AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ 15 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಆ್ಯಂಬುಲೆನ್ಸ್: ಲೇಟಾಗಿ ಬಂದ್ರೆ ಬೀಳುತ್ತೆ 5 ಸಾವಿರ ದಂಡ

ಕರ್ನಾಟಕ ಆರೋಗ್ಯ ಇಲಾಖೆಯು 108 ಆ್ಯಂಬುಲೆನ್ಸ್‌ ಸೇವೆಗೆ ಹೊಸ, ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ, ಆ್ಯಂಬುಲೆನ್ಸ್ ಕರೆ ಮಾಡಿದ 15 ನಿಮಿಷದೊಳಗೆ ಸ್ಥಳ ತಲುಪದಿದ್ದರೆ ₹5,000 ದಂಡ ವಿಧಿಸಲಾಗುತ್ತದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಹಳೆಯ ವಾಹನಗಳ ಬದಲಿಗೆ ಹೊಸ, ಸುಸಜ್ಜಿತ ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗುವುದು. ತುರ್ತು ವೈದ್ಯಕೀಯ ಸೇವಾ ವಿಳಂಬಕ್ಕೆ ಅವಕಾಶವಿಲ್ಲ.

ಇನ್ಮುಂದೆ 15 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಆ್ಯಂಬುಲೆನ್ಸ್: ಲೇಟಾಗಿ ಬಂದ್ರೆ ಬೀಳುತ್ತೆ 5 ಸಾವಿರ ದಂಡ
ಸಾಂದರ್ಭಿಕ ಚಿತ್ರ
ವಿನಯ್​ ಕಾಶಪ್ಪನವರ್​
| Edited By: |

Updated on:Jul 15, 2026 | 2:06 PM

Share

ಮುಖ್ಯಾಂಶಗಳು

  • 108 ಆ್ಯಂಬುಲೆನ್ಸ್ ಸೇವೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ
  • ನಾವೀನ್ಯ ಹಾಗೂ ಕಟ್ಟುನಿಟ್ಟಾದ ನಿಯಮ ಜಾರಿ
  • 15 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ರೋಗಿಯಿರುವ ಸ್ಥಳಕ್ಕೆ ತಲುಪಬೇಕು

ಬೆಂಗಳೂರು, ಜು.15: ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಜೀವದಾತನಾಗಿರುವ 108 ಆ್ಯಂಬುಲೆನ್ಸ್ ಸೇವೆಗೆ ಸಂಬಂಧಿಸಿದಂತೆ ಕರ್ನಾಟಕ ಆರೋಗ್ಯ ಇಲಾಖೆಯು ದೇಶದಲ್ಲೇ ಅತ್ಯಂತ ನಾವೀನ್ಯ ಹಾಗೂ ಕಟ್ಟುನಿಟ್ಟಾದ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ಇನ್ಮುಂದೆ ಕರೆ ಮಾಡಿದ ಕೇವಲ 15 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ರೋಗಿಯಿರುವ ಸ್ಥಳಕ್ಕೆ ತಲುಪದಿದ್ದರೆ, ಸಂಬಂಧಪಟ್ಟ ಚಾಲಕರಿಗೆ ಅಥವಾ ಏಜೆನ್ಸಿಗೆ 5,000 ರೂಪಾಯಿ ಭಾರಿ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ತುರ್ತು ವೈದ್ಯಕೀಯ ಸೇವೆಯಲ್ಲಿ ಇನ್ಮುಂದೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ನಿಯಮ ಅನ್ವಯವಾಗಲಿದ್ದು ಈ ಬಗ್ಗೆ ಪ್ರಮುಖ ಎಚ್ಚರಿಕೆಗಳನ್ನು ನೀಡಿದೆ.

ಆ್ಯಂಬುಲೆನ್ಸ್ ಸಿಬ್ಬಂದಿಗೆ ರೋಗಿಯಿರುವ ಸ್ಥಳವನ್ನು ತಲುಪಲು 13 ರಿಂದ ಗರಿಷ್ಠ 15 ನಿಮಿಷಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ನಿಗದಿತ ಸಮಯ ಮೀರಿದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಚಾಲಕರ ವಿಳಂಬ ಧೋರಣೆಗೆ ಅವರನ್ನು ನಿಯೋಜಿಸಿರುವ ಆ್ಯಂಬುಲೆನ್ಸ್ ಏಜೆನ್ಸಿಯೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇನ್ನು ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ನೆಪವೊಡ್ಡಿ ಅನಗತ್ಯ ವಿಳಂಬ ಮಾಡಲು ಇನ್ಮುಂದೆ ಅವಕಾಶವಿಲ್ಲ. ಸಮಯ ಪಾಲನೆ ಮಾಡುವುದು ಚಾಲಕರು ಹಾಗೂ ಸೇವಾ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.

ಸಮಯಕ್ಕೆ ಸರಿಯಾಗಿ ಸೇವೆ ಒದಗಿಸಲು ಮತ್ತು ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಸರ್ಕಾರ ಮೂಲಸೌಕರ್ಯ ಬದಲಾವಣೆಗೆ ಮುಂದಾಗಿದೆ. ಪದೇ ಪದೇ ಕೈಕೊಡುವ ಹಾಗೂ ರಸ್ತೆಯಲ್ಲಿ ನಿಧಾನವಾಗಿ ಸಾಗುವ ಹಳೆಯ ಎಲ್ಲಾ 108 ಆ್ಯಂಬುಲೆನ್ಸ್ ವಾಹನಗಳನ್ನು ತಕ್ಷಣವೇ ಗುಜರಿಗೆ ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಹ್ಯಾಂಗ್ ಆಗಲ್ಲ, ಪಾವತಿ ವಿಫಲಗೊಳ್ಳಲ್ಲ,ಇನ್ಮುಂದೆ ರೈಲಿನಲ್ಲಿ ನೀವೇ ಆರಿಸಿಕೊಳ್ಳಿ ನಿಮ್ಮಿಷ್ಟದ ಸೀಟು, ಹೊಸ ವೆಬ್​ಸೈಟ್ ಬಿಡುಗಡೆ ಮಾಡಿದ ಐಆರ್​ಸಿಟಿಸಿ

ಹಳೆಯ ವಾಹನಗಳ ಜಾಗಕ್ಕೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೊಸ ಆ್ಯಂಬುಲೆನ್ಸ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. “ತುರ್ತು ವೈದ್ಯಕೀಯ ಸೇವೆ ಎನ್ನುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅದರಲ್ಲಿ ನಿಮಿಷಗಳ ವಿಳಂಬವೂ ಕೂಡ ಒಂದು ಜೀವಕ್ಕೆ ಕಂಟಕ ತರಬಹುದು. ಹೀಗಾಗಿ ಆ್ಯಂಬುಲೆನ್ಸ್ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಈ ನಿಯಮ ತರಲಾಗಿದೆ. ನಿಗದಿತ ಸಮಯದಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವುದು ನಮ್ಮ ಆದ್ಯತೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Wed, 15 July 26

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ