ಲಾಕ್ಡೌನ್ ಸಡಿಲಿಕೆ: ಸರ್ಕಾರದಿಂದ ಎಡವಟ್ಟುಗಳ ಮಾಲಿಕೆ
ಬೆಂಗಳೂರು: ಮಾರಕ ಕೊರೊನಾ ವೈರಸ್ನಿಂದ ಭಾರತ ತತ್ತರಿಸಿ ಹೋಗಿದೆ. ದೇಶಕ್ಕೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಮೂರನೇ ಹಂತದ ಲಾಕ್ಡೌನ್ ಸಡಿಲಿಕೆ ಮಾಡುವ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಆಹ್ವಾನ ನೀಡಿದಂತಾಗಿದೆ. ಸರ್ಕಾರದ ಎಡವಟ್ಟಿನಿಂದ ಕೊರೊನಾ ಆತಂಕ ಹೆಚ್ಚಾಗಿದೆ. ಎಡವಟ್ಟು 1: ಐಟಿ-ಬಿಟಿ ಕಂಪನಿಗಳಿಗೆ ಸಡಿಲಿಕೆ ನೀಡಿದ್ದು ಮೊದಲ ಎಡವಟ್ಟು. ಅದರಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಕೆಲಸ ಮಾಡಲು ಸೂಚನೆ ನೀಡಲಾಗಿತ್ತು ಆದರೆ ಕಂಪನಿಗಳಲ್ಲಿ ಶೇ.30 ರಷ್ಟೇ ಜನ ಕೆಲ್ಸ ಮಾಡ್ತಿದ್ದಾರೆ ಅನ್ನೋದನ್ನ ಧೃಡಪಡಿಸೋದ್ಯಾರು? ಶೇ.30 ಕ್ಕಿಂತ ಹೆಚ್ಚು ಸಿಬ್ಬಂದಿ […]
ಬೆಂಗಳೂರು: ಮಾರಕ ಕೊರೊನಾ ವೈರಸ್ನಿಂದ ಭಾರತ ತತ್ತರಿಸಿ ಹೋಗಿದೆ. ದೇಶಕ್ಕೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಮೂರನೇ ಹಂತದ ಲಾಕ್ಡೌನ್ ಸಡಿಲಿಕೆ ಮಾಡುವ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಆಹ್ವಾನ ನೀಡಿದಂತಾಗಿದೆ. ಸರ್ಕಾರದ ಎಡವಟ್ಟಿನಿಂದ ಕೊರೊನಾ ಆತಂಕ ಹೆಚ್ಚಾಗಿದೆ.
ಎಡವಟ್ಟು 1: ಐಟಿ-ಬಿಟಿ ಕಂಪನಿಗಳಿಗೆ ಸಡಿಲಿಕೆ ನೀಡಿದ್ದು ಮೊದಲ ಎಡವಟ್ಟು. ಅದರಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಕೆಲಸ ಮಾಡಲು ಸೂಚನೆ ನೀಡಲಾಗಿತ್ತು ಆದರೆ ಕಂಪನಿಗಳಲ್ಲಿ ಶೇ.30 ರಷ್ಟೇ ಜನ ಕೆಲ್ಸ ಮಾಡ್ತಿದ್ದಾರೆ ಅನ್ನೋದನ್ನ ಧೃಡಪಡಿಸೋದ್ಯಾರು? ಶೇ.30 ಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸಕ್ಕೆ ಹಾಜರಾದರೆ ಸಾಮಾಜಿಕ ಅಂತರ ಕಾಪಾಡುವುದು ಕಠಿಣವಾಗುತ್ತೆ. ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕೊರೊನಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಐಟಿ, ಬಿಟಿ ಉದ್ಯೋಗಿಯಿಂದಲೇ ಮೊದಲ ಕೇಸ್ ಪತ್ತೆಯಾಗಿತ್ತು. ಹಾಗಾಗಿ ಐಟಿ-ಬಿಟಿ ಕಂಪನಿಗಳ ಮೇಲೆ ಹೆಚ್ಚಿನ ನಿಗವಹಿಸಬೇಕಾಗಿದೆ.
ಎಡವಟ್ಟು 2: ಬಟ್ಟೆ, ಚಿನ್ನದಂಗಡಿಗಳಿಗೆ ಗ್ರೀನ್ ಸಿಗ್ನಲ್ ನೀಡಿ ಸರ್ಕಾರ ಮತ್ತೊಮ್ಮೆ ಎಡವಟ್ಟು ಮಾಡಿದೆ. ಬಟ್ಟೆ, ಚಿನ್ನದ ಅಂಗಡಿಗಳಲ್ಲಿ ಅತಿ ಹೆಚ್ಚು ಜನ ಸೇರುತ್ತಾರೆ. ಒಬ್ಬರು ಮುಟ್ಟಿದ ವಸ್ತು ಮತ್ತೊಬ್ಬರು ಮುಟ್ಟುವ ಸಾಧ್ಯತೆ ಇರುತ್ತದೆ. ಇವುಗಳ ಮೇಲೆ ನಿಗಾ ಇಡಲು ಸಿಬ್ಬಂದಿಯೇ ಇಲ್ಲ.
ಎಡವಟ್ಟು 3: ಕಾರ್ಮಿಕರನ್ನ ತಮ್ಮೂರಿಗೆ ಕಳುಹಿಸಿದ್ದು 3ನೇ ಎಡವಟ್ಟು. ಬೆಂಗಳೂರಿನಿಂದ ಹಳ್ಳಿ ಪ್ರದೇಶಕ್ಕೆ ಕಾರ್ಮಿಕರು ವಾಪಸ್ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡ್ತಿದ್ದ ವ್ಯಕ್ತಿ, ಮನೆಯಲ್ಲೇ ಇದ್ದವರಿಗೂ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಹೀಗಾಗಿ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆ ಭೀತಿ ಹೆಚ್ಚಾಗಿದೆ. ಕೊರೊನಾ ಲಕ್ಷಣ ಕಂಡುಬರದೇ ಇದ್ದರು ವೈದ್ಯಕೀಯ ವರದಿ ಪಾಸಿಟಿವ್ ಬಂದಿರುವ ಪ್ರಕರಣಗಳನ್ನು ನೋಡುತ್ತಿದ್ದೇವೆ. ಇಂತಹ ಸಂದ್ರಭದಲ್ಲಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸಿದರೆ ಅಲ್ಲಿಯೂ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ.
ಎಡವಟ್ಟು 4: ಪಾಸ್ ಇಲ್ಲದವರಿಗೆ ಓಡಾಡಲು ಅವಕಾಶ ನೀಡಿ ಸರ್ಕಾರ ಎಡವಿದೆ. ಅಗತ್ಯ ಸೇವೆಯಲ್ಲಿದ್ದವರಿಗೆ ಮಾತ್ರ ಓಡಾಡಲು ಪಾಸ್ ನೀಡಲಾಗುತ್ತಿತ್ತು. ಆದರೆ ಈಗ ಎಲ್ಲರೂ ಓಡಾಡುವಂತಾಗಿ ಎಡವಟ್ಟಿಗೆ ನಾಂದಿ ಹಾಡಿದೆ. ಕಂಟೇನ್ಮೆಂಟ್ ಜೋನ್ನಲ್ಲಿ ಕದ್ದು ಮುಚ್ಚಿ ಜನ ಓಡಾಡ್ತಿದ್ದಾರೆ. ಹೀಗಾಗಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಅತಿ ಹೆಚ್ಚಿದೆ.