AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಚಳಿ, ಶುಷ್ಕ ವಾತಾವರಣ; ಬೆಂಗಳೂರಲ್ಲೂ ಒಣ ಹವೆ

Karnataka Weather: ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿದ್ದು, ಹಲವು ದಿನಗಳಿಂದ ರಾಜ್ಯದಲ್ಲಿ ಮನೆಮಾಡಿರುವ ಶುಷ್ಕ ವಾತಾವರಣ ಇಂದೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಬೆಚ್ಚನೆಯ ಉಡುಪು ಧರಿಸಲು ಮತ್ತು ಸಮತೋಲಿತ ಆಹಾರ ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಚಳಿ, ಶುಷ್ಕ ವಾತಾವರಣ; ಬೆಂಗಳೂರಲ್ಲೂ ಒಣ ಹವೆ
ರಾಜ್ಯದೆಲ್ಲೆಡೆ ಚಳಿ, ಶುಷ್ಕ ವಾತಾವರಣ; ಬೆಂಗಳೂರಲ್ಲೂ ಒಣ ಹವೆ
ಭಾವನಾ ಹೆಗಡೆ
|

Updated on: Feb 11, 2026 | 7:29 AM

Share

ಬೆಂಗಳೂರು, ಫೆಬ್ರವರಿ 11: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಒಣ ಹವೆ (Weather Forecast) ಆವರಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಶುಷ್ಕ ವಾತಾವರಣ

ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 16°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ