ಹೆಚ್​​​ಡಿ ರೇವಣ್ಣ ಕಿಡ್ನಾಪ್​ ಕೇಸ್​​​ಗೆ ಬಿಗ್ ಟ್ವಿಸ್ಟ್​​: ನನ್ನನ್ನು ಯಾರೂ ಅಪಹರಿಸಿರಲಿಲ್ಲ ಎಂದ ಸಂತ್ರಸ್ತೆ

ಜೆಡಿಎಸ್ ಶಾಸಕ ಹೆಚ್‌.ಡಿ.ರೇವಣ್ಣ ವಿರುದ್ಧದ ಮಹಿಳೆ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಅದರಂತೆ ಇಂದು (ಮೇ.12) ಸುಮಾರು ಎರಡು ನಿಮಿಷ 32 ಸೆಕೆಂಡ್​​ ಇರುವ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆ, "ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ, ನಾನಾಗಿ ಮನೆಯಿಂದ ಬಂದಿದ್ದೇನೆ ಎನ್ನುವ ಮೂಲಕ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ಹೆಚ್​​​ಡಿ ರೇವಣ್ಣ ಕಿಡ್ನಾಪ್​ ಕೇಸ್​​​ಗೆ ಬಿಗ್ ಟ್ವಿಸ್ಟ್​​: ನನ್ನನ್ನು ಯಾರೂ ಅಪಹರಿಸಿರಲಿಲ್ಲ ಎಂದ ಸಂತ್ರಸ್ತೆ
ರೇವಣ್ಣ ವಿರುದ್ಧದ ಮಹಿಳೆ ಕಿಡ್ನ್ಯಾಪ್‌ ಪ್ರಕರಣ: ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂತ್ರಸ್ತ ಮಹಿಳೆ
Edited By: ವಿವೇಕ ಬಿರಾದಾರ

Updated on: May 13, 2024 | 8:09 AM

ಹಾಸನ, ಮೇ.12: ಜೆಡಿಎಸ್ ಶಾಸಕ ಹೆಚ್‌.ಡಿ.ರೇವಣ್ಣ(HD Revanna) ವಿರುದ್ಧದ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣ ಟ್ವಿಸ್ಟ್ ಪಡೆದಿದೆ. ಇದೀಗ ಸಂತ್ರಸ್ತೆ ಇಂದು (ಮೇ.12) ಸುಮಾರು 2 ನಿಮಿಷ 32 ಸೆಕೆಂಡ್​​ನ​​ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ “ನನ್ನನ್ನು ಯಾರೂ ಅಪಹರಿಸಿಲ್ಲ, ನಾನಾಗಿ ಮನೆಯಿಂದ ಹೊರಗೆ ಬಂದಿದ್ದೇನೆ. ಭವಾನಿ, ರೇವಣ್ಣ, ಪ್ರಜ್ವಲ್‌ ಮತ್ತು ಬಾಬಣ್ಣರಿಂದ ಯಾವುದೇ ತೊಂದರೆ ಆಗಿಲ್ಲ. ನಮ್ಮ ಊರಿನವರು ಏನೇನೋ ಮಾತನಾಡಿದ್ದನ್ನು ಕೇಳಿ ಬೇಸರವಾಗಿತ್ತು. ಹೀಗಾಗಿ ನಾಲ್ಕು ದಿನ ಇದ್ದು ಹೋಗೋಣವೆಂದು ನೆಂಟರ ಮನೆಗೆ ಬಂದಿದ್ದೇನೆ. ಸಂಬಂಧಿಕರ ಮನೆಯಲ್ಲಿ ಇದ್ದೇನೆ. ಎರಡು ದಿನಗಳ ಬಳಿಕ ನಾನೇ ಬರುತ್ತೇನೆ ಎಂದಿದ್ದಾರೆ.

“ಗಾಬರಿ ಪಡಬೇಡಿ ಏನೂ ತೊಂದರೆ ಆಗಿಲ್ಲ, ಚೆನ್ನಾಗಿ ಇದ್ದೇನೆ ವಾಪಸ್ ಬರುತ್ತೆನೆ. ಯಾರೂ ಏನೇ ಅಂದರು ತಲೆಗೆ ಹಾಕೊ ಬೇಡಿ ಅರಾಮಾಗಿ ಇರಿ. ನಾನು ಸೇಫ್​ ಆಗಿ ಇದ್ದೀನಿ. ಅವರಿಂದ ನಮಗೆ ತೊಂದರೆ ಆಗಿಲ್ಲ. ಮೊಬೈಲ್​ಗೂ ನಮಗೂ ಸಂಬಂಧವಿಲ್ಲ. ನಾಲ್ಕು ದಿನ ನೆಂಟರ ಮನೆಗೆ ಹೋಗಿದ್ದೆ. ನೆಂಟರ ಮೆನಯಿಂದ ಬಂದ ಕೂಡಲೇ ಎಲ್ಲ ಮಾಹಿತಿ ನೀಡುತ್ತೇನೆ. ಆದರೆ, ಪೊಲೀಸರ ಕಳಿಸಿ ಮನೆ ಬಳಿ ಟಾರ್ಚರ್ ಕೊಡಬೇಡಿ. ಮಕ್ಕಳು-ಮರಿ ಇರುತ್ತಾರೆ ಭಯಪಡುತ್ತಾರೆ” ಎಂದು ಸಂತ್ರಸ್ತೆ ಹೇಳಿದ್ದಾರೆ.

ಇದನ್ನೂ ಓದಿ:ಸಂತ್ರಸ್ತೆ ಹೇಳಿಕೆ ಮೇಲೆ ರೇವಣ್ಣ ಕಿಡ್ನ್ಯಾಪ್‌ ಕೇಸ್‌ ಭವಿಷ್ಯ, ಅಪ್ಪ-ಮಗನ ಹಣೆಬರಹ ಬರೆಯಲಿರುವ ಮಹಿಳೆ

‘ನಾವು ಕೂಲಿ ಮಾಡಿ ಜೀವನ ಸಾಗಿಸುವರು, ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ. ಪೊಲೀಸರು ಬಂದು ಹೋಗ್ತಾ ಇದ್ದರೆ ಅಕ್ಕ-ಪಕ್ಕದವರು ಏನಂದುಕೊಳ್ಳಲ್ಲ. ಕೂಲಿ ಮಾಡಿಕೊಂಡು ಇರೋರಿಗೆ ನೆಮ್ಮದಿಯಾಗಿ ಇರಲು ಬಿಡಿ. ನನಗೆ ಯಾರಿಂದ ತೊಂದರೆ ಆಗಿಲ್ಲ , ತೊಂದರೆ ಆಗಿದ್ದರೆ ನಾನೇ ಬಂದು ಹೇಳುತ್ತೇನೆ. ನನಗೆ ಏನೂ ತೊಂದರೆ ಇಲ್ಲ, ನೀವು ತೊಂದರೆ ಕೊಟ್ಟರೆ ನನಗೆ ಹಾಗೂ ನನ್ನ ಗಂಡನಿಗೆ ಏನಾದರೂ ಆದರೆ ನೀವೇ ಜವಾಬ್ದಾರಿ ಆಗಬೇಕಾಗುತ್ತೆ. ನೀವೆ ಹೊಣೆ, ಹೊಣೆ ಆಗೋದಾದರೆ ಮನೆ ಹತ್ತಿರ ಬನ್ನಿ. ನನ್ನ ಮಗ ಗೊತ್ತಿಲ್ಲದೆ ಗಾಬರಿಪಟ್ಟು ಹೀಗೆ ಮಾಡಿದ್ದಾನೆ, ಯಾರೂ ನನಗೆ ತೊಂದರೆ ಕೊಟ್ಟಿಲ್ಲ. ನಾನೇ ಹೋಗಿದ್ದೀನಿ, ಸೇಫ್​ ಆಗಿ ಬರುತ್ತೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Sun, 12 May 24

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us