ಕೊರೊನಾ ಹೆಚ್ಚಳ ಹಿನ್ನೆಲೆ: ಹುಕ್ಕೇರಿ ಮಠದ ಜಾತ್ರೆ ರದ್ದು; ರಥೋತ್ಸವ, ವೇದಿಕೆ ಕಾರ್ಯಕ್ರಮ ಇಲ್ಲ
ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಜಾತ್ರೆ ಈ ಬಾರಿ ಕೊರೊನಾ ಸೋಂಕು ಮತ್ತೆ ಹೆಚ್ಚಳ ಆಗುತ್ತಿರುವ ಕಾರಣ ಮೊಟಕುಗೊಂಡಿದೆ. ಹಾವೇರಿ ನಗರದಲ್ಲಿ ಐದು ದಿನಗಳ ಕಾಲ ನಡೆಯುತ್ತಿದ್ದ ಜಾತ್ರೆ ಸೀಮಿತವಾಗಿ ನಡೆಯಲಿದೆ.
ಹಾವೇರಿ: ಕೊರೊನಾ ಸೋಂಕು ಹೆಚ್ಚಳ ಆಗುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ, ಹಾವೇರಿಯ ಹುಕ್ಕೇರಿ ಮಠದ ಜಾತ್ರೆ ರದ್ದುಗೊಳಿಸಲಾಗಿದೆ. ಜನವರಿ 8ನೇ ತಾರೀಖಿನಿಂದ ಜನವರಿ 13ರ ವರೆಗೆ ನಡೆಯುತ್ತಿದ್ದ ಹುಕ್ಕೇರಿ ಜಾತ್ರೆ ರದ್ದು ಮಾಡಲಾಗಿದೆ. ಜಾತ್ರೆ ಪ್ರಯುಕ್ತ ಮಠದ ಆವರಣದಲ್ಲಿ ನಡೆಯುತ್ತಿದ್ದ ವೇದಿಕೆ ಕಾರ್ಯಕ್ರಮ ಹಾಗೂ ರಥೋತ್ಸವ ಕಾರ್ಯಕ್ರಮ ಕೂಡ ರದ್ದುಗೊಳಿಸಲಾಗಿದೆ.
ದೈಹಿಕ ಅಂತರ ಕಾಯ್ದುಕೊಂಡು ಭಕ್ತಾದಿಗಳಿಗೆ ದರ್ಶನಾಶೀರ್ವಾದ ಮತ್ತು ಪ್ರಸಾದ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಜಾತ್ರೆ ಈ ಬಾರಿ ಕೊರೊನಾ ಸೋಂಕು ಮತ್ತೆ ಹೆಚ್ಚಳ ಆಗುತ್ತಿರುವ ಕಾರಣ ಮೊಟಕುಗೊಂಡಿದೆ. ಹಾವೇರಿ ನಗರದಲ್ಲಿ ಐದು ದಿನಗಳ ಕಾಲ ನಡೆಯುತ್ತಿದ್ದ ಜಾತ್ರೆ ಸೀಮಿತವಾಗಿ ನಡೆಯಲಿದೆ.
ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಹಾಗೂ ಶಿವಲಿಂಗ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಹುಕ್ಕೇರಿ ಮಠದ ಜಾತ್ರೆ ನಡೆಯುತ್ತಿತ್ತು. ನಮ್ಮೂರು ಜಾತ್ರೆ ಹೆಸರಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮಗಳು ನಡೆಯುತ್ತಿತ್ತು. ಸರಕಾರದ ಕೊವಿಡ್19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಮಠದ ಜಾತ್ರೆ ರದ್ದು ಮಾಡಲಾಗಿದೆ. ಪತ್ರಿಕಾ ಪ್ರಕಟಣೆ ಮೂಲಕ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೊರೊನಾ ಮಾರ್ಗಸೂಚಿ ಪಾಲಿಸಲು ಕಾರ್ಮಿಕ ಇಲಾಖೆಗೆ ಆದೇಶ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳ ಹಿನ್ನೆಲೆ ಕಾರ್ಮಿಕ ಇಲಾಖೆಗೆ ಕೊರೊನಾ ಮಾರ್ಗಸೂಚಿ ಹೊರಡಿಸಿ ಸಿಎಸ್ ರವಿಕುಮಾರ್ ಆದೇಶ ನೀಡಿದ್ದಾರೆ. ಕೈಗಾರಿಕೆ, ಐಟಿ ವಲಯದ ಉದ್ಯೋಗಿಗಳು ಲಸಿಕೆ ಪಡೆದಿರಬೇಕು. ಕೆಲಸದ ಸ್ಥಳದಲ್ಲಿ ಕೊವಿಡ್ ಮಾರ್ಗಸೂಚಿ ಪಾಲಿಸಬೇಕು. ಸ್ಥಳೀಯ ಕಾರ್ಮಿಕ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು. ಮಾರ್ಗಸೂಚಿ ಪಾಲನೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಗೆ ಸಿಎಸ್ ರವಿಕುಮಾರ್ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಎಷ್ಟೆಲ್ಲ ಒಳ್ಳೆಯದಾಗುತ್ತಿದೆ ಎನ್ನುತ್ತ ಬರೋಬ್ಬರಿ 11 ಡೋಸ್ ಕೊರೊನಾ ಲಸಿಕೆ ಪಡೆದ 84ರ ವೃದ್ಧ !-ತನಿಖೆಗೆ ಆದೇಶ
ಇದನ್ನೂ ಓದಿ: ಜನರನ್ನು ಸೇರಿಸಲು ಬಿಡದಿದ್ರೂ ನಾನು, ಡಿಕೆ ಶಿವಕುಮಾರ್ ಇಬ್ಬರೇ ಪಾದಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ