ಪಟಾಕಿ ದುರಂತದಿಂದ ಎಚ್ಚೆತ್ತುಕೊಂಡ ಹಾವೇರಿ ಜಿಲ್ಲಾಡಳಿತ: ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕೆ ಕ್ರಮ
ಹಾವೇರಿ ತಾಲೂಕಿನ ಆಲದಕಟ್ಟಿಯಲ್ಲಿ ಪಟಾಕಿ ದುರಂತ ಪ್ರಕರಣದಿಂದಾಗಿ ಎಚ್ಚೆತ್ತುಕೊಂಡಿರುವ ಹಾವೇರಿ ಜಿಲ್ಲಾಡಳಿತ ಇದೀಗ ಗಣೇಶ ಹಬ್ಬಕ್ಕೆ ಮುನ್ನೆಚ್ಚಚರಿಕೆ ಕ್ರಮಕೈಗೊಂಡಿದೆ. ಎಲ್ಲಾ ಪಟಾಕಿ ಅಂಗಡಿಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದೇವೆ. ಪಟಾಕಿ ಮಾರಲು 50 ಜನರಿಗೆ ತಾತ್ಕಾಲಿಕ ಲೈಸೆನ್ಸ್ ನೀಡಲಾಗಿದೆ. ಪರವಾನಗಿ ಇಲ್ಲದವರಿಗೆ ಪಟಾಕಿ ಮಾರಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದ್ದಾರೆ.
ಹಾವೇರಿ, ಸಪ್ಟೆಂಬರ್ 17: ಎಲ್ಲಾ ಪಟಾಕಿ (Firecracker) ಅಂಗಡಿಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದೇವೆ. ಪಟಾಕಿ ಮಾರಲು 50 ಜನರಿಗೆ ತಾತ್ಕಾಲಿಕ ಲೈಸೆನ್ಸ್ ನೀಡಲಾಗಿದೆ. ಪರವಾನಗಿ ಇಲ್ಲದವರಿಗೆ ಪಟಾಕಿ ಮಾರಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 15 ಕಡೆ ಮಾತ್ರ ಪಟಾಕಿ ಮಾರಲು ಸ್ಥಳ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಅಗ್ನಿಶಾಮಕದಳ, ನಗರಸಭೆ, ಪೊಲೀಸರು ಸ್ಥಳ ನಿಗದಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಐವರಿಗೆ ಪರ್ಮನೆಂಟ್ ಲೈಸೆನ್ಸ್ ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ನೀಡಲು ಸೂಚನೆ ನೀಡಿದ್ದೇವೆ. ಷರತ್ತು ಒಪ್ಪಿಕೊಂಡು ದಾಖಲೆ ನೀಡಿದರೆ ಮತ್ತೆ ಲೈಸೆನ್ಸ್ ಕೊಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಪಟಾಕಿ ದುರಂತ: ಮೃತ ನಾಲ್ವರ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ನೀಡಿದ ಮಾಜಿ ಸಿಎಂ ಬೊಮ್ಮಾಯಿ
ಹಾವೇರಿ ತಾಲೂಕಿನ ಆಲದಕಟ್ಟಿಯಲ್ಲಿ ಪಟಾಕಿ ದುರಂತ ಪ್ರಕರಣದಿಂದಾಗಿ ಇದೀಗ ಗಣೇಶ ಹಬ್ಬಕ್ಕೆ ಹಾವೇರಿ ಜಿಲ್ಲಾಡಳಿತ ಮುನ್ನೆಚ್ಚಚರಿಕೆ ಕ್ರಮ ಕೈಗೊಂಡಿದೆ.
ಘಟನೆ ಹಿನ್ನೆಲೆ
ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಸಾತೇನಹಳ್ಳಿ ಬಳಿ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸುಮಾರು ಮೂರು ಲೋಡ ಪಟಾಕಿ ತರಿಸಲಾಗಿತ್ತು. ವೆಲ್ಡಿಂಗ್ ಕಿಡಿ ಪಟಾಕಿ ಗೋದಾಮಿಗೆ ಸಿಡಿದು ಸುಮಾರು ಒಂದುವರೆ ಕೋಟಿ ರೂ. ಮೌಲ್ಯದ ಪಟಾಕಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗುವುದರೊಂದಿಗೆ ನಾಲ್ವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಹಾವೇರಿ ಪಟಾಕಿ ಗೋದಾಮು ದುರಂತ: ನಾಲ್ವರ ವಿರುದ್ಧ ಎಫ್ಐಆರ್ ದಾಖಲು, ತನಿಖೆಗೆ ಬೊಮ್ಮಾಯಿ ಆಗ್ರಹ
ಕುಮಾರ ಸಾತೇನಹಳ್ಳಿ ಎಂಬುವವನು ಪ್ರತಿವರ್ಷದಂತೆ ಈ ವರ್ಷವೂ ಗಣೇಶ್ ಹಬ್ಬಕ್ಕೆ ಸುಮಾರು ಒಂದುವರೆ ಕೋಟಿ ರುಪಾಯಿ ಮೌಲ್ಯದ ಪಟಾಕಿ ತರಿಸಿದ್ದರು. ಹಾವೇರಿ ಹೊರವಲಯದಲ್ಲಿರುವ ಗೋದಮಿನಲ್ಲಿ ಸುಮಾರು ಮೂರು ಲೋಡ ಪಟಾಕಿ ತರಿಸಿದ್ದ. ಮದ್ಯಾಹ್ನ 12 ಗಂಟೆಗೆ ಸುಮಾರಿಗೆ ಅಂಗಡಿಯ ಗೇಟ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಆ ವೇಳೆಯಲ್ಲಿ ವೆಲ್ಡಿಂಗ್ ಕಿಡಿ ಪಟಾಕಿ ಗೋದಾಮು ಸಿಡಿದು ಬೆಂಕಿ ಹತ್ತಿಕೊಂಡಿತ್ತು.
ಅಲ್ಲಿ ಕೆಲಸ ಮಾಡುತ್ತಿದ್ದ ವಾಸೀಮ್ನಿಗೆ (32) ಪಟಾಕಿ ಶಬ್ದ ಕೇಳುತ್ತಿದ್ದಂತೆ. ಕಟ್ಟಡದ ಮೇಲಿನಿಂದ ಬಿದ್ದು ಬೆನ್ನು ಮುರಿದುಕೊಂಡಿದ್ದ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಏಕಾಏಕಿ ಪಟಾಕಿ ಗೋದಾಮಿನಲ್ಲಿ ಬೆಂಕಿ ಹೆಚ್ಚಾಗಿದ್ದು, ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು. ಸುಮಾರು 4 ಬೈಕ್ಗಳು ಸುಟ್ಟು ಭಸ್ಮವಾಗಿದ್ದವು. ಸುಮಾರು ಒಂದುವರೆ ಕೋಟಿ ರೂ. ಮೌಲ್ಯದ ಪಟಾಕಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:22 pm, Sun, 17 September 23