Karnataka Dam Water Level: ಜಲಾಶಯಗಳಿಗೆ ಒಳಹರಿವು ಏರಿಕೆ, ಜು.9ರ ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ

ಕರ್ನಾಟಕದ ಜಲಾಶಯಗಳ ಜುಲೈ9ರ ನೀರಿನ ಮಟ್ಟ: ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜನರ ಮೊಗದಲ್ಲಿ ಸಂತಸ ಮೂಡಿದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಕೃಪೆ ತೋರಿದ್ದು, ರಾಜ್ಯದ ಜೀವನಾಡಿಗಳಾಗಿರುವ ಪ್ರಮುಖ ಜಲಾಶಯಗಳಿಗೆ ಒಳಹರಿವು ಏರಿಕೆಯಾಗಿದೆ. ಹಾಗಿದ್ದರೇ ಯಾವ ಯಾವ ಡ್ಯಾಂಗಳು ತುಂಬಿವೆ, ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.

Karnataka Dam Water Level: ಜಲಾಶಯಗಳಿಗೆ ಒಳಹರಿವು ಏರಿಕೆ, ಜು.9ರ ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ
ಕಬಿನಿ ಜಲಾಶಯ
Follow us
ವಿವೇಕ ಬಿರಾದಾರ
|

Updated on: Jul 09, 2023 | 6:48 AM

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ (Karnataka Rain) ಅಬ್ಬರ ಜೋರಾಗಿದ್ದು, ಜನರ ಮೊಗದಲ್ಲಿ ಸಂತಸ ಮೂಡಿದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಕೃಪೆ ತೋರಿದ್ದು, ಮುಂಗಾರು ಮಳೆಯಿಂದ (Monsoon) ಕೃಷಿ ಚಟುವಟಿಕೆಗಳು ಜೋರಾಗಿವೆ. ಇನ್ನು ರಾಜ್ಯದ ಜೀವನಾಡಿಗಳಾಗಿರುವ ಪ್ರಮುಖ ಜಲಾಶಯಗಳಿಗೆ ಒಳಹರಿವು ಏರಿಕೆಯಾಗಿದೆ. ಇದರಿಂದ ನದಿ ಪಾತ್ರದ ಜನರು ಖುಷಿಯಾಗಿದ್ದಾರೆ. ಇದರೊಂದಿಗೆ ಇಂದಿನ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ (Karnataka Dam Water Level) ಹೀಗಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಒಟ್ಟು ಸಾಮರ್ಥ್ಯ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್​​) ಹೊರಹರಿವು (ಕ್ಯೂಸೆಕ್ಸ್)
ಕೆಆರ್​ಎಸ್​ ಜಲಾಶಯ (KRS Dam) 38.04 49.45 11.69 42.34 13449 319
ಆಲಮಟ್ಟಿ ಜಲಾಶಯ (Almatti Dam) 519.6 123.08 19.1 63.84 0 584
ತುಂಗಭದ್ರಾ ಜಲಾಶಯ (Tungabhadra Dam) 497.71 105.79 3.08 64.73 274 274
ಮಲಪ್ರಭಾ ಜಲಾಶಯ (Malaprabha Dam) 633.8 37.73 6.82 12.9 0 584
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 17.7 43.23 22,157 0
ಕಬಿನಿ ಜಲಾಶಯ (Kabini Dam) 696.13 19.52 8.88 16.49 16580 500
ಭದ್ರಾ ಜಲಾಶಯ (Bhadra Dam) 657.73 71.54 26.66 49.07 6030 162
ಘಟಪ್ರಭಾ ಜಲಾಶಯ (Ghataprabha Dam) 662.91 51 4.23 8.98 1216 85
ಹೇಮಾವತಿ ಜಲಾಶಯ (Hemavathi Dam) 890.58 37.1 14.73 31.06 7080 200
ವರಾಹಿ ಜಲಾಶಯ (Varahi Dam) 594.36 31.1 3.53 6.43 2725 0
ಹಾರಂಗಿ ಜಲಾಶಯ (Harangi Dam)​​ 871.38 8.5 3.53 6.74 1671 50
ಸೂಫಾ (Supa Dam) 564.33 145.33 31.53 6.43 2725 0