Haveri News: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿ 11 ಕುರಿಗಳು ಸಾವು: ಕಣ್ಣೀರು ಹಾಕಿದ ವೃದ್ಧೆ
ಜನವರಿ 6,7, 8ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿನ ಕೊಳೆತ ಆಹಾರವನ್ನು ತಿಂದು 11 ಕುರಿಗಳು ಮೃತಪಟ್ಟಿರುವಂತಹ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ: ಕಲುಷಿತ ನೀರು ಹಾಗೂ ಆಹಾರ ಸೇವಿಸಿ 11 ಕುರಿಗಳು (sheeps) ಮೃತಪಟ್ಟಿರುವಂತಹ ಘಟನೆ ನಗರದ ಅಜ್ಜಯ್ಯ ದೇವಸ್ಥಾನದ ಬಳಿ ನಡೆದಿದೆ. ಜನವರಿ 6,7, 8ರಂದು ಇದೇ ಸ್ಥಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ನಡೆದಿತ್ತು. ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿ 10 ದಿನದಿಂದ ಕೊಳೆತು ನಾರುತ್ತಿದ್ದ ರೊಟ್ಟಿ, ಅನ್ನ ಹಾಗೂ ಚಪಾತಿ ತಿಂದು ಕುರಿಗಳು ಮೃತಪಟ್ಟಿವೆ ಎಂದು ಕುರಿಗಾಯಿಗಳು ಆರೋಪ ಮಾಡುತ್ತಿದ್ದಾರೆ. ಸುಮಾರ ಒಂದುವರೆ ಲಕ್ಷದ ಮೌಲ್ಯದ 11 ಕುರಿಗಳು ಸಾವಪ್ಪಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿಗಳು ಕಣ್ಣೀರು ಹಾಕಿದರು. ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಪೂರಿತ ಆಹಾರ ಸೇವಿಸಿ ಹದಿನಾರು ಕುರಿಗಳು ಸಾವು
ಇನ್ನು ಇತ್ತೀಚೆಗೆ ವಿಷಪೂರಿತ ಆಹಾರ ಸೇವಿಸಿ ಹದಿನಾರು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ದೊಡ್ಡಗುಬ್ಬಿ ಗ್ರಾಮದ ಬಳಿ ನಡೆದಿತ್ತು. ಮೃತ ಕುರಿಗಳು ಸಂಚಾರಿ ಕುರುಬರಾಗಿರೋ ಚಿಕ್ಕೋಡಿ ಮೂಲದ ಕುರಿಗಾಯಿ ಹುಲಿಯಪ್ಪ ಮದ್ನಳ್ಳಿ ಎಂಬುವರಿಗೆ ಸೇರಿದ್ದವು. ಕುರಿಗಳು ದೊಡ್ಡಗುಬ್ಬಿ ಗ್ರಾಮದ ಬಳಿ ಮೇಯಲು ಹೋಗಿದ್ದ ವೇಳೆ ವಿಷಪೂರಿತ ಆಹಾರ ಸೇವಿಸಿ ಸಾವನ್ನಪ್ಪಿದ್ದವು. ಎರಡೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಕುರಿಗಳು ಸಾವನ್ನಪ್ಪಿದ್ದರಿಂದ ಕುರಿಗಾಯಿ ಕಂಗಾಲಾಗಿದ್ದರು. ಅಸ್ವಸ್ಥಗೊಂಡಿದ್ದ ಹಲವು ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ.
ಇದನ್ನೂ ಓದಿ: ಧಾರವಾಡ: ಸಿಡಿಲು ಬಡಿದು 15 ಕುರಿಗಳು ಸಾವು; ಕುರಿಗಾಹಿ ಆಸ್ಪತ್ರೆಗೆ ದಾಖಲು
ನಾಯಿಗಳ ದಾಲಿಗೆ ಹೆದರಿ ದನದ ಕೊಟ್ಟಿಗೆಗೆ ಜಿಂಕೆ
ಉಡುಪಿ: ಪರ್ಕಳ ಹೆರ್ಗ ಬಳಿ ದನದ ಕೊಟ್ಟಿಗೆಗೆ ಜಿಂಕೆಯೊಂದು ನುಗ್ಗಿರುವಂತಹ ಘಟನೆ ಪರ್ಕಳದ ಹೆರ್ಗ ಗ್ರಾಮದ ಗಣಪತಿ ಮಠದ ಬಳಿ ನಡೆದಿದೆ. ಕಾಡಿನಲ್ಲಿದ್ದ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ನಾಯಿಗಳ ದಾಳಿಗೆ ಹೆದರಿ ದನದ ಕೊಟ್ಟಿಗೆಗೆ ನುಗ್ಗಿ ಜಿಂಕೆ ಆಶ್ರಯ ಪಡೆದುಕೊಂಡಿದೆ. ಪರಿಸ್ಥಿತಿಯನ್ನು ಅವಲೋಕಿಸಿದ ಸ್ಥಳೀಯರು ಜಿಂಕೆಗೆ ಸೂಕ್ತ ರಕ್ಷಣೆ ನೀಡಿದ್ದಾರೆ. ಬಳಿಕ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಇನ್ನು ಗಾಯಗೊಂಡ ಜಿಂಕೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ಮೀನುಗಳು, ಬಾತುಕೋಳಿಗಳ ಸಾವು; ವಿಷಯುಕ್ತ ಮೇವು ಸೇವಿಸಿ 60 ಕುರಿಗಳು ಮೃತ
ಫುಡ್ ಡೆಲಿವರಿ ಬಾಯ್ ಬಳಿ ಸುಲುಗೆ: ನಾಲ್ವರು ಆರೋಪಿಗಳು ಅಂದರ್
ಬೆಂಗಳೂರು: ಫುಡ್ ಡೆಲಿವರಿ ಬಾಯ್ ಬಳಿ ಸುಲುಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಾಂತವೀರ ಅಲಿಯಾಸ್ ಗುಂಡ, ಸಂಜು ಅಲಿಯಾಸ್ ಕರಿಯ ಅಲಿಯಾಸ್ ವಾಲೆ, ದಿನೇಶ್ ಕಾಟ ಅಲಿಯಾಸ್ ಪಾಪು, ಸುಮಂತ್ ಅಲಿಯಾಸ್ ಜಾಕಿ ಬಂಧಿತರು. ಡಿಸೆಂಬರ್ 20ರಂದು ಆರೋಪಿಗಳು ಕೃತ್ಯ ನಡೆಸಿದ್ದರು. ಡೆಲಿವರಿ ಬಾಯ್ ನಿಲೇಶ್ ಎಂಬಾತನನ್ನ ಅಡ್ಡಗಟ್ಟಿ ಸುಲುಗೆ ಮಾಡಿದ್ರು. ಚಾಕು ತೋರಿಸಿ ಹೆದರಿಸಿ ಆತನ ಬಳಿ ಹಣ, ಮೊಬೈಲ್ ಕಸಿದುಕೊಂಡಿದ್ರು. ಇದೇ ರೀತಿ ಹಲವು ಪ್ರಕರಣಗಳಲ್ಲಿ A1 ಶಾಂತವೀರ ಭಾಗಿಯಾಗಿದ್ದಾನೆ. ಸದ್ಯ ಶಾಂತವೀರ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದು, ಮೂರು ಬೈಕ್, ಮೊಬೈಲ್ಗಳು ಜಪ್ತಿ ಮಾಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:44 pm, Wed, 18 January 23