Binkadakatti Zoo: ಗದಗ ಬಿಂಕದಕಟ್ಟಿ ಝೂನಲ್ಲಿ ಹಬ್ಬದ ವಾತಾವರಣ: ದೂರದ ಇಂದೋರ್ ನಿಂದ ಬಂದವು 2 ಸಿಂಹಗಳು
Kamla Nehru Zoo: ಗದಗ ನಗರದ ಹೊರವಲಯದ ಬಿಂಕದಕಟ್ಟಿ ಪ್ರಾಣಿ ಸಂಗ್ರಾಲಯಕ್ಕೆ 1,070 ಕಿಲೋ ಮೀಟರ್ ದೂರದಿಂದ ಕಾಡಿನ ರಾಜರು ಅಗಮಿಸಿದ್ದಾರೆ. ಮಧ್ಯಪ್ರದೇಶ ರಾಜ್ಯದ ಇಂದೋರ್ ದ ಕಮಲಾ ನೆಹರು ಝೂದಿಂದ 2 ಸಿಂಹಗಳನ್ನು ತರಲಾಗಿದೆ.
ಅವಳಿ ನಗರದಲ್ಲಿ ನಿನ್ನೆ ಗುರುವಾರ ಸಂಭ್ರಮ ಮನೆ ಮಾಡಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಯು ರಾಜರ ಸ್ವಾಗತಕ್ಕೆ ಹಸಿರು ಕಾರ್ಪೆಟ್ ಹಾಕಿ ತಳಿರು, ತೋರಣ ಹೂವುಗಳಿಂದ ಶೃಂಗಾರ ಮಾಡಿದ್ದರು. ರಂಗೋಲಿ ಚಿತ್ತಾರ ಮೂಲಕ ಕಾಡಿನ ರಾಜರ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಲಾಗಿತ್ತು. ಘರ್ಜಿಸುವ ಮೂಲಕವೇ ಅವಳಿ ನಗರಕ್ಕೆ ಎಂಟ್ರಿ ಕೊಟ್ಟ ರಾಜ, ರಾಣಿಯ ಖದರ್ ಜೋರಾಗಿತ್ತು. ಆಗತಾನೆ ಪುರ ಪ್ರವೇಶ ಮಾಡಿದ್ದ, ಸಾವಿರ ಕಿಲೋ ಮೀಟರ್ ದೂರದಿಂದ ಬಂದ ರಾಜರನ್ನು ಪುಟಾಣಿ ಮಕ್ಕಳು ನೋಡಿ ಕಣ್ಣತುಂಬಿಕೊಂಡ್ರು. ಅದರ ರಾಜನ ಗಾಂಭೀರ್ಯದ ಘರ್ಜನೆ ಕೇಳಿ ಖುಷಿ ಪಟ್ರು.
ಇದೀಗ ಗದಗ-ಬೆಟಗೇರಿ ಅವಳಿ ನಗರದಲ್ಲಿ (Gadag) ಕಾಡಿನ ರಾಜರ ಹವಾ ಫುಲ್ ಜೋರಾಗಿದೆ. ಬಿಂಕದಕಟ್ಟಿ ಝೂನಲ್ಲಿ (Binkadakatti Zoo) ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ. ಸಿಂಹಗಳ ಘರ್ಜನೆಗೆ ಕೇಳಿ ಪ್ರವಾಸಿಗರು ಫುಲ್ ಖುಷ್ ಆಗ್ತಾಯಿದ್ದಾರೆ. ಬಯಲುಸೀಮೆ ನಾಡಿನ ಜನ್ರಿಗೆ ಈಗ ಕಾಡಿನ ರಾಜರ ನೋಡುವ ಭಾಗ್ಯ ಸಿಕ್ಕಂತಾಗಿದೆ. ಹೌದು ಉತ್ತರ ಕರ್ನಾಟಕದ ಪ್ರಸಿದ್ದ ಪ್ರಾಣಿ ಸಂಗ್ರಾಹಲಯಕ್ಕೆ ಇವತ್ತು ಎರಡು ಸಿಂಹಗಳು (Lion) ಎಂಟ್ರಿ ಕೊಟ್ಟಿವೆ.
ಗದಗ ನಗರದ ಹೊರವಲಯದ ಬಿಂಕದಕಟ್ಟಿ ಪ್ರಾಣಿ ಸಂಗ್ರಾಲಯಕ್ಕೆ 1,070 ಕಿಲೋ ಮೀಟರ್ ದೂರದಿಂದ ಕಾಡಿನ ರಾಜರು ಅಗಮಿಸಿದ್ದಾರೆ. ಮಧ್ಯಪ್ರದೇಶ ರಾಜ್ಯದ ಇಂದೋರ್ ದ ಕಮಲಾ ನೆಹರು ಝೂದಿಂದ (Kamla Nehru Zoo) ಸಿಂಹಗಳನ್ನು ತರಲಾಗಿದೆ. ಮೂರೂವರೆ ವರ್ಷದ ಗಂಡು ಸಿಂಹ ಶಿವಾ ಮತ್ತು ಎರಡೂವರೆ ವರ್ಷದ ಹೆಣ್ಣು ಸಿಂಹ ಗಂಗಾ ಗದಗ ಝೂಗೆ ಎಂಟ್ರಿ ಕೊಟ್ಟಿದ್ದಾರೆ.
ಕಾಡಿನ ರಾಜ ಸಿಂಹಗಳ ಸ್ವಾಗತಕ್ಕೆ ಗದಗ ಅರಣ್ಯ ಇಲಾಖೆ ಭರ್ಜರಿ ತಯಾರಿ ಮಾಡಿಕೊಂಡಿತ್ತು. ಹೊಸ ರಾಜರನ್ನು ರಾಜ ಮರ್ಯಾದೆಯಿಂದ ಬರಮಾಡಿಕೊಂಡಿದ್ದಾರೆ. ಸಿಂಹಗಳ ತಂಗುದಾಣುಗಳಿಗೆ ತಳಿರು ತೋರಣ ಕಟ್ಟಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ರಂಗೋಲಿಯ ಚಿತ್ತಾರಗಳ ಮೂಲಕ ಸಿಂಹಗಳನ್ನು ಸ್ವಾಗತಿಸಿದ್ರು. ಸಿಂಹಗಳ ಘರ್ಜನೆ ಅಬ್ಬಾ! ಎದೆ ಝಲ್ ಎನ್ನುವಂತಿತ್ತು.
ಉತ್ತರ ಕರ್ನಾಟಕ ಜನ್ರಿಗೆ ಹುಲಿ, ಸಿಂಹ ಸೇರಿದಂತೆ ಕಾಡು ಪ್ರಾಣಿಗಳು ಅಂದ್ರೆ ಅಷ್ಟಕಷ್ಟೇ. ಈಗ ಎರಡು ಹೊಸ ಸಿಂಹಗಳು ಎಂಟ್ರಿಯಾಗಿ ಈ ಭಾಗದ ಜನ್ರು ಫುಲ್ ಖುಷ್ ಆಗಿದ್ದಾರೆ. ದೂರದಿಂದ ವಾಹನದಲ್ಲಿ ತರಲಾಗಿದ್ದ ಪ್ರಾಣಿಗಳಿಗೆ ಸದ್ಯಕ್ಕೆ ಆಯಾಸವಾಗಿದೆ. ಈಗ 20-25 ದಿನಗಳ ಕಾಲ ಎರಡು ಸಿಂಹಗಳನ್ನು ಕ್ವಾರಂಟೈನಲ್ಲಿ ಇಡಲಾಗುತ್ತೆ. ಇಲ್ಲಿನ ವಾತಾವರಣ, ಆಹಾರ ಪದ್ಧತಿಗಳಿಗೆ ಹೊಂದಿಕೊಳ್ಳಬೇಕು. ಹೀಗಾಗಿ 25 ದಿನಗಳ ನಂತರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತೆ ಅಂತ ಡಿಎಫ್ಓ ದೀಪಿಕಾ ಬಾಜಪೇಯಿ ಹೇಳಿದ್ದಾರೆ.
ಗದಗಕ್ಕೆ ಆಗಮಿಸಿರುವ ಈ ಎರಡು ಸಿಂಹಗಳು ಏಶಿಯಾಟಿಕ್ ತಳಿ ಸಿಂಹಗಳು. ಎಕ್ಸಚೇಂಜ್ ಮೂಲಕ ಸಿಂಹಗಳನ್ನು ಇಂದೋರ್ ದಿಂದ ತರಲಾಗಿದೆ. ಗದಗ ಕಪಿಲ್ ಹಾಗೂ ಕಸ್ತೂರಿ ಹೆಸರಿನ ಎರಡು ತೋಳಗಳನ್ನು ಕೊಟ್ಟು, ಈ ಎರಡು ಸಿಂಹಗಳನ್ನು ಎಕ್ಸೆಂಚೇಂಜ್ ರೂಪದಲ್ಲಿ ತರಲಾಗಿದೆ. ಈಗಾಗಲೇ ವಯಸ್ಸಾದ ಅರ್ಜು, ಧರ್ಮ ಎಂಬ ಎರಡು ಸಿಂಹಗಳು ಇವೆ. ಇವುಗಳಿಗೆ ಸಾಥ್ ನೀಡಲು ಮತ್ತೆರಡು ಸಿಂಹಗಳು ಆಗಮಿಸಿವೆ.
ಇದನ್ನೂ ಓದಿ: ಬಾಗಲಕೋಟೆ ಡಿಸಿಸಿ ಬ್ಯಾಂಕ್ ಬಾನಗಡಿ: ಹಣ ಕಳೆದುಕೊಂಡು ಕಂಗಾಲಾಗಿರುವ ಗ್ರಾಹಕರಿಗೆ ಫಾರೆನ್ಸಿಕ್ ಸಂಸ್ಥೆಯಿಂದ ನೊಟೀಸ್ ಭಾಗ್ಯ!
ಉತ್ತರ ಕರ್ನಾಟಕ ಜನ್ರಿಗೆ ಭರಪೂರ ಸಿಂಹಗಳು ನೋಡುವ ಭಾಗ್ಯವೂ ಸಿಕ್ಕಂತಾಗಿದೆ. ಸಿಂಹಗಳು ಗುಹೆಯಿಂದ ಹೊರಬಿಡುವ ಮೂಲಕ ಗದಗ ಶಾಸಕ ಎಚ್ ಕೆ ಪಾಟೀಲ್ ವೀಕ್ಷಣೆಗೆ ಅರ್ಪಿಸಿದ್ರು. ಕಾಡಿನ ರಾಜರ ಘರ್ಜನೆ ನೋಡಲು ಬಂದ ನೂರಾರು ಪುಟಾಣಿಗಳು ಆಗಮಿಸಿದ್ರು. ಮೊದಲ ದಿನವೇ ಮಕ್ಕಳಿಗೆ ಹೊಸ ಕಾಡಿನ ರಾಜರ ದರ್ಬಾರ್ ನೋಡುವ ಭಾಗ್ಯ ಸಿಕ್ಕಂತಾಗಿದೆ. ಗದಗನ ಬಿಂಕದಕಟ್ಟ ಪ್ರಾಣಿ ಸಂಗ್ರಹಾಲಯ ರಜತ ಮಹೋತ್ಸವ ಆಚರಣೆಗೆ ಸಜ್ಜಾಗಿದೆ. ಮೈಸೂರು ನಂತರ ದೊಡ್ಡದಾಗಿ ಬೆಳೆದ ಝೂ ಇದಾಗಿದೆ. ಹಲವಾರು ಪಕ್ಷಿ, ಪ್ರಾಣಿಗಳು ಸೇರಿ ಕಾಡಿನ ರಾಜ ಸಿಂಹ ನೋಡುವ ಭಾಗ್ಯ ಸಿಕ್ಕಿದೆ. ಈ ಸಂದರ್ಭದಲ್ಲಿ ಸಿಂಹಗಳು ಎಂಟ್ರಿ ಕೊಟ್ಟಿದ್ದು ಗದಗ ಜಿಲ್ಲೆಯ ಜನ್ರಿಗೆ ಸಂತೋಷವಾಗಿದೆ.
ಮೊದಲ ನದಿವೇ ಹೊಸ ಸಿಂಹಗಳ ನೋಡಲು ನೂರಾರು ಶಾಲಾ ಮಕ್ಕಳು ಆಗಮಿಸಿದ್ದರು. ಸಿಂಹಗಳು ನೋಡಿ ಎಂಜಾಯ್ ಮಾಡಿದ್ರು. ಸಿಂಹಗಳ ಘರ್ಜನೆ ಕೇಳಿ ಫುಲ್ ಖುಷ್ ಆದ್ರೆ ಒಟ್ಟಾರೆಯಾಗಿ ಉತ್ತರ ಕರ್ನಾಟಕದ ಅತೀ ದೊಡ್ಡ ಪ್ರಾಣಿ ಸಂಗ್ರಹಾಲಯದಲ್ಲಿ ಈಗ ಸಿಂಹ, ಹುಲಿ, ಚಿರತೆ, ಕರಡಿ ಸೇರಿದಂತೆ ನೂರಾರು ಪ್ರಾಣಿ, ಪಕ್ಷಗಳ ಕಲವರ ಜೋರಾಗಿದೆ. ಈಗ ಶಿವಾ, ಗಂಗಾ ಜೋಡಿಯ ಸಿಂಹಗಳು ನೋಡಲು ಪ್ರವಾಸಿಗರ ದಂಡೇ ಹರಿದು ಬರಲಿದೆ. (ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ)
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ