AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನು ಕೊಚ್ಚಿ ಕೊಲೆಗೈದು ಮಗುವಿನೊಂದಿಗೆ ಬಾವಿಗೆ ಹಾರಿದ ಗಂಡ; ಸ್ಥಳೀಯರಿಂದ ಮಗುವಿನ ರಕ್ಷಣೆ, ಲಕ್ಷ್ಮೀಪುತ್ರ ಸಾವು!

ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದ ದುರಂತ ಘಟನೆಯಲ್ಲಿ, ಕೌಟುಂಬಿಕ ಕಲಹದಿಂದ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಮಗುವಿನೊಂದಿಗೆ ಬಾವಿಗೆ ಹಾರಿದ್ದಾನೆ. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಮಗು ರಕ್ಷಿಸಲ್ಪಟ್ಟರೂ, ಪತಿ ಸಾವನ್ನಪ್ಪಿದ್ದಾನೆ. ರೇವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆ ಮತ್ತು ಆತ್ಮಹತ್ಯೆಯ ಹಿಂದಿನ ನಿಖರ ಕಾರಣಗಳ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಆಘಾತ ಮೂಡಿಸಿದ ಘಟನೆ.

ಹೆಂಡತಿಯನ್ನು ಕೊಚ್ಚಿ ಕೊಲೆಗೈದು ಮಗುವಿನೊಂದಿಗೆ ಬಾವಿಗೆ ಹಾರಿದ ಗಂಡ; ಸ್ಥಳೀಯರಿಂದ ಮಗುವಿನ ರಕ್ಷಣೆ, ಲಕ್ಷ್ಮೀಪುತ್ರ ಸಾವು!
ಕಲಬುರಗಿ ದುರಂತ
ದತ್ತಾತ್ರೇಯ ಪಾಟೀಲ್​
| Edited By: |

Updated on: Apr 28, 2026 | 2:41 PM

Share

ಕಲಬುರಗಿ, ಏ.28: ಜಿಲ್ಲೆಯಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದ ಬಳಿ ಸಂಭವಿಸಿದ ಘೋರ ಕೃತ್ಯವೊಂದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಕೌಟುಂಬಿಕ ಕಲಹದ ಕಾರಣ ಪತಿ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಲಕ್ಷ್ಮೀಪುತ್ರ ಎಂಬಾತ ತನ್ನ 23 ವರ್ಷದ ಪತ್ನಿ ಅಂಜಲಿಯನ್ನು ಮನೆಯಲ್ಲೇ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹೆಂಡತಿಯನ್ನು ಕೊಂದ ನಂತರ, ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಲಕ್ಷ್ಮೀಪುತ್ರ ಮದರಾ (ಕೆ) ಗ್ರಾಮದ ಸಮೀಪದ ಬಾವಿಗೆ ಜಿಗಿದಿದ್ದಾನೆ.

ಲಕ್ಷ್ಮೀಪುತ್ರ ಮಗುವಿನೊಂದಿಗೆ ಬಾವಿಗೆ ಹಾರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಗ್ರಾಮಸ್ಥರು ಕೂಡಲೇ ಬಾವಿಗೆ ಜಿಗಿದು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಲಕ್ಷ್ಮೀಪುತ್ರ ಬಾವಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಅಪ್ರಾಪ್ತ ಮಕ್ಕಳ ಮೇಲೆ ಕಾಂಗ್ರೆಸ್‌ ಮುಖಂಡನ ಪೈಶಾಚಿಕ ಕೃತ್ಯ: ಕಬ್ಬಿಣದ ರಾಡ್‌ನಿಂದ ಏಟು; ಪೊಕ್ಸೋ ಅಡಿಯಲ್ಲಿ ಕೇಸ್!

ಈ ಘಟನೆ ನಡೆದ ತಕ್ಷಣ ರೇವೂರು ಪೊಲೀಸರು ಮತ್ತು ಸೋಕೋ (SOCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಜಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಾವಿಯಿಂದ ಲಕ್ಷ್ಮೀಪುತ್ರನ ಶವವನ್ನು ಹೊರತೆಗೆಯಲಾಗಿದೆ. ಈ ಕುರಿತು ರೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮತ್ತು ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾರಿ ಮಳೆಯಿಂದ ದೆಹಲಿ ವಿಮಾನ ನಿಲ್ದಾಣ ಜಲಾವೃತ; ಪ್ರಯಾಣಿಕರ ಪರದಾಟ
ಭಾರಿ ಮಳೆಯಿಂದ ದೆಹಲಿ ವಿಮಾನ ನಿಲ್ದಾಣ ಜಲಾವೃತ; ಪ್ರಯಾಣಿಕರ ಪರದಾಟ
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ