ಅಕ್ರಮ ಗೋ ಸಾಗಣೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಡ್ಡಾದಿಡ್ಡಿ ವಾಹನ ಚಾಲನೆ; ಕಂಟೇನರ್ ಪಲ್ಟಿ, 7 ಕರುಗಳು ಸಾವು
ಜಿಲ್ಲೆಯ ಹಿರಿಸಾವೆ ಬಳಿ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ವಾಹನವನ್ನ ಅಡ್ಡಗಟ್ಟಿದ್ದು, ಈ ವೇಳೆ ಚಾಲಕ ಅಡ್ಡಾದಿಡ್ಡಿ ಓಡಿಸಿದ್ದು, ಕಂಟೇನರ್ ಪಲ್ಟಿಯಾಗಿದೆ.
ಹಾಸನ: ಜಿಲ್ಲೆಯ ಹಿರಿಸಾವೆ ಬಳಿ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು(Police) ವಾಹನವನ್ನ ಅಡ್ಡಗಟ್ಟಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ್ದಾರೆ. ಈ ವೇಳೆ ಆಯ ತಪ್ಪಿ ಗೋವುಗಳಿದ್ದ ಕಂಟೇನರ್ ಪಲ್ಟಿಯಾಗಿದೆ. ಈ ಹಿನ್ನಲೆ 7 ಕರುಗಳು ಸಾವನ್ನಪ್ಪಿದ್ದು, ಬಾಕಿ ಉಳಿದ 30 ಕ್ಕೂ ಹೆಚ್ಚು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ನಿನ್ನೆ(ಮೇ.16) ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಕಂಟೇನರ್ ಪಲ್ಟಿಯಾದ ಕೂಡಲೇ ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧಿಕೃತ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ; ಆಕಳು ಸಮೇತ ಗೋಮಾಂಸ ವಶ
ಕೊಪ್ಪಳ: ಅನಧಿಕೃತ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಾಲ್ಕು ಆಕಳು ಸಮೇತ ಗೋಮಾಂಸ ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಮಜೀದ್ ಸಾಬ್, ಕರಿಮ್ ಸಾಬ್, ವಲೀಸಾಬ್, ಮಹಮ್ಮದ್, ಬಂದಾಜ್ ಎನ್ನುವ ಆರೋಪಿಗಳು ಸ್ವಂತ ಗೋದಾಮಿನಲ್ಲಿ ಆಕಳಗಳನ್ನು ಹತ್ಯೆಗೈದು ಮಾಂಸ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿತ್ತು. ಇನ್ನು ಸ್ಥಳಕ್ಕೆ ಕಾರಟಗಿ ಪೊಲೀಸರು ಸೇರಿದಂತೆ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಆಗಮಿಸಿದ್ದು, ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.
ಅಕ್ರಮ ಗೋ ಸಾಗಣೆ ತಡೆದು, ಪೊಲೀಸರಿಗೆ ಒಪ್ಪಿಸಿದ ಹಿಂದೂ ಸಂಘಟನೆಗಳು
ಪುತ್ತೂರು: ಅಕ್ರಮ ಗೋ ಸಾಗಣೆಗೆ ನಿಷೇಧವಿದ್ದರು ಕೂಡ ರಾಜ್ಯದಲ್ಲಿ ಇತ್ತೇಚವಾಗಿ ಗೋ ಸಾಗಾಣಿಕೆ ನಡೆಯುತ್ತಿದೆ. ಅದರಂತೆ ಈ ಹಿಂದೆ ಕೂಡ ಅಂದರೆ 2023 ರ ಫೆಬ್ರುವರಿ 13 ರಂದು ತಾಲೂಕಿನ ಗಡಿ ಪ್ರದೇಶದ ಗ್ರಾಮವಾದ ಪಾಣಾಜೆಯ ಆರ್ಲಪದವಿನಲ್ಲಿ ಗೋ ಸಾಗಾಣಿಕೆ ಮಾಡುತ್ತಿದ್ದ ವೇಳೆ ಹಿಂದೂ ಸಂಘಟನೆಗಳು ತಡೆದು ಅವರನ್ನ ಪೊಲೀಸ್ಗೆ ಒಪ್ಪಿಸಿದ್ದಾರೆ. ನರಿಮೊಗ್ರು ಗ್ರಾಮದ ಮುಕ್ವೆ ಎಂಬಲ್ಲಿನಿಂದ ವಾಹನದಲ್ಲಿ ಒಂದು ದನ ಮತ್ತು ಎರಡು ಕರುವನ್ನ ಕೇರಳಕ್ಕೆ ಸಾಗಣೆ ಮಾಡಲಾಗುತ್ತಿತ್ತು. ಈ ಕುರಿತು ಮಾಹಿತಿಯನ್ನ ಪಡೆದು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದು, ಅರುಣ್ ಕುಮಾರ್ ಪುತ್ತಿಲ ಅವರಿಗೆ ಹಾಗೂ ಪೊಲೀಸ್ಗೆ ಮಾಹಿತಿ ನೀಡಲಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸ್ರು ಹಾಗೂ ಅರುಣ್ ಕುಮಾರ್ ಪುತ್ತಿಲ ಮಾಹಿತಿ ಪಡೆದರು, ಬಳಿಕ ಪೊಲೀಸರು ವಾಹನ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ