AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿಯಲ್ಲಿ ಚಿನ್ನದಂಗಡಿ ದರೋಡೆ ಕೇಸ್​: ಕಳ್ಳರ ಖತರ್ನಾಕ್ ಪ್ಲ್ಯಾನ್ ಬಯಲು

ಕಲಬುರಗಿಯಲ್ಲಿ ನಡೆದ ಚಿನ್ನದ ಅಂಗಡಿ ದರೋಡೆ ಪ್ರಕರಣದಲ್ಲಿ ಪೊಲೀಸರು ಮಹತ್ವದ ಸುಳಿವು ಪತ್ತೆಹಚ್ಚಿದ್ದಾರೆ. ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಕಳ್ಳರ ಖತರ್ನಾಕ್ ಪ್ಲ್ಯಾನ್ ಬಯಲು ಮಾಡಿದ್ದಾರೆ. ಮತ್ತೊಬ್ಬ ಮಾಸ್ಟರ್ ಮೈಂಡ್ ಬಗ್ಗೆ ಸುಳಿವು ಸಿಕ್ಕಿದೆ. ಜೊತೆಗೆ ಆರೋಪಿಗಳು ಹೈದರಾಬಾದ್​​​ನಿಂದ ಪಶ್ಚಿಮ ಬಂಗಾಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

ಕಲಬುರಗಿಯಲ್ಲಿ ಚಿನ್ನದಂಗಡಿ ದರೋಡೆ ಕೇಸ್​: ಕಳ್ಳರ ಖತರ್ನಾಕ್ ಪ್ಲ್ಯಾನ್ ಬಯಲು
ದರೋಡೆಕೋರರು
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Jul 13, 2025 | 11:27 AM

Share

ಕಲಬುರಗಿ, ಜುಲೈ 13: ನಗರದ ಸರಾಫ್ ಬಜಾರ್‌ನಲ್ಲಿ ನಡೆದ ಚಿನ್ನದಂಗಡಿ ದರೋಡೆಗೆ (Robbery) ಇಡೀ ಕಲಬುರಗಿ (Kalaburagi) ಬೆಚ್ಚಿ ಬಿದ್ದಿದೆ. ಶನಿವಾರ ಮಧ್ಯಾಹ್ನ 12.30ಕ್ಕೆ ಚಿನ್ನದಂಗಡಿಗೆ ನುಗ್ಗಿದ ನಾಲ್ವರು ಖದೀಮರು, ಗನ್ ತೋರಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆೆ. ಇದೀಗ ದರೋಡೆಕೋರರ ಬಗ್ಗೆ ಪೊಲೀಸರು ಮಹತ್ವದ ಸುಳಿವು ಪತ್ತೆ ಹಚ್ಚಿದ್ದಾರೆ. ದರೋಡೆ ಹಿಂದೆ ಇದ್ದಿದ್ದು ನಾಲ್ವರ ಕೈವಾಡವಲ್ಲ ಬದಲಿಗೆ ಐವರ ಕೈವಾಡ ಎಂಬುವುದು ತಿಳಿದುಬಂದಿದೆ.

ಕಲಬುರಗಿ ನಗರದ ಬ್ರಹ್ಮಪುರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಘಟನೆ ನಡೆದಿದೆ. ದರೋಡೆ ವೇಳೆ ನಾಲ್ವರು ಮಾತ್ರ ಕಂಡಿದ್ದು, ಮತ್ತೊಬ್ಬ ಮಾಸ್ಟರ್ ಮೈಂಡ್ ಬಗ್ಗೆ ಪೊಲೀಸರು ಸುಳಿವು ಪತ್ತೆ ಹಚ್ಚಿದ್ದಾರೆ. ದರೋಡೆ ಬಳಿಕ ನಾಲ್ವರು ಬಸ್ ನಿಲ್ದಾಣಕ್ಕೆ ಬಂದಾಗ ಮತ್ತೊಬ್ಬನ ಎಂಟ್ರಿ ಆಗಿದೆ. ಸದ್ಯ 5ನೇ ಆರೋಪಿ ಈ ನಾಲ್ವರಿಗೆ ಹಣಕಾಸಿನ ಸಹಾಯ ಮಾಡಿರುವ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಕೋಲಾರದಲ್ಲಿ SBI ಎಟಿಎಂ ದೋಚಿದ ಖದೀಮರು

ಇದನ್ನೂ ಓದಿ
Image
ಹಾಡಹಗಲೇ ಚಿನ್ನದಂಗಡಿಗೆ ನುಗ್ಗಿ ಮಾಲೀಕನ ತಲೆಗೆ ಗನ್​ ಇಟ್ಟು ದರೋಡೆ
Image
ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಕೋಲಾರದಲ್ಲಿ SBI ಎಟಿಎಂ ದೋಚಿದ ಖದೀಮರು!
Image
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
Image
ಸಾಲ ಕೊಡದಿದ್ದಕ್ಕೆ ನ್ಯಾಮತಿ ಬ್ಯಾಂಕ್ ದರೋಡೆ: ಸಹೋದರರ ಬಂಧನ!

ದರೋಡೆ ಪ್ರಕರಣದಲ್ಲಿ 5ನೇ ಆರೋಪಿ ಮಾತ್ರ ಮೊಬೈಲ್ ಬಳಕೆ ಮಾಡಿದ್ದು, ಬಸ್ ನಿಲ್ದಾಣ ಬಳಿಯ ಹೋಟೆಲ್​ನಲ್ಲಿ ಇತರರಿಗೆ ​ಫೋನ್​ಪೇ ಮೂಲದ ಹಣ ವರ್ಗಾವಣೆ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಐದನೇ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿರುವ ಖಾಕಿ ಫೋನ್​ಪೇ ಮಾಡಿರುವ ನಂಬರ್ ಆಧಾರದ ಮೇಲೆ ಹುಡುಕಾಟ ನಡೆಸಿದ್ದಾರೆ.

ಇನ್ನು ಆರೋಪಿಗಳು ಕಲಬುರಗಿ ಬಸ್ ನಿಲ್ದಾಣದ ಪ್ಲಾಟ್​ಫಾರ್ಮ್ ನಂ.6ರಿಂದ ಬಸ್​ ಹತ್ತಿಕೊಂಡು ಹೈದರಾಬಾದ್​​​ನಿಂದ ಪಶ್ಚಿಮ ಬಂಗಾಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಆರೋಪಿಗಳ ಜಾಡು ಬೆನ್ನತ್ತಿದ ಪೊಲೀಸರು ಕೂಡ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ.

ಪಕ್ಕಾ ಪ್ಲ್ಯಾನ್: ಯಾವ ಸಿನಿಮಾಗೂ ಕಮ್ಮಿಯಿಲ್ಲ

ದರೋಡೆಗೂ ಮುನ್ನ ಚಿನ್ನದಂಗಡಿಯ ಒಳಗಿನ ಚಲನವಲನ ವಾಚ್ ಮಾಡಿದ್ದ ಖದೀಮರ ಪೈಕಿ ಇಬ್ಬರು ಚಿನ್ನದಂಗಡಿಗೆ ನುಗ್ಗಿದ್ದಾರೆ. ಇದರಲ್ಲಿ ಒಬ್ಬ ಪೊಲೀಸರ ಗಮನ ಬೇರೆಡೆ ಸೆಳೆಯಲು ನಾಟಕ ಮಾಡಿದ್ದಾನೆ. ಮೊಬೈಲ್‌ನಲ್ಲಿ ಮಾತಾಡಿದಂತೆ ನಟಿಸಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಉಳಿದ ಮೂವರು ಮೊಬೈಲ್ ಬಳಸದೇ ಕೃತ್ಯ ಎಸಗಿದ್ದಾರೆ.

ಇಬ್ಬರು ಸಿಗ್ನಲ್ ಕೊಡ್ತಿದ್ದಂತೆ ಮತ್ತಿಬ್ಬರು ಗನ್ ಸಮೇತ ಒಳ ನುಗ್ಗಿದ್ದು, ಜುವೆಲ್ಲರಿ ಶಾಪ್‌ನ ಸಿಬ್ಬಂದಿಯ ತಲೆಗೆ ಗನ್ ಪಾಯಿಂಟ್ ಇಟ್ಟು ಬೆದರಿಕೆ ಹಾಕಿದ್ದಾರೆ. ಕಾರು ಬೈಕ್ ಬಳಸಿದರೆ ಸಿಕ್ಕಿಬೀಳ್ತೇವೆಂಬ ಭಯದಲ್ಲಿ ಕಾಲ್ನಡಿಗೆಯಲ್ಲಿ ಬಂದಿದ್ದ ಕಳ್ಳರು, ಆಟೋ ಹತ್ತಿ ಎಸ್ಕೇಪ್ ಆಗಿದ್ದಾರೆ. ಕೇಂದ್ರ ಬಸ್ ನಿಲ್ದಾಣದವರೆಗೂ ಆಟೋದಲ್ಲಿ ತೆರಳಿ ಗ್ಯಾಂಗ್ ಪರಾರಿಯಾಗಿದ್ದು, ಖದೀಮರು ಆಟೋದಲ್ಲಿ ತೆರಳುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ನ್ಯಾಮತಿ SBI ಬ್ಯಾಂಕ್ ದರೋಡೆ: ಪಾಳು ಬಾವಿಯಲ್ಲಿ 17 ಕೆಜಿ ಚಿನ್ನ ಬಚ್ಚಿಟ್ಟಿದ್ದ ಗ್ಯಾಂಗ್ ಅಂದರ್

ಇನ್ನೂ ಎರಡ್ಮೂರು ಕೆಜಿ ಕಳುವಾಗಿದೆ ಅಂತಾ ಜುವೆಲ್ಲರಿ ಮಾಲೀಕ ಮಲಿಕ್ ಹೇಳಿದ್ದಾರೆ. ಆದರೆ ಪರಿಶೀಲನೆ ಮಾಡಿದಾಗ 820 ಗ್ರಾಮ್ ಚಿನ್ನಾಭರಣ ಅಂತಾ ಗೊತ್ತಾಗಿದೆ. ಸದ್ಯ ನಾಲ್ವರು ದರೋಡೆಕೋರರ ಬೇಟೆಗೆ 5 ಪೊಲೀಸರ ತಂಡ ಶೋಧಕ್ಕಿಳಿದಿದೆ. ಮೊಬೈಲ್ ಟವರ್ ಲೋಕೆಷನ್, ಸಿಡಿಆರ್ ಸಂಗ್ರಹಿಸಿ ತನಿಖೆ ನಡೆಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ