ಸೇಡಂ ಬಳಿ ಎರಡು ಬೈಕ್ಗಳ ಭೀಕರ ಅಪಘಾತ: ನಾಲ್ವರು ಯುವಕರ ದುರಂತ ಅಂತ್ಯ
ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಯುವಕರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಬಾಳ (ಟಿ) ಗ್ರಾಮದ ಬಳಿ ನಡೆದಿದೆ. ಘಟನಾ ಸ್ಥಳಕ್ಕೆ ಸೇಡಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲಬುರಗಿ, ಮಾರ್ಚ್ 07: ಎರಡು ಬೈಕ್‌ಗಳು (bike) ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಯುವಕರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಆಬಾಳ (ಟಿ) ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಸಿದ್ದು, ಸರೇಶ್ ರೆಡ್ಡಿ, ಮಲ್ಲು ಪೂಜಾರಿ ಮತ್ತು ಪ್ರಕಾಶ್ ಪೂಜಾರಿ ಮೃತರು. ಸೇಡಂನಿಂದ ಆಬಾಳ್ ಕಡೆ ಹೊರಟಿದ್ದ ಒಂದು ಬೈಕ್ಗೆ ಎದುರಿಗೆ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿವೆ. ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೇಡಂ ಠಾಣೆಯ ಪೊಲೀಸರು ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಸಿಕೊಂಡಿದ್ದಾರೆ.
ರೌಡಿಶೀಟರ್ ಬರ್ಬರ ಹತ್ಯೆ ಮಾಡಿದ್ದ ಆರೋಪಿ ಬಂಧಿನ
ರೌಡಿ ಶೀಟರ್ ಬರ್ಬರ ಹತ್ಯೆ ಮಾಡಿದ್ದ ಆರೋಪಿಯನ್ನು ಕಲಬುರಗಿಯ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಾನಂದ ಅಲಿಯಾಸ ಶಿವು ಕುಂಬಾರ ಬಂಧಿತ ಆರೋಪಿ. ಮಾ.4 ರಂದು ನಸುಕಿನ ಜಾವ ರೌಡಿ ಶೀಟರ್ ವಿರೇಶ್ ಅಲಿಯಾಸ ಸಾರಥಿಯನ್ನ ಬರ್ಬರ ಹತ್ಯೆ ಮಾಡಿದ್ದ.
ಇದನ್ನೂ ಓದಿ: ಬೆಂಗಳೂರು: ಯುವತಿ ಜತೆ ಲಿವ್ ಇನ್ನಲ್ಲಿದ್ದ ಉತ್ತರ ಪ್ರದೇಶದ ಯುವಕ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ರಾತ್ರಿ ಎಣ್ಣೆ ಪಾರ್ಟಿ ಮಾಡಿ ನಸುಕಿನ ಜಾವ ಹತ್ಯೆ ಮಾಡಲಾಗಿತ್ತು. ಕಬ್ಬಿಣದ ರಾಡ್ನಿಂದ ಬರ್ಬರವಾಗಿ ಶಿವು ಹತ್ಯೆ ಮಾಡಿದ್ದ. 50 ಸಾವಿರ ರೂ ಹಣ ನೀಡುವಂತೆ ರೌಡಿಶೀಟರ್ ಪೀಡಿಸಿದ್ದ. ಹಾಗಾಗಿ ಕೊಪಗೊಂಡು ರೌಡಿಶೀಟರ್ನನ್ನೆ ಶಿವು ಹತ್ಯೆ ಮಾಡಿದ್ದ. ಕಲಬುರಗಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಬಳಿ ನಡೆದಿದೆ. ಅಲಪನಹಳ್ಳಿ ಗ್ರಾಮದ ನಿವಾಸಿ ಲಿಂಗಪ್ಪ (50) ಮೃತ ಬೈಕ್ ಸವಾರ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವೈಟ್ ಆ್ಯಂಡ್ ಬ್ಲಾಕ್ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: ಮೂವರ ಬಂಧನ
ಲಿಂಗಪ್ಪ ಐಸ್ ಕ್ರೀಂ ಮಾರಾಟ ಮಾಡಲು ಹೋಗುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್ ಚಾಲಕನ ಅತಿವೇಗದ ಚಾಲನೆಯಿಂದ ಬೈಕ್ ಮೇಲೆ ಹರಿದು ಸವಾರ ಮೃತಪಟ್ಟಿದ್ದಾನೆ. ಮಣ್ಣು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಸಮೇತ ಚಾಲಕ ಪರಾರಿ ಆಗಿದ್ದಾನೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವೈದ್ಯ ಸಾವು
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಬಳಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವೈದ್ಯ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಡಾ.ಜಯರಾಂ ನಾಯ್ಕ್(53) ಮೃತ ವ್ಯಕ್ತಿ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.