Gold Silver Price: ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ! ಹೀಗಿದೆ ದರ ಒಮ್ಮೆ ಗಮನಿಸಿ..
Gold Silver Rate: ಚಿನ್ನ ಹಾಗೂ ಬೆಳ್ಳಿ ದರ ಹಾವು ಏಣಿ ಆಟಾಡುವುತ್ತಿರುವುದು ಸರ್ವೇ ಸಾಮಾನ್ಯ. ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ ಇಂದು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಕಂಡಿದೆ. ಹಾಗಿದ್ದಲ್ಲಿ ಎಷ್ಟಿರಬಹುದು ದರ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರು: ದೈನಂದಿನ ದರ ಬದಲಾವಣೆ ಪರಿಶೀಲಿಸಿದಾಗ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. 22ಕ್ಯಾರೆಟ್ 10ಗ್ರಾಂ ಚಿನ್ನ ನಿನ್ನೆ 41,700 ರೂಪಾಯಿಗೆ ಮಾರಾಟವಾಗಿತ್ತು. ಇಂದಿನ ದರ 41, 710 ರೂಪಾಯಿಗೆ ನಿಗದಿಯಾಗಿದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ45,490 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 45,500 ರೂಪಾಯಿ ಆಗಿದೆ. ಬೆಳ್ಳಿ ದರ ಕೂಡಾ ಏರಿಕೆಯತ್ತ ಸಾಗಿದ್ದು, ಇಂದಿನ ದರ 1 ಕೆ.ಜಿಗೆ 65,800 ರೂಪಾಯಿಯಾಗಿದೆ.
ಚಿನ್ನ ಕೊಳ್ಳಲು ಉತ್ತಮ ಸಮಯವಿದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆಪತ್ಕಾಲದ ಬಾಂಧವ ಎಂದು ಚಿನ್ನವನ್ನು ಕರೆಯುತ್ತಾರೆ. ಅದೆಷ್ಟೋ ಹಣಕಾಸಿನ ಸಮಸ್ಯೆ ಇದ್ದಾಗ ನೆರವಿಗೆ ಬರುವುದು ಚಿನ್ನ. ಆರಭರಣಗಳನ್ನು ಅಡವಿಟ್ಟು ಚಿನ್ನ ಪಡೆಯಬಹುದು. ಅಲ್ಲದೇ ಮಾರಾಟವನ್ನೂ ಮಾಡಬಹುದು. ಆರ್ಥಿಕ ಸಮಸ್ಯೆ ಉಂಟಾದಾಗ ಮನೆಯಲ್ಲಿ ಮೊದಲಿಗೆ ನೆನಪಾಗುವುದೇ ಚಿನ್ನ. ಹಾಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಮಯ ಎಂದು ತಜ್ಞರು ಹೇಳುತ್ತಿದ್ದಾರೆ.
22 ಕ್ಯಾರೆಟ್ ಚಿನ್ನ ದರ: 1 ಗ್ರಾಂ ಚಿನ್ನ ದರ ನಿನ್ನೆ 4,170 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ 4,550 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,392 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 36,400 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 8 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,490 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 45,500 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,54,900 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 4,55,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿಯಷ್ಟು ಏರಿಕೆ ಕಂಡಿದೆ.
24 ಕ್ಯಾರೆಟ್ ಚಿನ್ನ ದರ ಮಾಹಿತಿ: 1 ಗ್ರಾಂ ಚಿನ್ನ ದರ ನಿನ್ನೆ 4,549 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ 4,550 ರೂಪಾಯಿ ನಿಗದಿಯಾಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,392 ರೂಪಾಯಿಗೆ ಮಾರಾಟವಾಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ 8 ರೂಪಾಯಿಯಷ್ಟು ಏರಿಕೆ ಕಂಡಿದೆ. ಇಂದಿನ ದರ 36,392 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,490 ರೂಪಾಯಿ ಇದ್ದು, ಇಂದಿನ ದರ 45,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 10 ರೂಪಾಯಿಯಷ್ಟು ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,54,900 ರೂಪಾಯಿ ಇದ್ದು, ಇಂದಿನ ದರ 4,55,000 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿಯಷ್ಟು ಏರಿಕೆ ಕಂಡಿದೆ.
ಬೆಳ್ಳಿ ದರ: 1ಗ್ರಾಂ ಬೆಳ್ಳಿ ದರ ನಿನ್ನೆ 65.40 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 65.80 ರೂಪಾಯಿಯಾಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 523.20 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 526.40 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3 ರೂಪಾಯಿಯಷ್ಟು ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 654 ಎಊಪಾಯಿ ಇದ್ದು, ಇಂದಿನ ದರ 658 ರೂಪಾಯಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 4 ರೂಪಾಯಿಯಷ್ಟು ಏರಿಕೆ ಕಂಡಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,540 ರೂಪಾಯಿ ಇದ್ದು, ಇಂದಿನ ದರ 6,580 ರೂಪಾಯಿಯಾಗಿದೆ. ದರ ಬದಲಾವಣೆಯಲ್ಲಿ 40 ರೂಪಾಯಿಯಷ್ಟು ಏರಿಕೆ ಕಂಡಿದೆ. 1ಕೆ.ಜಿ ಬೆಳ್ಳಿ ದರ ನಿನ್ನೆ 65,400 ರೂಪಾಯಿ ಇದ್ದು, ಇಂದಿನ ದರ 65,800 ರೂಪಾಯಿಗೆ ನಿಗದಿಯಾಗಿದೆ. ದೈಂನಂದಿನ ದರ ಬದಲಾವಣೆಯಲ್ಲಿ 400 ರೂಪಾಯಿಯಷ್ಟು ಏರಿಕೆಯತ್ತ ಸಾಗಿದೆ.
ಮನೆಯಲ್ಲಿ ಒಂದಾದರೂ ಬೆಳ್ಳಿ ತಟ್ಟೆ, ಅಥವಾ ಬೆಳ್ಳಿ ದೇವರ ಮೂರ್ತಿ ಇರಬೇಕು ಎಂದು ಹೇಳುತ್ತಾರೆ. ಅದೆಷ್ಟೋ ಮನೆಗಳಲ್ಲಿ ಶಾಸ್ತ್ರವೂ ಇದೆ. ಅದರಲ್ಲೂ ದೇವರ ಮನೆಯಲ್ಲಿ ಒಂದಾದರೂ ಬೆಳ್ಳಿ ಸಾಮಗ್ರಿ ಇರಬೇಕು ಎಂಬುದೊಂದು ನಂಬಿಕೆ. ಹೀಗಾಗಿ ಮನೆಯಲ್ಲಿ ಬೆಳ್ಳಿ ಸಾಮಗ್ರಿ ಕೊಂಡೊಯ್ಯಲು ತೀರ್ಮಾನಿಸಿದ್ದರೆ, ಒಮ್ಮೆ ಬೆಳ್ಳಿ ದರದ ಮಾಹಿತಿಯನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?
ಇದನ್ನೂ ಓದಿ: Gold Silver Price: ಚಿನ್ನ ಕೊಳ್ಳಲು ಉತ್ತಮ ಸಮಯ.. ಇಂದು ಎಷ್ಟಿದೆ ಗೊತ್ತಾ ಚಿನ್ನ ದರ?