ಕುಡಿಯುವ ನೀರಿಗಾಗಿ ಹಾಹಾಕಾರ; ಕೊರೊನಾ ಮರೆತು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಜನ

ಗ್ರಾಮ ಪಂಚಾಯತಿ ಅಧಿಕಾರಿಗಳು ಟ್ಯಾಂಕರ್ನಿಂದ ಗ್ರಾಮಕ್ಕೆ ನೀರು ಪೂರೈಸುವ ಕೆಲಸ ಮಾಡುತ್ತಿದ್ದು ನೀರಿಗಾಗಿ ಜನ ಗುಂಪು ಸೇರುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಕೊರೊನಾ ಭಯ ಮರೆಯಾಗಿದೆ. ಕೊರೊನಾ ಹರಡುವ ಆತಂಕ ಜನರಲ್ಲಿ ಕಾಣುತ್ತಿಲ್ಲ.

  • TV9 Web Team
  • Published On - 7:42 AM, 2 May 2021
ಕುಡಿಯುವ ನೀರಿಗಾಗಿ ಹಾಹಾಕಾರ; ಕೊರೊನಾ ಮರೆತು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಜನ
ನೀರಿಗಾಗಿ ಮುಗಿಬಿದ್ದ ಜನ

ಗದಗ: ಕೊರೊನಾ ಭಯದ ನಡುವೆ ಗದಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ತೊಟ್ಟು ಜೀವ ಜಲಕ್ಕಾಗಿ ಜನ ಪರದಾಡುತ್ತಿರುವಂತಹ ಪರಿಸ್ಥಿತಿ ಉದ್ಭವಿಸಿದೆ. ಗದಗ ಜಿಲ್ಲೆ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಹೀಗಾಗಿ ಕೊತಬಾಳ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.

ಟ್ಯಾಂಕರ್ ಬರುತ್ತಿದ್ದಂತೆ ನೀರಿಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಟ್ಯಾಂಕರ್ ಬಂದಾಗಲೇ ನೀರು ಹಿಡಿಯದಿದ್ದರೆ ಟ್ಯಾಂಕರ್ ಹೋದ ಮೇಲೆ ನೀರು ಸಿಗುವುದಿಲ್ಲ. ಬಳಿಕ ದಿನ ಪೂರ್ತಿ ನೀರು ಇಲ್ಲದೆ ಪರದಾಡಬೇಕು ಎಂಬ ಆತಂಕಕ್ಕೆ ಜನ ನಾ ಮುಂದು ತಾ ಮುಂದು ಅಂತ ಒಬ್ಬರ ಮೇಲೆ ಒಬ್ಬರು ಬಿದ್ದು ನೀರಿಗಾಗಿ ಜಗಳವಾಡುತ್ತಿರುವಂತ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಟ್ಯಾಂಕರ್ನಿಂದ ಗ್ರಾಮಕ್ಕೆ ನೀರು ಪೂರೈಸುವ ಕೆಲಸ ಮಾಡುತ್ತಿದ್ದು ನೀರಿಗಾಗಿ ಜನ ಗುಂಪು ಸೇರುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಕೊರೊನಾ ಭಯ ಮರೆಯಾಗಿದೆ. ಕೊರೊನಾ ಹರಡುವ ಆತಂಕ ಜನರಲ್ಲಿ ಕಾಣುತ್ತಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ನೀರಿಗಾಗಿ ಜನ ಕೊರೊನಾ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಶಿಸ್ತುಬದ್ಧ ಕ್ರಮಗಳನ್ನು ಕೈಗೊಳ್ಳದೆ ನೀರು ಬಿಡುತ್ತಿದ್ದಾರೆ. ಹೀಗಾಗಿ ಜನ ನೀರು ಹಿಡಿಯುವ ಬರದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಅಧಿಕಾರಿಗಳೇ ಜನರನ್ನು ಕಂಟ್ರೋಲ್ ಮಾಡಬೇಕೆಂದು ಗ್ರಾಮದ ಹಿರಿಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸ್ಯಾನಿಟೈಸರ್​ ಬದಲು ನೀರು ಸಿಂಪಡಣೆ: ಬಿಬಿಎಂಪಿ ಮೇಲಿದೆ ಗಂಭೀರ ಆರೋಪ