Property issue Hangal woman kidnapped: ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆ ಕಿಡ್ನಾಪ್, ಶುಕ್ರವಾರ ರಾತ್ರಿ ಬಿಡುಗಡೆ

ದೇವಕ್ಕ ದುಂಡಣ್ಣನವರ ಎಂಬ ಹಿರಿಯ ಜೀವ ಡಿಸೆಂಬರ್ 14, 2021ರಂದು ಕಿಡ್ನಾಪ್​ ಆಗಿದ್ದರು. ಏಳು ಎಕರೆ ಆಸ್ತಿಗಾಗಿ ಐವರು ಸಂಬಂಧಿಕರು ವೃದ್ಧೆಯನ್ನ ಅಪಹರಣ ಮಾಡಿದ್ದರು. ವೃದ್ಧೆಯನ್ನ ಕಿಡ್ನಾಪ್​ ಮಾಡಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವೃದ್ಧೆಗೆ ಸಂತಾನ ಇಲ್ಲದ್ದರಿಂದ ಮಾಣಿಕಪ್ಪ ದುಂಡಣ್ಣನವರ ಎಂಬುವರಿಗೆ ವೃದ್ಧೆ ಆಸ್ತಿ ಬರೆದು ಕೊಟ್ಟಿದ್ದರು.

Property issue Hangal woman kidnapped: ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆ ಕಿಡ್ನಾಪ್, ಶುಕ್ರವಾರ ರಾತ್ರಿ ಬಿಡುಗಡೆ
ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆ ಕಿಡ್ನಾಪ್, ಶುಕ್ರವಾರ ರಾತ್ರಿ ಬಿಡುಗಡೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 18, 2021 | 11:26 AM

ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಮನೆಯಿಂದ ಕಿಡ್ನಾಪ್​ ಆಗಿದ್ದ 98 ವರ್ಷದ ವೃದ್ಧೆ ಪತ್ತೆಯಾಗಿದ್ದಾರೆ. ಅಪಹರಣಕಾರರು ನಿನ್ನೆ ತಡರಾತ್ರಿ ವೃದ್ಧೆಯನ್ನ ಗ್ರಾಮಕ್ಕೆ ತಂದು ಬಿಟ್ಟು ಹೋಗಿದ್ದಾರೆ. ಅಪಹರಣಕ್ಕೀಡಾದ ವೃದ್ಧೆ ಸಧ್ಯ ಪೊಲೀಸ್ ಠಾಣೆಯಲ್ಲಿದ್ದಾರೆ. ಪೊಲೀಸ್ ಠಾಣೆಗೆ ಸಂಬಂಧಿಕರು ಬಂದು ಮಾತನಾಡಿಸ್ತಿದ್ದಂತೆ ವೃದ್ಧೆ ಕಣ್ಣೀರು ಹಾಕಿದ್ದಾರೆ. ಸಂಬಂಧಿಕರು ವೃದ್ಧೆಯನ್ನ ಕಂಡು ಹರ್ಷಗೊಂಡು, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.

ದೇವಕ್ಕ ದುಂಡಣ್ಣನವರ ಎಂಬ ಹಿರಿಯ ಜೀವ ಡಿಸೆಂಬರ್ 14, 2021ರಂದು ಕಿಡ್ನಾಪ್​ ಆಗಿದ್ದರು. ಏಳು ಎಕರೆ ಆಸ್ತಿಗಾಗಿ ಐವರು ಸಂಬಂಧಿಕರು ವೃದ್ಧೆಯನ್ನ ಅಪಹರಣ ಮಾಡಿದ್ದರು. ವೃದ್ಧೆಯನ್ನ ಕಿಡ್ನಾಪ್​ ಮಾಡಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವೃದ್ಧೆಗೆ ಸಂತಾನ ಇಲ್ಲದ್ದರಿಂದ ಮಾಣಿಕಪ್ಪ ದುಂಡಣ್ಣನವರ ಎಂಬುವರಿಗೆ ವೃದ್ಧೆ ಆಸ್ತಿ ಬರೆದು ಕೊಟ್ಟಿದ್ದರು. ಮಾಣಿಕಪ್ಪ ಕುಟುಂಬಸ್ಥರು ಹಲವು ವರ್ಷಗಳಿಂದ ವೃದ್ಧೆಯನ್ನ ಆರೈಕೆ ಮಾಡಿಕೊಂಡು ಬಂದಿದ್ದರು. ವೃದ್ದೆಯ ಸಂಬಂಧಿಕರಾಗಿರೋ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರ ವಿರುದ್ಧ ಅಪಹರಣ ದೂರು ದಾಖಲಾಗಿತ್ತು.

ಇದನ್ನೂ ಓದಿ:

ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣ: ಬೆಳಗಾವಿಯಲ್ಲಿ ದಿಢೀರ್ ಪ್ರತಿಭಟನೆ; ಬಿಗುವಿನ ವಾತಾವರಣ ನಿರ್ಮಾಣ

ಮಹಿಳೆಯರ ವಿವಾಹ ವಯೋಮಿತಿ ಹೆಚ್ಚಿಸುವ ಕೇಂದ್ರದ ಕ್ರಮಕ್ಕೆ ಕೇರಳ ಮುಸ್ಲಿಂ ಸಂಘಟನೆಗಳ ವಿರೋಧ

Published On - 11:13 am, Sat, 18 December 21