ಆಡಿಯೋ ವೈರಲ್; ಪಿಡಿಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ತಾಲೂಕು ಪಂಚಾಯತಿ ಇಒ

ಮೊಬೈಲ್ ಸ್ವಿಚ್ ಆಫ್​ ಮಾಡಿದ್ದಕ್ಕೆ ನಿಂದಿಸಿರುವ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ, ನೀನು ಮೊಬೈಲ್ ಸ್ವಿಚ್ ಆಫ್​ ಮಾಡಬಾರದು, ಮಾಡಿದರೆ ನಿನ್ನ ಸಂಬಳ ಕಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಸದ್ಯ ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.

ಆಡಿಯೋ ವೈರಲ್; ಪಿಡಿಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ತಾಲೂಕು ಪಂಚಾಯತಿ ಇಒ
ತಾಲೂಕು ಪಂಚಾಯತಿ ಇಒ ವಿಲಾಸರಾಜ
Follow us
TV9 Web
| Updated By: preethi shettigar

Updated on: Jun 18, 2021 | 10:36 AM

ಕಲಬುರಗಿ: ಪಿಡಿಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ಒಂದು ಕಲಬುರಗಿಯಲ್ಲಿ ವೈರಲ್ ಆಗಿದೆ. ಸೊನ್ನ ಹಾಗೂ ಹುಲ್ಲೂರು ಗ್ರಾಮ ಪಂಚಾಯಿತಿ ಪಿಡಿಒ ಬಸಯ್ಯ ಹಿರೇಮಠ ಅವರಿಗೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕು ಪಂಚಾಯತಿ ಇಒ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮೊಬೈಲ್ ಸ್ವಿಚ್ ಆಫ್​ ಮಾಡಿದ್ದಕ್ಕೆ ನಿಂದಿಸಿರುವ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ, ನೀನು ಮೊಬೈಲ್ ಸ್ವಿಚ್ ಆಫ್​ ಮಾಡಬಾರದು, ಮಾಡಿದರೆ ನಿನ್ನ ಸಂಬಳ ಕಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಸದ್ಯ ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.

ಆಶಾ ಕಾರ್ಯಕರ್ತೆಗೆ ಅಶ್ಲೀಲ ಪದಗಳಿಂದ ನಿಂದನೆ ತುಮಕೂರು: ಆಶಾ ಕಾರ್ಯಕರ್ತೆಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿ ವಿಡಿಯೋ ಮೂಲಕ ಟ್ರೋಲ್ ಮಾಡಿದ ಘಟನೆಯೊಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ರಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಲಾಕ್​ಡೌನ್ ಸಂದರ್ಭದಲ್ಲಿ ಮೂವರು ಮಹಿಳೆಯರು ಬೆಂಗಳೂರಿನಿಂದ ಬಂದಿದ್ದರು. ಇವರನ್ನು ಕೊವಿಡ್ ಟೆಸ್ಟ್ ಮಾಡಿಸಿ ಎಂದು ಹೇಳಿದ್ದ ಆಶಾ ಕಾರ್ಯಕರ್ತೆಯನ್ನು ನಿಂದಿಸಲಾಗಿದೆ.

ಕೊವಿಡ್ ಟೆಸ್ಟ್ ಮಾಡಿಸಲ್ಲ ಎಂದು ನಗರದಿಂದ ಬಂದ ಮಹಿಳೆಯರು ಆಶಾ ಕಾರ್ಯಕರ್ತೆಯ ಮೇಲೆ ಈ ಸಂದರ್ಭದಲ್ಲಿ ಜಗಳ‌ ಮಾಡಿದ್ದರು. ಇತ್ತಿಚೆಗೆ ಬೆಂಗಳೂರಿಗೆ ವಾಪಸ್ ಆದ ಬಳಿಕ ಆಶಾ ಕಾರ್ಯಕರ್ತೆಯ ಫೋಟೊ ಪಡೆದ ಈ ಮಹಿಳೆಯರು ಅಶ್ಲೀಲ ಪದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ನೊಂದ ಆಶಾ ಕಾರ್ಯಕರ್ತೆ ದೂರು ನೀಡಿದ್ದಾರೆ.

ಇದನ್ನೂ ಓದಿ:

ಆಶಾ ಕಾರ್ಯಕರ್ತೆಗೆ ಅಶ್ಲೀಲ ಪದಗಳಿಂದ ನಿಂದನೆ; ಟ್ರೋಲ್ ಮಾಡಿದ ವಿಡಿಯೋ ವೈರಲ್

ಅಶ್ಲೀಲ ಸಿಡಿಯಲ್ಲಿ ಅವಾಚ್ಯ ಶಬ್ದಗಳ ಬಳಕೆ; ಕನ್ನಡಿಗರನ್ನು ನಿಂದಿಸಿದ್ದಕ್ಕಾಗಿ ರಮೇಶ್​ ಜಾರಕಿಹೊಳಿ ವಿರುದ್ಧ ದೂರು ದಾಖಲು