ಮಾಡದೇ ಪರಿಶೀಲನೆ ಅರ್ಧಕ್ಕೆ ಕೈಬಿಟ್ಟು ಅಧಿಕಾರಿಗಳು ಎಸ್ಕೇಪ್ ಆಗಿದ್ದಾರೆ. ಸಿಬ್ಬಂದಿಯೊಬ್ಬನ ವೈಯಕ್ತಿಕ ಹೆಸರಿನಲ್ಲಿ ಹಣ ಡ್ರಾ ಮಾಡಿಕೊಂಡ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೇ ಡಿಎಚ್ಓ ನೇತೃತ್ವದ ತಂಡ ನಿರ್ಲಕ್ಷ್ಯ ತೋರಿದೆ ಅಂತ ಮುಂಡರಗಿ ಜನ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಚ್ಓ ಡಾ ಜಗದೀಶ್ ನುಚ್ಚಿನ್, ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ನಡೆ ಬಗ್ಗೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಎ ಎಚ್ ತಾಂಬೊಟ್ಟಿ ಹೆಸರಿನಲ್ಲಿ 21 ಸಾವಿರ, 6 ಸಾವಿರ ಹೀಗೆ ಪದೇ ಪದೇ ಆಯುಷ್ಮಾನ್ ಭಾತರ ಯೋಜನೆ ಅಕೌಂಟ್ ನಿಂದ ಹಣ ಡ್ರಾ ಮಾಡಿದ್ದು ಬ್ಯಾಲೆನ್ಸ್ ಶೀಟ್ ನಲ್ಲಿ ಪತ್ತೆಯಾಗಿದೆ. ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಬೇಕಾದ ಅಧಿಕಾರಿಗಳು ಗಪ್ ಚುಪ್ ಆಗಿದ್ದಾರೆ. ಸರ್ಕಾರದ ಹಣ ವೈಯಕ್ತಿಕವಾಗಿ ಒಡೆಯಲು ಅವಕಾಶವಿಲ್ಲ ಅಂತ ಅಧಿಕಾರಿಗಳೇ ಹೇಳ್ತಾರೆ. ಆದ್ರೆ ಯಾವ ಕಾರಣಕ್ಕೆ ವೈಯಕ್ತಿಕ ಹಣ ನೀಡಲಾಗಿದೆ ಅನ್ನೋ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿಹಾಸ್ ವಿರುದ್ಧ ದುರುಪಯೋಗ ಆರೋಪ ಕೇಳಿಬಂದಿದೆ. ಮೇಲಾಧಿಕಾರಿಗಳು ಸರ್ಕಾರದ ಹಣ ದುರುಪಯೋಗ ಬಗ್ಗೆ ಮಾಹಿತಿ ಪಡೆಯದೇ ಡಾ ಕೀರ್ತಿಹಾಸ್ ಬಚಾವ್ ಮಾಡಲು ಯತ್ನ ಮಾಡುತ್ತಿದ್ದಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಎ ಎಚ್ ತಾಂಬೋಟ್ಟಿ ಎಂಬಾತ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿಹಾಸ್ ಗೆ ಆಪ್ತನಂತೆ ಹೀಗಾಗಿ ಆತನ ಹೆಸರಲ್ಲಿ ಕಾನೂನು ಬಾಹಿರ ಹಣ ಡ್ರಾ ಮಾಡಲಾಗಿದೆ ಅಂತ ಆರೋಪ. ಸಾವಿರಾರು ಅಲ್ಲ ಲಕ್ಷಾಂತರ ಹಣ ದುರುಪಯೋಗ ಆಗಿದೆ. ಜಿಲ್ಲಾಡಳಿತ ಈ ವಿಷಯ ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕ ತನಿಖೆ ಮಾಡಿದ್ರೆ ಉಂಡವರ ಬಣ್ಣ ಬಯಲಾಗುತ್ತದೆ. ಸಿಬ್ಬಂದಿಗಳಿಗೆ ಹಂಚಿಕೆ ಮಾಡಬೇಕಿದ್ದ ಸುಮಾರು 40 ಇನ್ಸೆಂಟಿವ್ ಹಣ ನೀಡದೇ ದುರುಪಯೋಗ ಮಾಡಿಕೊಂಡ ಆರೋಪ ಸಹ ಕೇಳಿ ಬಂದಿದೆ. ನಾಲ್ಕು ವರ್ಷಗಳಿಂದ ಇನ್ಸೆಂಟಿವ್ ನೀಡದ ಕಾರಣ ಸಿಬ್ಬಂದಿ ಈ ಪ್ರಕರಣವನ್ನು ಬಯಲಿಗೆ ತಂದಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ಗದಗದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:26 am, Fri, 10 June 22